ಟಿ20 ವಿಶ್ವಕಪ್‌ಗೆ ಆಯ್ಕೆಯಾದ ಬಗ್ಗೆ ಸಂತಸ ವ್ಯಕ್ತಪಡಿಸಿದ ಆರ್ ಅಶ್ವಿನ್

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿದ ಮೊದಲ ನಾಲ್ಕು ಪಂದ್ಯಗಳಲ್ಲಿಯೂ ಆಡುವ ಬಳಗದಲ್ಲಿ ಕಾಣಿಸಿಕೊಳ್ಳದೆ ಅತಿ ಹೆಚ್ಚು ಚರ್ಚೆಗೆ ಒಳಗಾದ ಆಟಗಾರ ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್. ಆದರೆ ಈಗ ಅಚ್ಚರಿಯೆಂಬಂತೆ ಟಿ20 ವಿಶ್ವಕಪ್‌ಗೆ ಆಯ್ಕೆಯಾಗುವ ಮೂಲಕ ಮತ್ತೆ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ಸುದೀರ್ಘ ನಾಲ್ಕು ವರ್ಷಗಳ ನಂತರ ಆರ್ ಅಶ್ವಿನ್ ಟೀಮ್ ಇಂಡಿಯಾ ಟಿ20 ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.

2017ರ ಬಳಿಕ ಮೊದಲ ಬಾರಿಗೆ ಭಾರತೀಯ ಟಿ20 ತಂಡದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿರುವ ಆರ್ ಅಶ್ವಿನ್ ಈ ಆಯ್ಕೆಯ ಬಗ್ಗೆ ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ತನ್ನ ಸಂತಸವನ್ನು ವ್ಯಕ್ತಪಡಿಸಲು "ಸಂತೋಷ ಮತ್ತು ಕೃತಜ್ಞತೆ" ಎಂಬ ಎರಡು ಶಬ್ದಗಳಿಂದ ಮಾತ್ರ ಸಾಧ್ಯ ಎಂದಿದ್ದಾರೆ ಆರ್ ಅಶ್ವಿನ್.

ಟಿ20 ವಿಶ್ವಕಪ್‌: ಟೀಮ್ ಇಂಡಿಯಾದಲ್ಲಿಲ್ಲ ಈ ಪ್ರಮುಖ ಆಟಗಾರರಿಗೆ ಸ್ಥಾನಟಿ20 ವಿಶ್ವಕಪ್‌: ಟೀಮ್ ಇಂಡಿಯಾದಲ್ಲಿಲ್ಲ ಈ ಪ್ರಮುಖ ಆಟಗಾರರಿಗೆ ಸ್ಥಾನ

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಹಂಚಿಕೊಂಡಿರುವ ಆರ್ ಅಶ್ವಿನ್, "ಪ್ರತಿ ಸುರಂಗವು ಅದರ ಅಂತ್ಯದಲ್ಲಿ ಬೆಳಕನ್ನು ಹೊಂದಿರುತ್ತದೆ. ಆದರೆ ಅದರಲ್ಲಿ ನಂಬಿಕೆಯಿರುವವರು ಮಾತ್ರವೇ ಆ ಬೆಳಕನ್ನು ನೋಡಲು ಬದುಕುತ್ತಾರೆ" ಎಂದಿದ್ದಾರೆ ಆರ್ ಅಶ್ವಿನ್. ಬಳಿಕ ಮುಂದುವರಿದು "ಈ ನಾಣ್ಣುಡಿಯನ್ನು ನಾನು ಗೋಡೆಯಲ್ಲಿ ಹಾಕಿಸಿಕೊಳ್ಳುವ ಮುನ್ನ ಸಾವಿರಾರು ಬಾರಿ ನನ್ನ ಡೈರಿಯಲ್ಲಿ ಬರೆದುಕೊಂಡಿದ್ದೇನೆ. ನಾವು ಓದುವ ನಾಣ್ಣುಡಿಗಳು ನಮ್ಮೊಳಗೊರುವ ಶಕ್ತಿಯನ್ನು ಒಗ್ಗೂಡಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ" ಎಂದು ಆರ್ ಅಶ್ವಿನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಸದ್ಯ ಆರ್ ಅಶ್ವಿನ್ ಇಂಗ್ಲೆಂಡ್‌ನಲ್ಲಿ ಭಾರತೀಯ ತಂಡದೊಂದಿ್ಗೆ ಪ್ರವಾಸದಲ್ಲಿದ್ದಾರೆ. ಆದರೆ ಇಂಗ್ಲೆಂಡ್ ವಿರುದ್ಧಧ ಟೆಸ್ಟ್ ಸರಣಿಯ ಮೊದಲ ನಾಲ್ಕು ಪಂದ್ಯಗಳಲ್ಲಿಯೂ ಅಶ್ವಿನ್‌ಗೆ ಆಡುವ ಬಳಗದಲ್ಲಿ ಸ್ಥಾನ ದೊರೆತಿಲ್ಲ. ಆರ್ ಅಶ್ವಿನ್‌ಗೆ ಈ ರೀತಿ ಸ್ಥಾನ ದೊರೆಯದೆ ಇರುವುದು ತಂಡದೊಳಗೆ ಭಿನ್ನಾಭಿಪ್ರಾಯಗಳು ಇವೆ ಎಂಬಂತಾ ಮಾತುಗಳಿಗೆ ಕಾರಣವಾಗಿತ್ತು. ಆದರೆಬುಧವಾರ ನಡೆದ ಟೀಮ್ ಇಂಡಿಯಾದ ಈ ಆಯ್ಕೆಯ ಕಾರಣದಿಂದಾಗಿ ಈ ಗಾಳಿಸುದ್ದಿಗಳಿಗೆ ಮಾನ್ಯತೆಯಿಲ್ಲದಂತಾಗಿದೆ.

Ashwin ತಂಡಕ್ಕೆ ವಾಪಸ್ ಆಗಲು ಅಸಲಿ ಕಾರಣ ಏನು | Oneindia Kannada

ಆರ್ ಅಶ್ವಿನ್ ಕೊನೆಯ ಬಾರಿಗೆ 2017ರ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಸೀಮಿತ ಓವರ್‌ಗಳ ತಂಡದಲ್ಲಿ ಕಾಣಿಸಿಕೊಂಡಿದ್ದರು. 34ರ ಹರೆಯದ ಅನುಭವಿ ಬೌಲರ್ 46 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾಗವಹಿಸಿದ್ದು 56 ವಿಕೆಟ್ ಪಡೆದುಕೊಂಡಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Thursday, September 9, 2021, 9:44 [IST]
Other articles published on Sep 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X