ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದಲ್ಲಿ ಕ್ರಿಕೆಟ್ ವಿಶ್ವಕಪ್ ಹಿನ್ನೆಲೆ: ಐಸಿಸಿ ಬಳಿ ಪಾಕ್ ಕ್ರಿಕೆಟ್ ಮಂಡಳಿ ವಿಶೇಷ ಮನವಿ

Pcb Wants Written Assurance From Bcci Regarding Clearance To Play In Two World Cups In India

ಮುಂದಿನ ಮೂರು ವರ್ಷಗಳ ಅಂತರದಲ್ಲಿ ಭಾರತದಲ್ಲಿ ಎರಡು ವಿಶ್ವಕಪ್‌ ಟೂರ್ನಿಗಳು ನಡೆಯಲಿದೆ. ಆ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಐಸಿಸಿ ಬಳಿ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದೆ. ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮುಖ್ಯಸ್ಥ ವಾಸಿಮ್ ಖಾನ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಭಾರತದಲ್ಲಿ 2021ರಲ್ಲಿ ಟಿ20 ವಿಶ್ವಕಪ್ ಮತ್ತು 2023ರಲ್ಲಿ ಏಕದಿನ ವಿಶ್ವಕಪ್ ಆಯೋಜನೆಯಾಗಲಿದೆ. ಇದಕ್ಕೆ ಪಾಕಿಸ್ತಾನದ ಯಾವ ಆಟಗಾರರಿಗೂ ವೀಸಾದಲ್ಲಿ ಸಮಸ್ಯೆಯಾಗದಂತೆ ಭರವಸೆಯನ್ನು ಲಿಖಿತ ರೂಪದಲ್ಲಿ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದೇವೆ ಎಂದು ವಾಸಿಮ್ ಖಾನ್ ಹೇಳಿದ್ದಾರೆ.

ಇಂಗ್ಲೆಂಡ್‌ನ ಎಲ್ಲಾ ಕ್ರಿಕೆಟಿಗರಿಗೆ ಕೊರೊನಾ ನೆಗೆಟಿವ್, ಸರಣಿಗೆ ಸಿದ್ಧತೆಇಂಗ್ಲೆಂಡ್‌ನ ಎಲ್ಲಾ ಕ್ರಿಕೆಟಿಗರಿಗೆ ಕೊರೊನಾ ನೆಗೆಟಿವ್, ಸರಣಿಗೆ ಸಿದ್ಧತೆ

ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ಮುಂದಿನ ಕೆಲವು ತಿಂಗಳುಗಳಲ್ಲಿ ತಮ್ಮ ಸರ್ಕಾರದಿಂದ ಆಶ್ವಾಸನೆಗಳನ್ನು ಪಡೆಯಲು ಬಿಸಿಸಿಐಗೆ ತಿಳಿಸುವಂತೆ ಪಿಸಿಬಿ ಐಸಿಸಿಯನ್ನು ಕೇಳಿದೆ. ಜೊತೆಗೆ ಮುಂದಿನ ವಿಶ್ವ ಟಿ20 ವಿಶ್ವಕಪ್ಅನ್ನು ಆಸ್ಟ್ರೇಲಿಯಾಲ್ಲಿ ಅಥವಾ ಭಾರತದಲ್ಲಿ ಆಯೋಜಿಸಲಾಗುತ್ತದೆಯೇ ಎಂಬುದನ್ನು ಐಸಿಸಿ ಕಾರ್ಯನಿರ್ವಾಹಕ ಮಂಡಳಿ ತನ್ನ ಮುಂದಿನ ಸಭೆಯಲ್ಲಿ ನಿರ್ಧರಿಸುತ್ತದೆ ಎಂದು ಅಧಿಕಾರಿ ದೃಢಪಡಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ವಾಸಿಮ್ ಖಾನ್ ಅಈ ವರ್ಷ ಟಿ20 ವಿಶ್ವಕಪ್ ನಡೆಯುವ ಸಾಧ್ಯತೆಯಿಲ್ಲ ಎಂದಿದ್ದಾರೆ. "ಈಗಿನ ದೊಡ್ಡ ಪ್ರಶ್ನೆಯೇನೆಂದರೆ 2021ರ ಟಿ20 ವಿಶ್ವಕಪ್ ಎಲ್ಲಿ ನಡೆಯುತ್ತದೆ ಎಂಬುದು. ಅದು ಭಾರತದಲ್ಲಿ ನಡೆಯುತ್ತದೆಯೋ ಅಥವಾ ಆಸ್ಟ್ರೇಲಿಯಾದಲ್ಲಿ ನಡೆಯಲಿದೆಯಾ ಎಂಬುದು. ನನ್ನ ಪ್ರಕಾರ ನಿಗದಿಯಾಗಿರುವಂತೆ ಭಾರತದಲ್ಲೇ ನಡೆದರೆ ಉತ್ತಮ" ಎಂದು ವಾಸಿಮ್ ಖಾನ್ ಹೇಳಿದ್ದಾರೆ.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಿಂದಿಕ್ಕಿದ ಕನ್ನಡಿಗ ರಾಹುಲ್ ದ್ರಾವಿಡ್!ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಿಂದಿಕ್ಕಿದ ಕನ್ನಡಿಗ ರಾಹುಲ್ ದ್ರಾವಿಡ್!

ಇದೇ ಸಂದರ್ಭದಲ್ಲಿ ಪಿಸಿಬು ಮುಖ್ಯಸ್ಥ ವಾಸಿಮ್ ಖಾನ್ ಭಾರತದ ಕ್ರಿಕೆಟ್ ಸಂಸ್ಥೆ ಬಿಸಿಸಿಐ ಜೊತೆಗೆ ಪಿಸಿಬಿ ಉತ್ತಮ ಸಂಬಂಧವನ್ನು ಹೊಂದಿದೆ ಎಂದು ಹೇಳಿದ್ದಾರೆ. ಆದರೆ ನೈಜ ಪರಿಸ್ಥಿತಿ ನಮಗೆ ಅರಿವಿದೆ, ಎರಡು ದೇಶಗಳ ಮಧ್ಯೆ ದ್ವಿಪಕ್ಷೀಯ ಸರಣಿ ಆಯೋಜನೆ ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

Story first published: Thursday, June 25, 2020, 15:18 [IST]
Other articles published on Jun 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X