ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Rishabh Pant: 2023ರಲ್ಲಿ ರಿಷಬ್ ಪಂತ್ ಕ್ರಿಕೆಟ್ ಆಡೋದೆ ಅನುಮಾನ! ಆಸ್ಪತ್ರೆ ಕೊಟ್ಟ ಮಾಹಿತಿ ಏನು?

Rishabh Pant Might Be Take Minimum 9 Months For Recovery, Might Miss ODI World Cup 2023

ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ರಿಷಬ್ ಪಂತ್‌ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಡೆಹ್ರಾಡೂನ್ ಮ್ಯಾಕ್ಸ್ ಆಸ್ಪತ್ರೆಯಿಂದ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ಮೂಲಗಳ ಪ್ರಕಾರ ಪಂತ್ ಚೇತರಿಕೆಗೆ ಕನಿಷ್ಠ 9 ತಿಂಗಳು ಬೇಕಾಗುತ್ತದೆ ಎನ್ನಲಾಗಿದೆ.

ರಿಷಬ್ ಪಂತ್ 2023ರ ಏಷ್ಯಾಕಪ್‌ ವೇಳೆಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ ಎಂದು ಬಿಸಿಸಿಐ ಈ ಮೊದಲು ಹೇಳಿತ್ತು, ಆದರೆ ಆಸ್ಪತ್ರೆ ನೀಡಿರುವ ವರದಿ ಪ್ರಕಾರ ರಿಷಬ್ ಪಂತ್ 2023ರಲ್ಲಿ ಕ್ರಿಕೆಟ್ ಆಡುವುದೇ ಅನುಮಾನ ಎಂದು ಹೇಳಲಾಗಿದೆ. ಇದರೊಂದಿಗೆ ಅವರು ಏಕದಿನ ವಿಶ್ವಕಪ್‌ ಕೂಡ ಕಳೆದುಕೊಳ್ಳಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿರುವುದಾಗಿ ಇನ್‌ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ.

Ind vs SL 2nd T20I: ಅಕ್ಷರ್ ಪಟೇಲ್ ಸ್ಫೋಟಕ ಆಟ: ಜಡೇಜಾ, ದಿನೇಶ್ ಕಾರ್ತಿಕ್ ದಾಖಲೆ ಧೂಳಿಪಟInd vs SL 2nd T20I: ಅಕ್ಷರ್ ಪಟೇಲ್ ಸ್ಫೋಟಕ ಆಟ: ಜಡೇಜಾ, ದಿನೇಶ್ ಕಾರ್ತಿಕ್ ದಾಖಲೆ ಧೂಳಿಪಟ

ಕೋಕಿಲಾಬೆನ್ ಆಸ್ಪತ್ರೆಯ ಕ್ರೀಡಾ ಮೂಳೆಚಿಕಿತ್ಸೆ ವಿಭಾಗದ ನಿರ್ದೇಶಕ ಡಾ. ದಿನ್ಶಾ ಪರ್ದಿವಾಲಾ ನೇತೃತ್ವದ ವೈದ್ಯರ ತಂಡ ರಿಷಬ್‌ ಪಂತ್‌ರ ಗಾಯದ ಪರೀಕ್ಷೆ ಮಾಡಿದೆ, ಮೊಣಕಾಲು, ಪಾದದ ಊತ ಕಡಿಮೆಯಾಗುವ ತನಕ ಎಂಆರ್ ಐ ಅಥವಾ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅಸ್ಥಿರಜ್ಜು ತೀವ್ರವಾಗಿ ಗಾಯಗೊಂಡಿರುವುದಾಗಿ ಆಸ್ಪತ್ರೆ ವೈದ್ಯರು ಅಂದಾಜು ಮಾಡಿದ್ದಾರೆ. ಎಂಆರ್ ಐ ನಂತರವೇ ಗಾಯದ ಬಗ್ಗೆ ಸ್ಪಷ್ಟವಾದ ಚಿತ್ರಣ ಸಿಗಲಿದೆ.

ಚೇತರಿಕೆಗೆ 6-9 ತಿಂಗಳು ಬೇಕು

ಚೇತರಿಕೆಗೆ 6-9 ತಿಂಗಳು ಬೇಕು

"ಅವರ ಗಾಯದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲು ಇನ್ನೂ 3-4 ದಿನಗಳು ಬೇಕಾಗಬಹುದು. ಅಸ್ಥಿರಜ್ಜು ಟಿಯರ್ ತೀವ್ರ ಸ್ವರೂಪದ್ದಾಗಿದೆ ಎಂದು ಹೇಳಲಾಗುತ್ತಿದೆ. ಪಂತ್ ವಿಕೆಟ್ ಕೀಪರ್ ಕೂಡ ಆಗಿರುವುದರಿಂದ ಅವರಿಗೆ ಕೆಲಸದ ಹೊರೆ ಹೆಚ್ಚಾಗಿರುತ್ತದೆ. ಚೇತರಿಸಿಕೊಂಡು ಮತ್ತೆ ಕ್ರಿಕೆಟ್‌ಗೆ ಮರಳಲು ಕನಿಷ್ಠ 9 ತಿಂಗಳು ಬೇಕಾಗಬಹುದು" ಎಂದು ಬಿಸಿಸಿಐ ವೈದ್ಯಕೀಯ ತಂಡದ ನಿಕಟವರ್ತಿ ಮೂಲಗಳು ತಿಳಿಸಿರುವುದಾಗಿ ಇನ್‌ಸೈಡ್ ಸ್ಪೋರ್ಟ್ಸ್ ಹೇಳಿದೆ. ಈ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

"ರಿಷಬ್‌ ಪಂತ್‌ರನ್ನು ಸಾಧ್ಯವಾದಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಅವರ ಗಾಯದ ಬಗ್ಗೆ ಅಧಿಕೃತವಾಗಿ ವರದಿ ಬರುವವರೆಗೂ ಏನು ಹೇಳಲಾಗದು. ವೈದ್ಯರು ಎಲ್ಲಾ ರೀತಿಯಲ್ಲಿ ಅವಲೋಕನ ಮಾಡುತ್ತಿದ್ದಾರೆ. ಅವರ ಗಾಯದ ಬಗ್ಗೆ ಬಿಸಿಸಿಐ ಶೀಘ್ರದಲ್ಲೇ ಅಧಿಕೃತ ಮಾಹಿತಿ ನೀಡಲಿದೆ" ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ತಿಳಿಸಿದ್ದಾರೆ.

Ind vs SL 2nd T20I: ಭಾರತ ತಂಡದ ಸೋಲಿಗೆ ಇದೇ ಪ್ರಮುಖ ಕಾರಣ ಎಂದ ಮಾಜಿ ಕ್ರಿಕೆಟಿಗ

ಎರಡು ಬಾರಿ ಶಸ್ತ್ರಚಿಕಿತ್ಸೆ ಸಾಧ್ಯತೆ

ಎರಡು ಬಾರಿ ಶಸ್ತ್ರಚಿಕಿತ್ಸೆ ಸಾಧ್ಯತೆ

ಪಂತ್‌ ಮೊಣಕಾಲು ಮತ್ತು ಪಾದದ ಅಸ್ಥಿರಜ್ಜು ಟಿಯರ್ ಮೇಲೆ ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆ ಇದ್ದು, ಕನಿಷ್ಠ 9 ತಿಂಗಳು ಅವರು ಕ್ರಿಕೆಟ್‌ನಿಂದ ದೂರವಿರಬೇಕಾಗುತ್ತದೆ.

ಬಿಸಿಸಿಐ ಬುಧವಾರ ಪಂತ್‌ರನ್ನು ವಿಮಾನದಲ್ಲಿ ಡೆಹ್ರಾಡೂನ್‌ನಿಂದ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ವಿಮಾನದ ಮೂಲಕ ಕರೆದೊಯ್ಯಲಾಯಿತು. ಆಸ್ಪತ್ರೆಯ ವೈದ್ಯರು ಅವರನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲಿದ್ದು, ವೈದ್ಯರು ವರದಿ ನೀಡಿದ ನಂತರ, ಭಾರತದಲ್ಲಿ ಶಸ್ತ್ರಚಿಕಿತ್ಸೆ ಮಾಡಬೇಕೇ ಅಥವಾ ಶಸ್ತ್ರಚಿಕಿತ್ಸೆಗಾಗಿ ಲಂಡನ್‌ಗೆ ಕರೆದೊಯ್ಯಬೇಕೆ ಎನ್ನುವುದನ್ನು ಬಿಸಿಸಿಐ ನಿರ್ಧರಿಸುತ್ತದೆ.

ಏಷ್ಯಾಕಪ್, ವಿಶ್ವಕಪ್‌ಗೆ ಅಲಭ್ಯ

ಏಷ್ಯಾಕಪ್, ವಿಶ್ವಕಪ್‌ಗೆ ಅಲಭ್ಯ

2023ರಲ್ಲಿ ಬಿಡುವಿಲ್ಲ ಕ್ರಿಕೆಟ್ ವೇಳಾಪಟ್ಟಿಯನ್ನು ಭಾರತ ತಂಡ ಹೊಂದಿದೆ. ಏಕದಿನ ವಿಶ್ವಕಪ್, ಏಷ್ಯಾಕಪ್‌ ಈ ವರ್ಷದ ಪ್ರಮುಖ ಟೂರ್ನಿಗಳಾಗಿದ್ದು, ಭಾರತ ಗೆಲ್ಲಲು ತಂತ್ರ ರೂಪಿಸುತ್ತಿದೆ. ಅದಕ್ಕೂ ಮುನ್ನ ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಗೆಲುವು ಸಾಧಿಸಿದರೆ, ಜೂನ್‌ನಲ್ಲಿ ನಡೆಯಲಿರುವ ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯಲಿದೆ.

ಟೆಸ್ಟ್ ಸರಣಿಗಾಗಿ ಸಿದ್ಧವಾಗುವಂತೆ ಪಂತ್‌ರನ್ನು ಕೇಳಲಾಗಿತ್ತು. 15 ದಿನಗಳ ಕಾಲ ಅವರು ಬೆಂಗಳೂರು ಎನ್‌ಸಿಎಯಲ್ಲಿ ಪುನರ್ವಸತಿಗಾಗಿ ಹಾಜರಾಗಬೇಕಿತ್ತು, ಆದರೆ ಅದಕ್ಕೂ ಮುನ್ನವೇ ಕಾರು ಅಪಘಾತದಲ್ಲಿ ಗಾಯಗೊಂಡಿದ್ದು, ಭಾರತ ತಂಡಕ್ಕೆ ಸಮಸ್ಯೆಯಾಗಿ ಪರಿಣಮಿಸಿತು.

Story first published: Friday, January 6, 2023, 13:11 [IST]
Other articles published on Jan 6, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X