ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್ ನನ್ನ ರೋಲ್ ಮಾಡೆಲ್ ಎಂದ ಪಾಕಿಸ್ತಾನ ಯುವ ಕ್ರಿಕೆಟಿಗ

Rohit Sharma Is My Role Model: pakistan Young Cricketer Haider Ali

ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರನ್ನು ಪಾಕಿಸ್ತಾನದ ಯುವ ಕ್ರಿಕೆಟಿಗ ತನ್ನ ರೋಲ್ ಮಾಡೆಲ್ ಎಂದಿದ್ದಾರೆ. 19 ವರ್ಷದ ಯುವ ಬ್ಯಾಟ್ಸ್‌ಮನ್ ಹೈದರ್ ಅಲಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ 29 ಆಟಗಾರರ ತಂಡದಕ್ಕೆ ಆಯ್ಕೆಯಾಗಿದ್ದು ರೋಹಿತ್ ರೀತಿ ಸ್ಪೋಟಕ ಆರಂಭವನ್ನು ನೀಡುವ ಆಶಯ ವ್ಯಕ್ತಪಡಿಸಿದ್ದಾರೆ.

ನಾನೋರ್ವ ಆಟಗಾರನಾಗಿ ರೋಹಿತ್ ಶರ್ಮಾ ಆಟವನ್ನು ಬಹಳ ಇಷ್ಟಪಡುತ್ತೇನೆ, ಅಗ್ರ ಕ್ರಮಾಂಕದಲ್ಲಿ ಅವರ ರೀತಿಯಲ್ಲೇ ಆಕ್ರಮಣಕಾರಿ ಆರಂಭವನ್ನು ನೀಡಲು ನಾನು ಬಯಸುತ್ತೇನೆ. ಜೊತೆಗೆ ರೋಹಿತ್ ರೀತಿಯಲ್ಲೇ ಹೊಡೆತವನ್ನು ಬಾರಿಸಲು ಇಷ್ಟಪಡುತ್ತೇನೆ ಎಂದು ಹೈದರ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಮೊದಲ ODIನಲ್ಲೇ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಟಾಪ್ 5 ಭಾರತೀಯರ ಪಟ್ಟಿಯಲ್ಲಿ ನಾಲ್ವರು ಕನ್ನಡಿಗರು!ಮೊದಲ ODIನಲ್ಲೇ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಟಾಪ್ 5 ಭಾರತೀಯರ ಪಟ್ಟಿಯಲ್ಲಿ ನಾಲ್ವರು ಕನ್ನಡಿಗರು!

ಮೂರೂ ಮಾದರಿಯ ಆಟಗಾರ

ಮೂರೂ ಮಾದರಿಯ ಆಟಗಾರ

ರೋಹಿತ್ ಶರ್ಮಾ ಮೂರು ಮಾದರಿಯ ಆಟಗಾರ. ಆತನ ಆಟವನ್ನು ಮೂರು ಮಾದರಿಯಲ್ಲೂ ಪರಿಪೂರ್ಣವಾಗಿ ಬಳಸಿಕೊಳ್ಳಲು ಅರಿತುಕೊಂಡಿದ್ದಾರೆ. ಆದರಲ್ಲೂ ರೋಹಿತ್ ಶರ್ಮಾ 50 ರನ್ ಗಳಿಸಿದ ಬಳಿಕ ಬಲುಬೇಗನೇ ಮೂರಂಕಿಯತ್ತ ತಲುಪುತ್ತಾರೆ. ಅದಾದ ಬಳಿಕ ಅವರ ಗುರಿ 150 ಜೊತೆಗೆ 200ರ ಬಗ್ಗೆಯೂ ಆಲೋಚಿಸುತ್ತಾರೆ ಎಂದು ಹೈದರ್ ಹೇಳಿದ್ದಾರೆ.

ರೋಹಿತ್ ಶರ್ಮಾ ಮ್ಯಾಚ್‌ವಿನ್ನರ್

ರೋಹಿತ್ ಶರ್ಮಾ ಮ್ಯಾಚ್‌ವಿನ್ನರ್

ರೋಹಿತ್ ಶರ್ಮಾ ಅವರ ಈ ಆಟದ ರೀತಿಯಲ್ಲೇ ನಾನು ಆಡಲು ಬಯಸುತ್ತೇನೆ. ದೊಡ್ಡ ಮೊತ್ತವನ್ನು ಗುರಿಯಾಗಿಟ್ಟುಕೊಂಡು ಅದು ಸಾಧ್ಯವಾದಾಗ ಇನ್ನಷ್ಟು ಗುರಿಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಬೇಕು. ಅಂತಿಮವಾಗಿ ಇನ್ನಿಂಗ್ಸ್ ಮುಕ್ತಾಯಕ್ಕೆ ಪಂದ್ಯವನ್ನು ತಮ್ಮ ಕಡೆಗೆ ಎಳೆದುಕೊಂಡಿರುತ್ತಾರೆ ರೋಹಿತ್ ಶರ್ಮಾ. ಆ ಮನಸ್ಥಿತಿಯನ್ನು ಹೊಂದಲು ನಾನು ಬಯಸುತ್ತೇನೆ. ಆತನೋರ್ವ ದೊಡ್ಡ ಮ್ಯಾಚ್ ವಿನ್ನರ್ ಎಂದು ರೋಹಿತ್ ಶರ್ಮಾ ಆಟದ ಬಗ್ಗೆ ಹೈದರ್ ಅಲಿ ಹೇಳಿದ್ದಾರೆ.

ಅದ್ಭುತ ಪ್ರದರ್ಶನದ ಮೂಲಕ ಸೆಳೆದ ಹೈದರ್

ಅದ್ಭುತ ಪ್ರದರ್ಶನದ ಮೂಲಕ ಸೆಳೆದ ಹೈದರ್

ಹೈದರ್ ಈ ಹಿಂದಿನ ವರ್ಷ ಅದ್ಭುತವಾಗಿ ಪ್ರದರ್ಶನವನ್ನು ನೀಡಿದ್ದಾರೆ. ಈ ಮೂಲಕ ಹೈದರ್ 2020-21ರ ಋತುವಿನ ಉದಯೋನ್ಮುಖ ಆಟಗಾರನಾಗಿ ಪಾಕಿಸ್ತಾನ ಕ್ರಿಕೆಟ್‌ನ ಕಾಂಟ್ರಾಕ್ಟ್ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್‌ನಲ್ಲೂ ಹೈದರ್ ಅದ್ಭುತ ಪ್ರದರ್ಶನವನ್ನು ನೀಡಿ ಗಮನ ಸೆಳೆದಿದ್ದಾರೆ. ಈ ಮೂಲಕ ಪಾಕಿಸ್ತಾನ ಹಿರಿಯರ ತಂಡದ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.

Story first published: Friday, June 19, 2020, 22:05 [IST]
Other articles published on Jun 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X