ತಮ್ಮ ವೃತ್ತಿಜೀವನಕ್ಕೆ ಮುಳುವಾದ ಆ ಒಂದು ಕಾರಣವನ್ನು ಬಿಚ್ಚಿಟ್ಟ ರಾಬಿನ್ ಉತ್ತಪ್ಪ

ತನ್ನ ಕ್ರಿಕೆಟ್ ಭವಿಷ್ಯ ಮಂಕಾಗಿದ್ದಕ್ಕೆ ಕಾರಣ ಕೊಟ್ಟ ಉತ್ತಪ್ಪ | Oneindia Kannada

ರಾಬಿನ್ ಉತ್ತಪ್ಪ ಭಾರತ ಕ್ರಿಕೆಟ್ ಕಂಡ ಸ್ಫೋಟಕ ಆಟಗಾರರ ಪಟ್ಟಿಗೆ ಸೇರುವಂತಹ ಬ್ಯಾಟ್ಸ್‌ಮನ್‌. 2006ರಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ 7 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳ ಸರಣಿಯ ಫೈನಲ್ ಪಂದ್ಯದಲ್ಲಿ ರಾಬಿನ್ ಉತ್ತಪ್ಪ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಆ ಪಂದ್ಯದಲ್ಲಿ ರಾಬಿನ್ ಉತ್ತಪ್ಪ 96 ಎಸೆತಗಳಲ್ಲಿ 86 ರನ್ ಬಾರಿಸಿ ಮಿಂಚಿದರು. ಪದಾರ್ಪಣೆ ಮಾಡಿದ ಮೊದಲನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ರಾಬಿನ್ ಉತ್ತಪ್ಪ ಭವಿಷ್ಯದ ದಿನಗಳಲ್ಲಿ ಟೀಂ ಇಂಡಿಯಾದ ಖಾಯಂ ಸದಸ್ಯರಾಗಲಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು.

ಒಂದು ಔಷಧಿಗೆ 16 ಕೋಟಿ; ಮುಗ್ಧ ಮಗುವಿನ ಜೀವ ಉಳಿಸಿ ಮಾನವೀಯತೆ ಮೆರೆದ ಕಿಂಗ್ ಕೊಹ್ಲಿ

ಆದರೆ ಎಲ್ಲರ ಊಹೆ ತಪ್ಪಾಯಿತು, ದಿನಕಳೆದಂತೆ ರಾಬಿನ್ ಉತ್ತಪ್ಪ ಅವಕಾಶಗಳನ್ನು ಕಳೆದುಕೊಳ್ಳುತ್ತಾ ಹೋದರು. ಭಾರತ ತಂಡದ ಪರ ರಾಬಿನ್ ಉತ್ತಪ್ಪ ತಮ್ಮ ಕ್ರಿಕೆಟ್ ಜೀವನದಲ್ಲಿ ಆಡಿರುವ ಏಕದಿನ ಪಂದ್ಯಗಳ ಸಂಖ್ಯೆ ಕೇವಲ 46. ತಮ್ಮ ಕ್ರಿಕೆಟ್ ಜೀವನದ ಕುರಿತು ಇತ್ತೀಚೆಗಷ್ಟೇ ಮಾತನಾಡಿರುವ ರಾಬಿನ್ ಉತ್ತಪ್ಪ ದಿನದಿಂದ ದಿನಕ್ಕೆ ತಂಡದಲ್ಲಿ ತಾವು ಅವಕಾಶ ಕಳೆದುಕೊಂಡಿದ್ದರ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಬ್ಯಾಟಿಂಗ್ ಕ್ರಮಾಂಕದ ಬದಲಾವಣೆಯೇ ವೃತ್ತಿ ಜೀವನಕ್ಕೆ ಮುಳುವಾಯಿತೇನೋ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಯಶಸ್ಸಿಗೆ ರಾಹುಲ್ ದ್ರಾವಿಡ್ ಸರ್ ಕಾರಣ; ದ್ರಾವಿಡ್ ಜೊತೆಗಿನ ಹಳೆ ಘಟನೆ ನೆನೆದ ಪೃಥ್ವಿ ಶಾ

'ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಪಡೆದ ನಾನು ಒಂದೇ ಕ್ರಮಾಂಕದಲ್ಲಿ ಆಡಲಿಲ್ಲ, ಆರಂಭದ ದಿನಗಳಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುತ್ತಿದೆ ತದನಂತರ ಮಧ್ಯಮ ಕ್ರಮಾಂಕದ ಆಟಗಾರ ಹಾಗೂ ಕೆಳ ಕ್ರಮಾಂಕದ ಆಟಗಾರನಾಗಿಯೂ ಕಣಕ್ಕಿಳಿದಿದ್ದೆ. ಹೀಗೆ ಭಿನ್ನವಿಭಿನ್ನವಾದ ಬ್ಯಾಟಿಂಗ್ ಕ್ರಮಾಂಕದಲ್ಲಿ ಆಡಿದ ಕಾರಣದಿಂದ ಸರಿಯಾದ ರನ್ ಕಲೆ ಹಾಕಲಾಗಿದೆ ತಂಡದಿಂದ ಹೊರಗುಳಿದೆ ಎನಿಸುತ್ತದೆ. ಬಹುಶಃ ಒಂದೇ ಕ್ರಮಾಂಕದಲ್ಲಿ ಆಡಿದ್ದರೆ ನೂರು ಇನ್ನೂರು ಪಂದ್ಯಗಳನ್ನು ಆಡುವ ಅವಕಾಶ ನನಗೂ ಬರುತ್ತಿತ್ತೇನೋ ಎಂದೆನಿಸುತ್ತದೆ' ಎಂದು ರಾಬಿನ್ ಉತ್ತಪ್ಪ ಬ್ಯಾಟಿಂಗ್ ಕ್ರಮಾಂಕ ತಮ್ಮ ವೃತ್ತಿ ಜೀವನದ ಮೇಲೆ ಬೀರಿದ ಪ್ರಭಾವವನ್ನು ಬಿಚ್ಚಿಟ್ಟರು.

ಸರಿಯಾದ ಅವಕಾಶ ನೀಡದೆ ಕಡೆಗಣಿಸಿದ್ರು ಎಂಬ ಆರೋಪವೂ ಇತ್ತು

ಸರಿಯಾದ ಅವಕಾಶ ನೀಡದೆ ಕಡೆಗಣಿಸಿದ್ರು ಎಂಬ ಆರೋಪವೂ ಇತ್ತು

ಕನ್ನಡಿಗ ರಾಬಿನ್ ಉತ್ತಪ್ಪಗೆ ಭಾರತ ತಂಡದಲ್ಲಿ ಸರಿಯಾದ ಅವಕಾಶವನ್ನು ನೀಡದೆ ಕಡೆಗಣಿಸಿದ್ರು ಎಂಬ ಆರೋಪವೂ ಸಹ ಆಗಾಗ ಕೇಳಿ ಬಂದದ್ದು ನಿಮಗೆಲ್ಲರಿಗೂ ತಿಳಿದೇ ಇದೆ. ಬೇಕಂತಲೇ ಉತ್ತಪ್ಪಗೆ ತಂಡದಲ್ಲಿ ಸ್ಥಾನ ನೀಡಲಿಲ್ಲ ಎಂಬ ವಾದಗಳು ಕೂಡ ಎದ್ದಿದ್ದವು.

ಉತ್ತಪ್ಪ ಪದಾರ್ಪಣೆ ಮಾಡಿದಾಗ ತಂಡದಲ್ಲಿದ್ರು ಘಟಾನುಘಟಿ ಆರಂಭಿಕ ಆಟಗಾರರು

ಉತ್ತಪ್ಪ ಪದಾರ್ಪಣೆ ಮಾಡಿದಾಗ ತಂಡದಲ್ಲಿದ್ರು ಘಟಾನುಘಟಿ ಆರಂಭಿಕ ಆಟಗಾರರು

ರಾಬಿನ್ ಉತ್ತಪ್ಪ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಸಂದರ್ಭದಲ್ಲಿ ಭಾರತ ತಂಡದ ಪರ ಆರಂಭಿಕ ಮತ್ತು ಮೇಲಿನ ಕ್ರಮಾಂಕದ ಆಟಗಾರರಾಗಿ ವಿರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಕಣಕ್ಕಿಳಿಯುತ್ತಿದ್ದ ಕಾರಣ ಉತ್ತಪ್ಪಗೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಅವಕಾಶಗಳು ಹೆಚ್ಚಾಗಿ ಸಿಗಲಿಲ್ಲ.

ಮೊದಲ ಪಂದ್ಯದಲ್ಲಿಯೇ ದಾಖಲೆ

ಮೊದಲ ಪಂದ್ಯದಲ್ಲಿಯೇ ದಾಖಲೆ

ಉತ್ತಪ್ಪ ಪದಾರ್ಪಣೆ ಮಾಡಿದ ಮೊದಲನೇ ಪಂದ್ಯದಲ್ಲಿಯೇ 96 ಎಸೆತಗಳಿಗೆ 86 ರನ್ ಬಾರಿಸಿ, ಆಡಿದ ಮೊದಲ ಪಂದ್ಯದಲ್ಲಿಯೇ ಅತಿಹೆಚ್ಚು ರನ್ ಬಾರಿಸಿದ ಭಾರತೀಯ ಎಂಬ ದಾಖಲೆಯನ್ನು ನಿರ್ಮಿಸಿದ್ದರು.

ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿಯೂ ಅವಕಾಶವಿಲ್ಲ

ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿಯೂ ಅವಕಾಶವಿಲ್ಲ

ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದ ರಾಬಿನ್ ಉತ್ತಪ್ಪ ಟೂರ್ನಿ ಆರಂಭಕ್ಕೂ ಮುನ್ನ ಚೆನ್ನೈ ತಂಡದ ಪರ ಈ ಟೂರ್ನಿಯಲ್ಲಿಯೇ 1000 ರನ್ ದಾಖಲಿಸುವುದು ನನ್ನ ಗುರಿ ಎಂದು ಉತ್ತಪ್ಪ ಹೇಳಿಕೊಂಡಿದ್ದರು. ಆದರೆ ಇದುವರೆಗೂ ಕೂಡ ಒಂದೇ ಒಂದು ಪಂದ್ಯದಲ್ಲಿಯೂ ರಾಬಿನ್ ಉತ್ತಪ್ಪಗೆ ಆಡುವ ಅವಕಾಶವನ್ನೇ ನೀಡಿಲ್ಲ. ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಸ್ತುತ ಐಪಿಎಲ್ ಮುಂದುವರಿಯಲಿದ್ದು ಆಗಾದರೂ ರಾಬಿನ್ ಉತ್ತಪ್ಪಗೆ ಅವಕಾಶ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

For Quick Alerts
ALLOW NOTIFICATIONS
For Daily Alerts
Story first published: Wednesday, May 26, 2021, 8:44 [IST]
Other articles published on May 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X