ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಣಜಿ ಪಂದ್ಯವನ್ನಾಡಲು ಚೆನ್ನೈ ತಲುಪಿದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ

Ravindra Jadeja Has Reached Chennai To Play In The Ranji Trophy

ಭಾರತದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಚೆನ್ನೈಗೆ ತಲುಪಿದ್ದಾರೆ. ಮಂಗಳವಾರದಿಂದ ಆರಂಭವಾಗಲಿರುವ ಸೌರಾಷ್ಟ್ರ ತಮಿಳುನಾಡು ನಡುವಿನ ಪಂದ್ಯದಲ್ಲಿ ಆಲ್‌ರೌಂಡರ್ ಜಡೇಜಾ ಕಣಕ್ಕಿಳಿಯುವುದು ಖಚಿತವಾಗಿದೆ.

ಚೆನ್ನೈನಲ್ಲಿ ಸೌರಾಷ್ಟ್ರ ತಮಿಳುನಾಡು ರಣಜಿ ಪಂದ್ಯ ನಡೆಯಲಿದ್ದು, ಭಾನುವಾರ ಚೆನ್ನೈ ತಲುಪಿರುವ ಎಡಗೈ ಆಲ್‌ರೌಂಡರ್ ತಂಡವನ್ನು ಸೇರಿಕೊಂಡಿದ್ದಾರೆ. ರವೀಂದ್ರ ಜಡೇಜಾ ತಮ್ಮ ಫಿಟ್‌ನೆಸ್ ಸಾಬೀತು ಪಡಿಸಲು ಈ ಪಂದ್ಯ ಪರೀಕ್ಷೆಯಾಗಿದೆ. 2018ರ ನಂತರ ಇದೇ ಮೊದಲ ಬಾರಿಗೆ ಜಡೇಜಾ ರಣಜಿ ಪಂದ್ಯದಲ್ಲಿ ಆಡಲಿದ್ದು, ಸೌರಾಷ್ಟ್ರ ಪರವಾಗಿ ಕಣಕ್ಕಿಳಿಯುತ್ತಿದ್ದಾರೆ.

ಆತ ಎಲ್ಲಾ ಪಿಚ್‌ಗಳಲ್ಲೂ ಉತ್ತಮ ಬೌಲಿಂಗ್ ಮಾಡುತ್ತಿದ್ದಾನೆ: ಭಾರತದ ವೇಗಿ ಬಗ್ಗೆ ಪಾಕಿಸ್ತಾನ ಮಾಜಿ ಕ್ರಿಕೆಟಿಗನ ಶ್ಲಾಘನೆಆತ ಎಲ್ಲಾ ಪಿಚ್‌ಗಳಲ್ಲೂ ಉತ್ತಮ ಬೌಲಿಂಗ್ ಮಾಡುತ್ತಿದ್ದಾನೆ: ಭಾರತದ ವೇಗಿ ಬಗ್ಗೆ ಪಾಕಿಸ್ತಾನ ಮಾಜಿ ಕ್ರಿಕೆಟಿಗನ ಶ್ಲಾಘನೆ

ಭಾರತ ಆಸ್ಟ್ರೇಲಿಯಾ ನಡುವಿನ ಪ್ರತಿಷ್ಟಿತ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗಾಗಿ ರವೀಂದ್ರ ಜಡೇಜಾ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದರೆ, ಅವರು ತಂಡದಲ್ಲಿ ಆಡಬೇಕಾದರೆ ತಮ್ಮ ಫಿಟ್‌ನೆಸ್ ಸಾಬೀತು ಪಡಿಸಬೇಕಿದೆ. ಅದಕ್ಕಾಗಿ ಜಡೇಜಾ ರಣಜಿ ಟ್ರೋಫಿ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ.

ರವೀಂದ್ರ ಜಡೇಜಾ ಸೌರಾಷ್ಟ್ರ ತಂಡವನ್ನು ಸೇರಿಕೊಂಡಿರುವುದಾಗಿ ಸೌರಾಷ್ಟ್ರ ತಂಡದ ಕೋಚ್ ನೀರಜ್ ಒಡೆದ್ರಾ ಅದೇ ರೀತಿ ದೃಢಪಡಿಸಿದರು ಅವರು ತಂಡಕ್ಕೆ ಸೇರ್ಪಡೆಯಾಗಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಅವರು ಹೇಳಿದ್ದಾರೆ. ಸದ್ಯ ಎಲ್ಲರ ಗಮನ ಈ ಪಂದ್ಯದ ಮೇಲೆ ನೆಟ್ಟಿದೆ, ರವೀಂದ್ರ ಜಡೇಜಾ ತಮ್ಮ ಮರಳುವಿಕೆ ಬಗ್ಗೆ ಈ ಪಂದ್ಯದಲ್ಲಿ ಸ್ಪಷ್ಟ ಮುನ್ಸೂಚನೆ ನೀಡಲಿದ್ದಾರೆ.

ಕೆಎಲ್ ರಾಹುಲ್- ಅಥಿಯಾ ಶೆಟ್ಟಿ ಮದುವೆಗೆ ಬರುವ ಅತಿಥಿಗಳಿಗೆ ಈ ಷರತ್ತು ಕಡ್ಡಾಯಕೆಎಲ್ ರಾಹುಲ್- ಅಥಿಯಾ ಶೆಟ್ಟಿ ಮದುವೆಗೆ ಬರುವ ಅತಿಥಿಗಳಿಗೆ ಈ ಷರತ್ತು ಕಡ್ಡಾಯ

ಎನ್‌ಸಿಯ ನಿಯಮಗಳಂತೆ ಕೆಲಸದ ಹೊರೆ

ಎನ್‌ಸಿಯ ನಿಯಮಗಳಂತೆ ಕೆಲಸದ ಹೊರೆ

ರವೀಂದ್ರ ಜಡೇಜಾ ರಣಜಿಯಲ್ಲಿ ಆಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಕೋಚ್ ನೀರಜ್ ಒಡೆದ್ರಾ, "ತರಬೇತಿ ಮತ್ತು ಕೆಲಸದ ಹೊರೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಪ್ರೋಟೋಕಾಲ್‌ಗಳ ಪ್ರಕಾರ ಇರುತ್ತದೆ" ಎಂದು ಹೇಳಿದರು.

"ರವೀಂದ್ರ ಜಡೇಜಾ ತಂಡಕ್ಕೆ ಮರಳುತ್ತಿರುವುದು ತಂಡದ ಆಟಗಾರರ ಉತ್ಸಾಹ ಹೆಚ್ಚಿಸಿದೆ. ಈ ಬಗ್ಗೆ ನಾನು ರವೀಂದ್ರ ಜಡೇಜಾಗೆ ವಾಟ್ಸಾಪ್ ಮಾಡಿದೆ, ಅವರು ಕೂಡ ತಂಡವನ್ನು ಸೇರಿಕೊಳ್ಳಲು ಕಾತರನಾಗಿದ್ದೇನೆ" ಎಂದು ಪ್ರತ್ಯುತ್ತರ ನೀಡಿದರು ಎಂದು ಹೇಳಿದರು.

ಏಷ್ಯಾಕಪ್ ವೇಳೆ ಮೊಣಕಾಲಿಗೆ ಗಾಯ

ಏಷ್ಯಾಕಪ್ ವೇಳೆ ಮೊಣಕಾಲಿಗೆ ಗಾಯ

ಯುಎಇಯಲ್ಲಿ ನಡೆದ ಏಷ್ಯಾ ಕಪ್ 2022 ರ ಸಂದರ್ಭದಲ್ಲಿ ರವೀಂದ್ರ ಜಡೇಜಾ ಮೊಣಕಾಲು ಗಾಯಕ್ಕೆ ತುತ್ತಾಗಿದ್ದರು. ನಂತರ ಶಸ್ತ್ರಚಿಕಿತ್ಸೆಗೆ ಒಳಗಾದ ಅವರು ದೀರ್ಘ ವಿಶ್ರಾಂತಿ ಪಡೆದುಕೊಂಡಿದ್ದಾರೆ. 2022ರ ಟಿ20 ವಿಶ್ವಕಪ್‌ ಕೂಡ ತಪ್ಪಿಸಿಕೊಂಡ ಅವರು 2022ರ ನವೆಂಬರ್ ಡಿಸೆಂಬರ್ ತಿಂಗಳಿನಲ್ಲಿ ನಡೆದ ಏಕದಿನ ಮತ್ತು ಟೆಸ್ಟ್ ಸರಣಿಗೆ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ, ಆ ಸಂದರ್ಭದಲ್ಲಿ ಸಂಪೂರ್ಣವಾಗಿ ಫಿಟ್ ಆಗದ ಕಾರಣ ತಂಡದಿಂದ ಹೊರಗುಳಿದರು.

ಫೆಬ್ರವರಿ 9 ರಿಂದ ಆರಂಭವಾಗಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಜಡೇಜಾ ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಜಡೇಜಾ ಅತ್ಯುತ್ತಮ ದಾಖಲೆ ಹೊಂದಿದ್ದಾರೆ.

60 ಟೆಸ್ಟ್ ಪಂದ್ಯಗಳನ್ನಾಡಿರುವ ಜಡೇಜಾ 34.71 ಸರಾಸರಿಯಲ್ಲಿ 242 ವಿಕೆಟ್‌ಗಳನ್ನು ಪಡೆದಿದ್ದಾರೆ. ಮೂರು ಶತಕ ಸೇರಿದಂತೆ 36.57 ಸರಾಸರಿಯಲ್ಲಿ 2523 ರನ್ ಗಳಿಸಿದ್ದಾರೆ.

4 ಟೆಸ್ಟ್ ಪಂದ್ಯದಲ್ಲಿ 25 ವಿಕೆಟ್

4 ಟೆಸ್ಟ್ ಪಂದ್ಯದಲ್ಲಿ 25 ವಿಕೆಟ್

ರವೀಂದ್ರ ಜಡೇಜಾ ಆಸ್ಟ್ರೇಲಿಯಾ ವಿರುದ್ಧ ಕೂಡ ಉತ್ತಮ ಪ್ರದರ್ಶನ ನೀಡಿದ ದಾಖಲೆ ಹೊಂದಿದ್ದಾರೆ. 2016-17ರಲ್ಲಿ ಆಸ್ಟ್ರೇಲಿಯಾ ಭಾರತಕ್ಕೆ ಪ್ರವಾಸ ಕೈಗೊಂಡಾಗ ಜಡೇಜಾ ಉತ್ತಮ ಪ್ರದರ್ಶನ ನೀಡಿದ್ದರು. ಭಾರತ ಸರಣಿ ಗೆಲ್ಲುವಲ್ಲಿ ಜಡೇಜಾ ಮಹತ್ವದ ಪಾತ್ರ ವಹಿಸಿದ್ದರು.

4 ಪಂದ್ಯಗಳ ಸರಣಿಯಲ್ಲಿ 18.56 ಸರಾಸರಿಯಲ್ಲಿ 25 ವಿಕೆಟ್ ಪಡೆದು ಮಿಂಚಿದ್ದರು. ಆರು ಇನ್ನಿಂಗ್ಸ್‌ಗಳಲ್ಲಿ 25.40 ಸರಾಸರಿಯಲ್ಲಿ ಎರಡು ಅರ್ಧಶತಕ ಸೇರಿದಂತೆ 127 ರನ್ ಗಳಿಸಿದ್ದರು. ಅವರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನಕ್ಕಾಗಿ ಸರಣಿ ಆಟಗಾರ ಪ್ರಶಸ್ತಿ ಪಡೆದಿದ್ದರು.

2044ರ ನಂತರ ಭಾರತದಲ್ಲಿ ಆಸ್ಟ್ರೇಲಿಯಾ ಟೆಸ್ಟ್ ಸರಣಿ ಗೆದ್ದಿಲ್ಲ. ಸರಣಿ ಗೆಲ್ಲುವ ಉದ್ದೇಶದೊಂದಿಗೆ ಈ ಬಾರಿ ಬಲಿಷ್ಟ ತಂಡದೊಂದಿಗೆ ಭಾರತಕ್ಕೆ ಬರುತ್ತಿದೆ. ಜನವರಿ 31ರಂದು ಆಸ್ಟ್ರೇಲಿಯಾ ತಂಡ ಭಾರತಕ್ಕೆ ಆಗಮಿಸಲಿದೆ.

Story first published: Sunday, January 22, 2023, 17:57 [IST]
Other articles published on Jan 22, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X