ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

BGT 2023: ಫೆಬ್ರವರಿ 1ರಂದು ರವೀಂದ್ರ ಜಡೇಜಾಗೆ ಫಿಟ್‌ನೆಸ್ ಪರೀಕ್ಷೆ: ಪಾಸಾದರೆ ಮಾತ್ರ ಟೆಸ್ಟ್ ತಂಡದಲ್ಲಿ ಸ್ಥಾನ

Ravindra Jadeja Will Going To Take Fitness Test On February 1st At NCA

ಭಾರತದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಎನ್‌ಸಿಎಗೆ ವರದಿ ಮಾಡಿದ್ದು, ಫೆಬ್ರವರಿ 1ರಂದು ಫಿಟ್‌ನೆಸ್‌ ಪರೀಕ್ಷೆಯನ್ನು ತೆಗೆದುಕೊಳ್ಳಲಿದ್ದಾರೆ. ಈ ಫಿಟ್‌ನೆಸ್‌ ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ಅವರು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಲಿದ್ದಾರೆ.

2022ರಲ್ಲಿ ನಡೆದ ಏಷ್ಯಾಕಪ್‌ ಟೂರ್ನಿಯ ಸಂದರ್ಭದಲ್ಲಿ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದ ರವೀಂದ್ರ ಜಡೇಜಾ ಸುಮಾರು 6 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರವಿರಬೇಕಾಯಿತು. ಸಂಪೂರ್ಣವಾಗಿ ಫಿಟ್ ಆದ ಬಳಿಕ ಅವರು ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ.

ಅರ್ಶ್‌ದೀಪ್ 'ನೋಬಾಲ್' ಎಸೆಯಲು ಕಾರಣ ವಿವರಿಸಿದ ಮೊಹಮ್ಮದ್ ಕೈಫ್ಅರ್ಶ್‌ದೀಪ್ 'ನೋಬಾಲ್' ಎಸೆಯಲು ಕಾರಣ ವಿವರಿಸಿದ ಮೊಹಮ್ಮದ್ ಕೈಫ್

ತಮ್ಮ ಫಿಟ್‌ನೆಸ್‌ ಸಾಬೀತುಪಡಿಸುವ ಸಲುವಾಗಿ ರಣಜಿ ಪಂದ್ಯದಲ್ಲಿ ಕೂಡ ಆಡಿದ್ದರು. ಸೌರಾಷ್ಟ್ರ ನಾಯಕತ್ವ ವಹಿಸಿಕೊಂಡಿದ್ದ ಜಡೇಜಾ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ 8 ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. ಪಂದ್ಯದಲ್ಲಿ ಸುದೀರ್ಘ ಬೌಲಿಂಗ್ ಮಾಡುವ ಮೂಲಕ ಅವರು ಫಿಟ್‌ ಆಗಿರುವ ಮುನ್ಸೂಚನೆ ನೀಡಿದ್ದಾರೆ.

ಈಗಾಗಲೇ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿರುವ ರವೀಂದ್ರ ಜಡೇಜಾ ಫಿಟ್‌ನೆಸ್ ಮೇಲೆ ಕೆಲಸ ಮಾಡುತ್ತಿದ್ದಾರೆ. ಫೆಬ್ರವರಿ 1 ರಂದು ಫಿಟ್‌ನೆಸ್ ಪರೀಕ್ಷೆ ನಡೆಯಲಿದ್ದು, ಅದರಲ್ಲಿ ಪಾಸಾದ ಬಳಿಕ ಅವರು ನಾಗ್ಪುರದಲ್ಲಿ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ.

Ravindra Jadeja Will Going To Take Fitness Test On February 1st At NCA

ರವೀಂದ್ರ ಜಡೇಜಾ ಸಂಪೂರ್ಣ ಫಿಟ್ ಆಗಿಲ್ಲ

ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಂಡಕ್ಕೆ ಆಸರೆಯಾಗುವ ರವೀಂದ್ರ ಜಡೇಜಾ ಸಂಪೂರ್ಣವಾಗಿ ಫಿಟ್‌ ಆಗಲು ಇನ್ನೂ ಹೋರಾಟ ಮಾಡುತ್ತಿದ್ದಾರೆ. ರಣಜಿ ಟ್ರೋಫಿಯ ಸಮಯದಲ್ಲಿ ತಾನಿನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ, 80 ಪ್ರತಿಶತ ಮಾತ್ರ ಫಿಟ್ ಆಗಿದ್ದೇನೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

ಅವರ ಮೇಲೆ ಕೆಲಸದ ಹೊರೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ರಣಜಿ ಪಂದ್ಯದ ವೇಳೆ ಹಲವು ಸೆಷನ್‌ಗಳನ್ನು ಕಡಿಮೆ ಮಾಡಲಾಯಿತು. ಜಡೇಜಾ ಫಿಟ್‌ನೆಸ್ ಬಗ್ಗೆ ಬಿಸಿಸಿಐ ವರದಿ ಕೇಳಿದೆ.

Ravindra Jadeja Will Going To Take Fitness Test On February 1st At NCA

ವರದಿ ಪರಿಶೀಲನೆ ಬಳಿಕ ನಿರ್ಧಾರ

ಎನ್‌ಸಿಎ ರವೀಂದ್ರ ಜಡೇಜಾರ ಫಿಟ್‌ನೆಸ್ ಪರೀಕ್ಷೆ ನಡೆಸಿ ವರದಿ ನೀಡಲಿದ್ದು, ವರದಿಯನ್ನು ಪರೀಶಿಲಿಸಿದ ನಂತರವೇ ಅವರನ್ನು ತಂಡದಲ್ಲಿ ಆಡಿಸುವ ಬಗ್ಗೆ ಆಯ್ಕೆದಾರರ ಸಮಿತಿ ನಿರ್ಧಾರ ಮಾಡಲಿದೆ.

"ಆರಂಭಿಕ ಫಿಟ್‌ನೆಸ್ ಪರೀಕ್ಷೆಯಲ್ಲಿ ರವೀಂದ್ರ ಜಡೇಜಾ ಉತ್ತೀರ್ಣರಾಗಿದ್ದರು. ಆದರೆ, ಅವರು ಗಾಯಗೊಂಡಿರುವ ಇತಿಹಾಸವನ್ನು ಪರಿಗಣಿಸಿ ಅವರನ್ನು ದೂರ ಇಡಲಾಗಿತ್ತು. ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿ ವೇಳೆ 100 ಪ್ರತಿಶತ ಫಿಟ್ ಆಗಿಲ್ಲ ಎಂದು ಎನ್‌ಸಿಎ ನಂಬಿದ್ದರಿಂದ ಅವರನ್ನು ತಂಡಕ್ಕೆ ಆಯ್ಕೆ ಮಾಡಿರಲಿಲ್ಲ."

ಟೆಸ್ಟ್ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್. ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊ. ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕಟ್, ಸೂರ್ಯಕುಮಾರ್ ಯಾದವ್.

Story first published: Saturday, January 28, 2023, 20:01 [IST]
Other articles published on Jan 28, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X