ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲ್ಯಾಂಡ್ 'ಎ' ವಿರುದ್ಧದ ಭಾರತ 'ಎ' ತಂಡದಿಂದ ರೋಹಿತ್ ಹೊರಗೆ!

Rohit Sharma rested from India As four-day game against NZ A

ನವದೆಹಲಿ, ನವೆಂಬರ್ 13: ನ್ಯೂಜಿಲ್ಯಾಂಡ್ ಎ ತಂಡದ ವಿರುದ್ಧ ಮೊದಲ ನಾಲ್ಕು ದಿನ ಪಂದ್ಯವನ್ನಾಡಲಿರುವ ಭಾರತ ಎ ತಂಡದಲ್ಲಿ ಹೆಸರಿಸಲಾಗಿದ್ದ ರೋಹಿತ್ ಶರ್ಮಾ ಅವರು ತಂಡದಿಂದ ಹೊರಗುಳಿಯಲಿದ್ದಾರೆ. ಬಿಸಿಸಿಐಯ ವೈದ್ಯಕೀಯ ತಂಡ ರೋಹಿತ್‌ಗೆ ವಿಶ್ರಾಂತ್ ಪಡೆಯುವಂತೆ ಸೂಚಿಸಿರುವುದು ಇದಕ್ಕೆ ಕಾರಣ.

ಭಾವನಾತ್ಮಕ ಸಂದೇಶ ಬರೆದು ಟಿ10 ಲೀಗ್ ನಿಂದ ಹೊರನಡೆದ ಮಲ್ಲಿಕ್!ಭಾವನಾತ್ಮಕ ಸಂದೇಶ ಬರೆದು ಟಿ10 ಲೀಗ್ ನಿಂದ ಹೊರನಡೆದ ಮಲ್ಲಿಕ್!

ಆಸ್ಟ್ರೇಲಿಯಾ ಪ್ರವಾಸ ಸರಣಿಯ ಟಿ20 ತಂಡದಲ್ಲಿರುವ ರೋಹಿತ್ ಶರ್ಮಾ ನವೆಂಬರ್ 16ರಂದು ಮುಂಬೈಯಿಂದ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಯಿಂದ ರೋಹಿತ್ ಅವರನ್ನು ಹೊರಗಿಡುವಂತೆಯೇ ಇಲ್ಲ. ಹೀಗಾಗಿ ಸಹಜವಾಗಿ ರೋಹಿತ್ ಮೇಲೆ ಕೆಲಸದ ಹೊರೆ ಬೀಳಲಿದೆ. ಅದನ್ನೇ ಅರಿತಿರುವ ತಂಡದದ ಆಯ್ಕೆ ಸಮಿತಿ ಮತ್ತು ವೈದ್ಯಕೀಯ ತಂಡ ರೋಹಿತ್ ಅನಂತರವಾದರೂ ವಿಶ್ರಾಂತಿ ಪಡೆಯುವ ಅಗತ್ಯ ಖಂಡಿತಾ ಇದೆ ಎಂದು ತಿಳಿಸಿದೆ.

ಇತ್ತೀಚೆಗೆ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಮತ್ತು ಟಿ20 ಸರಣಿಯಲ್ಲಿ ಆಡಿದ್ದ ರೋಹಿತ್ ಉತ್ತಮ ಪ್ರದರ್ಶನ ತೋರಿದ್ದರು. ಹಿಟ್‌ಮ್ಯಾನ್ ರೋಹಿತ್ ಅವರ ನಾಯಕತ್ವವೂ ಕ್ರಿಕೆಟ್ ವಲಯದ ಅನೇಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ನ್ಯೂಜಿಲ್ಯಾಂಡ್ ವಿರುದ್ಧ ಪಂದ್ಯದ ವೇಳೆಗಾದರೂ ರೋಹಿತ್ ವಿಶ್ರಾಂತಿ ಪಡೆಯುವ ಅನಿವಾರ್ಯತೆ ಇರುವುದು ನಿಜವೆ.

'ಹಿಟ್‌ಮ್ಯಾನ್' ರೋಹಿತ್ ಏಕದಿನ ಅತ್ಯಧಿಕ ರನ್ ಸಿಡಿಸಿದ್ದು ನ.13ರ ಇದೇ ದಿನ!'ಹಿಟ್‌ಮ್ಯಾನ್' ರೋಹಿತ್ ಏಕದಿನ ಅತ್ಯಧಿಕ ರನ್ ಸಿಡಿಸಿದ್ದು ನ.13ರ ಇದೇ ದಿನ!

ನ್ಯೂಜಿಲ್ಯಾಂಡ್ ಎ ವಿರುದ್ಧ ಮೊದಲ ನಾಲ್ಕು ದಿನದಾಟಕ್ಕೆ ಭಾರತ ಎ ತಂಡ ಹೀಗಿದೆ
ಅಜಿಂಕ್ಯ ರಹಾನೆ (ನಾಯಕ), ಮುರಳೀ ವಿಜಯ್, ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ಹನುಮ ವಿಹಾರಿ, ಪಾರ್ಥಿವ್ ಪಟೇಲ್ (ವಿಕೆಟ್ ಕೀಪರ್), ಕೆ ಗೌತಮ್, ಶಹಬಾಜ್ ನದೀಮ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ದೀಪಕ್ ಚಹಾರ್, ರಜನೀಶ್ ಗುರ್ಬಾನಿ, ವಿಜಯ್ ಶಂಕರ್, ಕೆ.ಎಸ್. ಭಾರತ್ (ವಿಕೆಟ್ ಕೀಪರ್).

Story first published: Tuesday, November 13, 2018, 21:13 [IST]
Other articles published on Nov 13, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X