ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಹಾಗೂ ಆಸ್ಟ್ರೇಲಿಯಾ ಕಾದಾಟ ಆ್ಯಶಸ್‌ಗೆ ಸರಿಸಮ ಎಂದ ಆಸಿಸ್ ವೇಗಿ

Rivalry between India and Australia up there with the Ashes: Josh Hazlewood

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಆ್ಯಶಸ್‌ ಸೆಣೆಸಾಟಕ್ಕೆ ಸರಿಸಮವಾಗಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಅಭಿಪ್ರಾಯಪಟ್ಟಿದ್ದಾರೆ. ಮುಂಬರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹ್ಯಾಜಲ್‌ವುಡ್ ಈ ಅಭಿಪ್ರಾಯವನ್ನು ವ್ಯಕ್ತಡಿಸಿದ್ದಾರೆ.

2018-19ರಲ್ಲಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಟೆಸ್ಟ್ ಸರಣಿಯಲ್ಲಿ ಶರಣಾಗಿರುವುದು ಈ ಬಾರಿಯ ಟೂರ್ನಿಗೆ ಸ್ಪೂರ್ತಿಯಾಗಿದೆ ಎಂದು ಜೋಶ್ ಹ್ಯಾಜಲ್‌ವುಡ್ ಹೇಳಿದ್ದಾರೆ. "ಅವರು ಕಳೆದ ಬಾರಿ ಸರಣಿ ಗೆದ್ದಿದ್ದರು. ಆಸ್ಟ್ರೇಲಿಯಾದಲ್ಲಿ ನಾವು ಹೆಚ್ಚಿನ ಸರಣಿಗಳನ್ನು ಸೋತಿಲ್ಲ" ಎಂದು ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಹ್ಯಾಜಲ್‌ವುಡ್ ಹೇಳಿದ್ದಾರೆ.

ಟೀಮ್ ಇಂಡಿಯಾದ ನಾಯಕತ್ವ ವಿಭಜನೆ ಬಗ್ಗೆ ಅಭಿಪ್ರಾಯ ಮಂಡಿಸಿದ ಶೋಯೆಬ್ ಅಖ್ತರ್ಟೀಮ್ ಇಂಡಿಯಾದ ನಾಯಕತ್ವ ವಿಭಜನೆ ಬಗ್ಗೆ ಅಭಿಪ್ರಾಯ ಮಂಡಿಸಿದ ಶೋಯೆಬ್ ಅಖ್ತರ್

"ಈ ಹಿಂದೆನ ಬಾರಿ ಸರಣಿಯನ್ನು ಸೋತಿರುವುದು ನಮಗೆ ಖಂಡಿಯವಾಗಿಯೂ ನೋವುಂಟು ಮಾಡಿತ್ತು. ಆ ಸಂದರ್ಭದಲ್ಲಿ ತಂಡದಲ್ಲಿದ್ದ ಆಟಗಾರರಿಗೆ ಇದು ತಿಳಿದಿದೆ. ನಾನು ಈ ಸಂದರ್ಭದಲ್ಲಿ ಅದನ್ನು ನೆನಪಿಸಿಕೊಳ್ಳುತ್ತೇನೆ. ಅದು ನಮಗೆ ಪ್ರೇರಣೆಯನ್ನು ನೀಡುತ್ತದೆ" ಎಂದು ಹ್ಯಾಜಲ್‌ವುಡ್ ವಿವರಿಸಿದ್ದಾರೆ.

ಕಳೆದ ಬಾರಿಯ ಟೆಸ್ಟ್ ಸರಣಿಯಲ್ಲಿ ಭಾರತೀಯ ವೇಗಿದಗಳ ಅದ್ಭುತವಾದ ಪ್ರದರ್ಶನವನ್ನು ನೀಡಿದ್ದರು. ಇದು ಸರಣಿಯಲ್ಲಿ ನಿರ್ಭಾಯಕ ಪಾತ್ರವಹಿಸಿತು. ಈ ಬಾರಿಯೂ ಇಶಾಂತ್ ಶರ್ಮ ತಂಡವನ್ನು ಸೇರಿಕೊಂಡರೆ ಅದಯ ಅವರಿಗೆ ಮತ್ತಷ್ಟ ಬಲ ನೀಡಲಿದೆ ಎಂದು ಹ್ಯಾಜಲ್‌ವುಡ್ ಪ್ರತಿಕ್ರಿಯಿಸಿದ್ದಾರೆ.

ಬಿಗ್ ಬ್ಯಾಷ್ ಲೀಗ್ ನಿಯಮ ಬದಲಾವಣೆ ವಿರುದ್ಧ ಶೇನ್ ವಾಟ್ಸನ್ ಕಿಡಿಬಿಗ್ ಬ್ಯಾಷ್ ಲೀಗ್ ನಿಯಮ ಬದಲಾವಣೆ ವಿರುದ್ಧ ಶೇನ್ ವಾಟ್ಸನ್ ಕಿಡಿ

"ವೇಗಿಗಳಲ್ಲಿ ಜಸ್ಪ್ರೀತ್ ಬೂಮ್ರಾ ವಿಶೇಷಬಾಗಿ ನಿಲ್ಲುತ್ತಾರೆ. ಅವರ ಬೌಲಿಂಗ್ ಶೈಲಿಕೂಡ ವಿಶೇಷವಾಗಿದೆ. ಅವರು ತಮ್ಮ ವೇಗವನ್ನು ಒಂದೇ ರೀತಿಯಾಗಿ ಕಾಯ್ದುಕೊಳ್ಳುತ್ತಾರೆ. ಆತ ಭಾರತ ತಂಡದ ಪ್ರಮುಖ ಅಸ್ತ್ರವಾಗಲಿದ್ದಾರೆ. ಅತ ಆರಂಭದಲ್ಲಿ ವಿಕೆಟ್ ಪಡೆಯಲು ಶಕ್ತವಾಗಿರುವುದು ಮಾತ್ರವಲ್ಲದೆ ಹಳೆಯ ಚೆಂಡಿನಲ್ಲೂ ವಿಕೆಟ್ ಪಡೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ" ಎಂದು ಜೋಶ್ ಹ್ಯಾಜಲ್‌ವುಡ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Story first published: Friday, November 20, 2020, 13:13 [IST]
Other articles published on Nov 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X