ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಟೆಸ್ಟ್‌ನಲ್ಲಿ ರಿಷಭ್ ಪಂತ್ ಮೈಲಿಗಲ್ಲು ಸ್ಥಾಪನೆ

Rishabh Pant completes 500 runs in Test Cricket in 2021

ಅಹ್ಮದಾಬಾದ್: ಕ್ರಿಕೆಟ್ ಸಾಂಪ್ರದಾಯಗಳಿಗೆ ಭಾರತದ ಯುವ ಬ್ಯಾಟ್ಸ್‌ಮನ್‌ ರಿಷಭ್ ಪಂತ್‌ ತದ್ವಿರುದ್ಧ. ಪಂತ್ ದುಡುಕುತ್ತಾರೆ, ದೊಡ್ಡ ಹೊಡೆತಗಳಿಗೆ ಮುಂದಾಗಿ ಬೇಗನೆ ವಿಕೆಟ್ ಒಪ್ಪಿಸುತ್ತಾರೆ, ಪಂತ್ ಅವರ ಶಾಟ್ ಸೆಲೆಕ್ಷನ್ ಸರಿಯಲ್ಲ ಎಂಬಿತ್ಯಾದಿ ಮಾತುಗಳು ಆರಂಭದಲ್ಲಿ ಕೇಳಿಬಂದಿದ್ದವು. ಆದರೆ ಈಗ ಪಂತ್ ಉದಯೋನ್ಮುಖ ಪ್ರತಿಭೆಯಾಗಿ ಮಿನುಗುತ್ತಿದ್ದಾರೆ.

ಎಂಎಸ್ ಧೋನಿ ಹೆಸರಿನಲ್ಲಿದ್ದ ಕೆಟ್ಟ ದಾಖಲೆ ಸರಿದೂಗಿಸಿದ ವಿರಾಟ್ ಕೊಹ್ಲಿಎಂಎಸ್ ಧೋನಿ ಹೆಸರಿನಲ್ಲಿದ್ದ ಕೆಟ್ಟ ದಾಖಲೆ ಸರಿದೂಗಿಸಿದ ವಿರಾಟ್ ಕೊಹ್ಲಿ

ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ vs ಇಂಗ್ಲೆಂಡ್ 4ನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿರುವ ರಿಷಭ್ ಪಂತ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೈಲಿಗಲ್ಲೊಂದನ್ನು ಸ್ಥಾಪಿಸಿದ್ದಾರೆ. 2021ರಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಪಂತ್‌ 500+ ರನ್ ಪೂರೈಸಿದ್ದಾರೆ.

ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಮೊದಲನೇ ಇನ್ನಿಂಗ್ಸ್‌ನಲ್ಲಿ 118 ಎಸೆತಗಳಿಗೆ 101 ರನ್ ಬಾರಿಸಿದ್ದರು. ಇದು ಪಂತ್‌ ಟೆಸ್ಟ್‌ನಲ್ಲಿ ಬಾರಿಸಿದ 3ನೇ ಶತಕ ಮತ್ತು ಇಂಗ್ಲೆಂಡ್ ವಿರುದ್ಧ ಬಾರಿಸುತ್ತಿರುವ 2ನೇ ಶತಕ. ಈವರೆಗೆ ಒಟ್ಟು 11 ಟೆಸ್ಟ್‌ ಇನ್ನಿಂಗ್ಸ್‌ಗಳನ್ನಾಡಿರುವ ಪಂತ್ ಕ್ರಮವಾಗಿ 29, 36, 97, 23, 89, 91, 11, 58, 8, 1, 101 ರನ್ ಬಾರಿಸಿದ್ದಾರೆ.

ಅಕ್ರಮ್, ಮೆಕ್‌ಗ್ರಾಥ್ ಇರುವ ವಿಶೇಷ ಪಟ್ಟಿ ಸೇರಿದ ಜೇಮ್ಸ್ ಆಂಡರ್ಸನ್ಅಕ್ರಮ್, ಮೆಕ್‌ಗ್ರಾಥ್ ಇರುವ ವಿಶೇಷ ಪಟ್ಟಿ ಸೇರಿದ ಜೇಮ್ಸ್ ಆಂಡರ್ಸನ್

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಆಡುವ ರಿಷಭ್ ಪಂತ್, 33 ಟೆಸ್ಟ್‌ ಇನ್ನಿಂಗ್ಸ್‌ಗಳಲ್ಲಿ 1358 ರನ್ ಬಾರಿಸಿದ್ದಾರೆ. ಇದರಲ್ಲಿ 3 ಶತಕ, 6 ಅರ್ಧ ಶತಕಗಳು ಸೇರಿವೆ. ಪಂತ್‌ ಟೆಸ್ಟ್‌ನಲ್ಲಿ 145 ಫೋರ್ಸ್, 33 ಸಿಕ್ಸರ್‌ಗಳ ದಾಖಲೆ ಹೊಂದಿದ್ದಾರೆ. ಉತ್ತರಖಂಡದವರಾದ ಪಂತ್‌ಗೆ ಈಗ 23ರ ಹರೆಯ.

Story first published: Friday, March 5, 2021, 18:09 [IST]
Other articles published on Mar 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X