ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಬಾರಿ ಟಿ20 ವಿಶ್ವಕಪ್‌ ಗೆಲ್ಲುವ ತಂಡ ಹೆಸರಿಸಿದ ರಿಕಿ ಪಾಂಟಿಂಗ್

Ricky Ponting lauds youngster, says this team can win T20 World Cup

ಸಿಡ್ನಿ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟ್ರೋಫಿಗಳಲ್ಲಿ ಟಿ20 ವಿಶ್ವಕಪ್‌ ಒಂದನ್ನೇ ಆಸ್ಟ್ರೇಲಿಯಾ ಗೆದ್ದಿಲ್ಲ. ಉಳಿದೆಲ್ಲಾ ಪ್ರಮುಖ ಟ್ರೋಫಿಗಳನ್ನು ಐಸಿಸಿ ಜಯಿಸಿದೆ. ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಐದು ಬಾರಿ ವಿಶ್ವ ಚಾಂಪಿಯನ್ಸ್ ಎನಿಸಿದೆ. 2009ರಲ್ಲಿ ಚಾಂಪಿಯನ್ಸ್ ಟ್ರೋಫಿ ಕೂಡ ಗೆದ್ದಿತ್ತು. ಆದರೆ ಟಿ20 ವಿಶ್ವಕಪ್‌ ಮಾತ್ರ ಕಾಂಗರೂ ನಾಡಿಗೆ ಒಲಿದಿಲ್ಲ. 2007ರಲ್ಲಿ ಟಿ20 ವಿಶ್ವಕಪ್‌ ಆರಂಭಗೊಂಡು ಇಷ್ಟು ದಿನಗಳಾಗಿದ್ದರೂ ಆಸೀಸ್‌ಗೆ ಟಿ20 ವಿಶ್ವಕಪ್‌ ಒಲಿಯದಿರುವುದು ಬೇಸರ ತಂದಿದೆ.

ಅನಿಲ್ ಕುಂಬ್ಳೆಯಲ್ಲ, ರಾಹುಲ್ ದ್ರಾವಿಡ್ ಅಲ್ಲ, ಭಾರತೀಯ ಕ್ರಿಕೆಟ್‌ನಲ್ಲಿ ಅತೀ ವಿದ್ಯಾವಂತ ಕ್ರಿಕೆಟರ್ ಯಾರು ಗೊತ್ತಾ?!ಅನಿಲ್ ಕುಂಬ್ಳೆಯಲ್ಲ, ರಾಹುಲ್ ದ್ರಾವಿಡ್ ಅಲ್ಲ, ಭಾರತೀಯ ಕ್ರಿಕೆಟ್‌ನಲ್ಲಿ ಅತೀ ವಿದ್ಯಾವಂತ ಕ್ರಿಕೆಟರ್ ಯಾರು ಗೊತ್ತಾ?!

ಮುಂದೆ ಅಕ್ಟೋಬರ್‌-ನವೆಂಬರ್‌ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ಚಾಂಪಿಯನ್ಸ್ ಆಗಲಿದೆ ಎಂದು ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್‌ ಹೇಳಿದ್ದಾರೆ. ವಿಶ್ವಕಪ್‌ಗೆ ಸಂಬಂಧಿಸಿ ಆಸ್ಟ್ರೇಲಿಯಾ ತಂಡ ಪ್ರಕಟಗೊಂಡಿದ್ದು ಇದರ ಬಗ್ಗೆಯೂ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಯುವ ಬ್ಯಾಟ್ಸ್‌ಮನ್‌ ಜೋಶ್ ಇಂಗ್ಲಿಸ್‌ಗೆ ಸ್ಥಾನ

ಯುವ ಬ್ಯಾಟ್ಸ್‌ಮನ್‌ ಜೋಶ್ ಇಂಗ್ಲಿಸ್‌ಗೆ ಸ್ಥಾನ

ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಸದ್ಯ ಟಿ20ಐ ವಿಶ್ವ ರ್‍ಯಾಂಕಿಂಗ್‌ನಲ್ಲಿ 6ನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ ವಿರುದ್ಧ 4-1ರ ಸರಣಿ ಸೋಲಿನೊಂದಿಗೆ ಆಸೀಸ್ ರ್‍ಯಾಂಕಿಂಗ್‌ನಲ್ಲಿ ಕುಸಿತ ಕಂಡಿತ್ತು. ಟಿ20 ವಿಶ್ವಕಪ್‌ಗೆ ಸಂಬಂಧಿಸಿ ಆಸ್ಟ್ರೇಲಿಯಾ ಅಷ್ಟು ಬಲಿಷ್ಠವಿದ್ದಂತೆಯಿಲ್ಲ. ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಕೂಡ ಕೊಂಚ ಒತ್ತಡದಲ್ಲಿದ್ದಂತೆ ಕಾಣುತ್ತಿದೆ. ಅಷ್ಟೇ ಅಲ್ಲ, ತಂಡದ ಪ್ರಮುಖ ಆಟಗಾರರಾದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಮತ್ತು ನಾಯಕ ಆ್ಯರನ್ ಫಿಂಚ್ ಕೂಡ ಈ ವರ್ಷ ಗಮನಾರ್ಹ ಫಾರ್ಮ್‌ ತೋರಿಸಿಲ್ಲ. ಮೇಲಾಗಿ ಈ ಮೂರೂ ಪ್ರಮುಖ ಬ್ಯಾಟ್ಸ್‌ಮನ್‌ಗಳು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸ್ಮಿತ್ ಮೊಣಕೈ ಗಾಯಕ್ಕೀಡಾಗಿ ಸದ್ಯ ಚೇತರಿಕೊಳ್ಳುತ್ತಿದ್ದರೆ, ಫಿಂಚ್ ಮೊಣಕಾಲು ಗಾಯಕ್ಕೀಡಾಗಿದ್ದಾರೆ. ವಾರ್ನರ್ ತೊಡೆ ಭಾಗದಲ್ಲಿ ನೋವಿನಿಂದಾಗಿ ಹಿಂದೆ ಒಂದಿಷ್ಟು ಪಂದ್ಯಗಳಿಂದ ಆಸೀಸ್ ತಂಡದಿಂದ ಹೊರಗಿದ್ದರು. ಇಷ್ಟಾಗಿಯೂ ಪಾಂಟಿಂಗ್‌ ವಿಶ್ವಕಪ್‌ ನೆಲೆಯಲ್ಲಿ ಆಸೀಸ್ ತಂಡದ ಬಗ್ಗೆ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಇಂಗ್ಲಿಸ್

ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಇಂಗ್ಲಿಸ್

"ಆಸ್ಟ್ರೇಲಿಯಾ ವಿಶ್ವಕಪ್‌ ತಂಡದಲ್ಲಿ ಜೋಶ್ ಇಂಗ್ಲಿಸ್ ಅವರನ್ನು ನೋಡಲು ಖುಷಿಯಾಗುತ್ತದೆ. ಅವರು ಖುಷಿಗಾಗಿ ರನ್ ಗಳಿಸುವ ಆಟಗಾರ. ವಿಶ್ವಕಪ್‌ನಲ್ಲಿ ಇಂಗ್ಲಿಸ್ ಪ್ಲೇಯಿಂಗ್ XIನಲ್ಲಿ ಕಾಣಿಸಿಕೊಂಡರೆ ಅದೊಂದು ಸ್ಫೂರ್ತಿದಾಯಕ ಕತೆಯಾಗಲಿದೆ. ಒಟ್ಟಾರೆ ಹೇಳೋದಾದ್ರೆ ಆಸ್ಟ್ರೇಲಿಯಾ ವಿಶ್ವಕಪ್‌ ತಂಡ ಚೆನ್ನಾಗಿದೆ. ವಿಶ್ವಕಪ್‌ ಗೆಲ್ಲಲು ಬೇಕಾದ ಚತುರ ತಂಡ ಇಲ್ಲಿದೆ," ಎಂದು ಪಾಂಟಿಂಗ್‌ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಆಸ್ಟ್ರೇಲಿಯಾದ ಟಿ20 ಬ್ಲಾಸ್ಟ್‌ ಅಥವಾ ವೆಲಾಸಿಟಿ ಬ್ಲಾಸ್ಟ್ ಕ್ರಿಕೆಟ್ ಟೂರ್ನಿಯಲ್ಲಿ ಲೀಸೆಸ್ಟರ್‌ಶೈರ್ ಪರ ಆಡಿದ್ದ ಇಂಗ್ಲಿಸ್ 14 ಇನ್ನಿಂಗ್ಸ್‌ಗಳಲ್ಲಿ 48.27ರ ಸರಾಸರಿಯಲ್ಲಿ 175.82ರ ಸ್ಟ್ರೈಕ್‌ ರೇಟ್‌ನಂತೆ 531 ರನ್ ಗಳಿಸಿದ್ದರು. ಇದರಲ್ಲಿ ವೋರ್ಸೆಸ್ಟರ್‌ಶೈರ್ ವಿರುದ್ಧ ಬಾರಿಸಿದ್ದ ಅಜೇಯ 118 ರನ್ ಕೂಡ ಇದರಲ್ಲಿ ಸೇರಿತ್ತು.

KCA ನಿಂದ ರಣಜಿ ಆಟಗಾರನಿಗೆ ಅವಮಾನ ! | Oneindia Kannada
ಟಿ20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡ

ಟಿ20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡ

ಟಿ20 ವಿಶ್ವಕಪ್ ಏಳನೇ ಆವೃತ್ತಿ ಅಸಲಿಗೆ ಭಾರತದಲ್ಲಿ ನಡೆಯುವುದರಲ್ಲಿತ್ತು. ಆದರೆ ಕೋವಿಡ್ ಭೀತಿಯಿಂದಾಗಿ ಟೂರ್ನಿ ಭಾರತಕ್ಕೆ ಬದಲಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸ್ಥಳಾಂತರಗೊಂಡಿದೆ. ಅಕ್ಟೋಬರ್‌ 17ರಿಂದ ಯುಎಇ ಮತ್ತು ಓಮನ್‌ನಲ್ಲಿ ಟಿ20 ವಿಶ್ವಕಪ್‌ ಟೂರ್ನಿ ಆರಂಭಗೊಳ್ಳಲಿದೆ.
ಆಸ್ಟ್ರೇಲಿಯಾ ತಂಡ: ಆ್ಯಷ್ಟನ್ ಅಗರ್, ಪ್ಯಾಟ್ ಕಮಿನ್ಸ್ (ಉಪ ನಾಯಕ), ಆ್ಯರನ್ ಫಿಂಚ್ (ನಾಯಕ), ಜೋಶ್ ಹ್ಯಾಝಲ್ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೋಯ್ನಿಸ್, ಮಿಚೆಲ್ ಸ್ವೆಪ್ಸನ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆ್ಯಡಂ ಜಂಪಾ.
ಮೀಸಲು ಆಟಗಾರರು: ಡ್ಯಾನ್ ಕ್ರಿಸ್ಚಿಯನ್, ನೇಥನ್ ಎಲಿಸ್, ಡೇನಿಯಲ್ ಸ್ಯಾಮ್ಸ್.

Story first published: Friday, August 20, 2021, 10:07 [IST]
Other articles published on Aug 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X