ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಕರ್ಷಕ ಶಾಟ್‌ನ ವೀಡಿಯೋ ಹಂಚಿಕೊಂಡ ಅಫ್ಘಾನ್‌ ಸ್ಟಾರ್ ರಶೀದ್ ಖಾನ್

Rashid Khan plays an extravagant shot, asks fans - ‘Do you call it helicopter

ಬೆಂಗಳೂರು, ಮಾರ್ಚ್ 3: ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಪ್ರಮುಖಾಕರ್ಷಣೆಯಾಗಲಿರುವ ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್‌) ಆಲ್ ರೌಂಡರ್ ರಶೀದ್ ಖಾನ್ ಆಕರ್ಷಕ ಶಾಟ್‌ನ ವೀಡಿಯೋವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರಣಜಿ: ಸೆಮಿಫೈನಲ್‌ನಲ್ಲಿ ಬಂಗಾಳಕ್ಕೆ ಮಣಿದು ಹೋರಾಟ ಅಂತ್ಯಗೊಳಿಸಿದ ಕರ್ನಾಟಕರಣಜಿ: ಸೆಮಿಫೈನಲ್‌ನಲ್ಲಿ ಬಂಗಾಳಕ್ಕೆ ಮಣಿದು ಹೋರಾಟ ಅಂತ್ಯಗೊಳಿಸಿದ ಕರ್ನಾಟಕ

ಕೆಳ ಬ್ಯಾಟಿಂಗ್ ಕ್ರಮಾಂಕದಲ್ಲಿ ಬರುವ ರಶೀದ್ ಖಾನ್, ಭರ್ಜರಿ ಹೊಡೆತಗಳನ್ನು ಕೊಡಬಲ್ಲ ದಾಂಡಿಗನೂ ಹೌದು. ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ಪರ ಆಡುವ ರಶೀದ್, ಬಿಬಿಎಲ್‌ ಪಂದ್ಯವೊಂದರಲ್ಲಿ ಆಡುತ್ತಿದ್ದಾಗಿನ ವೀಡಿಯೋವನ್ನು ಸೋಮವಾರ (ಮಾರ್ಚ್ 2) ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಸೋಲಿಗೆ ರಿಷಭ್ ಪಂತ್ ಕಾರಣವೆ?!ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಸೋಲಿಗೆ ರಿಷಭ್ ಪಂತ್ ಕಾರಣವೆ?!

ವೀಡಿಯೋದ ಜೊತೆಗೆ ರಶೀದ್, 'ನೀವಿದನ್ನು ಹೆಲಿಕಾಪ್ಟರ್ ಶಾಟ್ ಅಂತ ಕರೆಯುತ್ತೀರಾ? ನನಗೂ ಹಾಗೇ ಅನ್ನಿಸುತ್ತಿದೆ..,' ಎಂದು ಸಾಲೊಂದನ್ನೂ ಬರೆದುಕೊಂಡಿದ್ದಾರೆ. ರಶೀದ್ ಪ್ರಯತ್ನಿಸಿರುವ ಈ ಶಾಟ್ ಅಸಲಿಗೆ ಎಂಎಸ್ ಧೋನಿಯಿಂದ ಬಹಳ ಫೇಮಸ್. ಹೆಲಿಕಾಪ್ಟರ್ ಶಾಟ್ ಎಂದು ಕರೆಯಲಾಗುವ ಈ ಶಾಟ್ ಜನಪ್ರಿಯಗೊಂಡಿದ್ದು ಭಾರತದ ಮಾಜಿ ನಾಯಕ ಧೋನಿಯಿಂದ.

ಮಾರ್ಚ್ 29ರಿಂದ ಆರಂಭಗೊಳ್ಳಲಿರುವ ಐಪಿಎಲ್‌ಗೆ ಇನ್ನು ಮೂರು ವಾರಗಳು ಬಾಕಿ ಉಳಿದಿದೆ. ಎಲ್ಲಾ ಫ್ರಾಂಚೈಸಿಗಳು ಟೂರ್ನಿಗಾಗಿ ತರಬೇತಿ ಶುರು ಮಾಡುವುದರಲ್ಲಿವೆ. ಎಸ್‌ಆರ್‌ಎಚ್‌ ಕೂಡ ಉತ್ತಮ ಪ್ರದರ್ಶನ ನೀಡುವ ಯೋಜನೆ ಹಾಕಿಕೊಂಡಿದೆ.

ತಲೈವಾ ಎಂಎಸ್ ಧೋನಿಗೆ ಚೆನ್ನೈಯಲ್ಲಿ ಅದ್ದೂರಿ ಸ್ವಾಗತ: ವೀಡಿಯೋತಲೈವಾ ಎಂಎಸ್ ಧೋನಿಗೆ ಚೆನ್ನೈಯಲ್ಲಿ ಅದ್ದೂರಿ ಸ್ವಾಗತ: ವೀಡಿಯೋ

ಭಾರತ 19 ತಂಡದ ನಾಯಕ ಪ್ರಿಯಾಮ್ ಗರ್ಗ್, ವೆಸ್ಟ್ ಇಂಡೀಸ್‌ನ ಫ್ಯಾಬಿಯನ್ ಅಲೆನ್, ಆಸ್ಟ್ರೇಲಿಯಾದ ಶಾನ್ ಮಾರ್ಷ್ ಅವರಂತ ಆಟಗಾರರು ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಡೇವಿಡ್ ವಾರ್ನರ್ ನಾಯಕತ್ವದ ಎಚ್‌ಆರ್‌ಎಚ್ ಪಾಲಾಗಿದ್ದರು.

Story first published: Tuesday, March 3, 2020, 15:39 [IST]
Other articles published on Mar 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X