ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೆಮಿಫೈನಲ್‌ನಲ್ಲಿ ರೋಹಿತ್ ಶರ್ಮಾ ಈ ಎರಡು ಕೆಲಸ ಮಾಡಿದರೆ ಗೆಲುವು ನಮ್ಮದೇ ಎಂದ ಇರ್ಫಾನ್ ಪಠಾಣ್

Rohit Sharma Should Be His Best As A Captain And Batter In Semi Final Against England: Irfan Pathan

ನವೆಂಬರ್ 10ರಂದು ಅಡಿಲೇಡ್ ಓವಲ್‌ನಲ್ಲಿ ನಡೆಯಲಿರುವ ಸೆಮಿಫೈನಲ್‌ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಸೆಣೆಸಲು ಸಿದ್ಧವಾಗಿದೆ. ಪಂದ್ಯದ ವಿಜೇತರು ನವೆಂಬರ್ 13, ಭಾನುವಾರ ಮೆಲ್ಬೋರ್ನ್‌ನಲ್ಲಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಭಾರತದ ಮಾಜಿ ಕ್ರಿಕೆಟಿಗ, ರೋಹಿತ್ ಶರ್ಮಾ ಸೆಮಿಫೈನಲ್ ಪಂದ್ಯದಲ್ಲಿ ನಾಯಕನಾಗಿ ಮತ್ತು ಬ್ಯಾಟರ್ ಆಗಿ ತಂಡಕ್ಕೆ ಕೊಡುಗೆ ನೀಡಬೇಕಿದೆ ಎಂದು ಹೇಳಿದರು.

ನಾವು ಈ ತಂಡದೊಂದಿಗೆ ಫೈನಲ್ ಆಡಲು ಬಯಸುತ್ತೇವೆ ಎಂದ ಪಾಕ್ ತಂಡದ ಮೆಂಟರ್ನಾವು ಈ ತಂಡದೊಂದಿಗೆ ಫೈನಲ್ ಆಡಲು ಬಯಸುತ್ತೇವೆ ಎಂದ ಪಾಕ್ ತಂಡದ ಮೆಂಟರ್

"ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರಿಂದ ಎರಡು ವಿಷಯಗಳು ಬೇಕಾಗುತ್ತವೆ, ಬ್ಯಾಟರ್ ರೋಹಿತ್ ಶರ್ಮಾ ಮತ್ತು ಶಾಂತವಾದ ನಾಯಕ ರೋಹಿತ್ ಶರ್ಮಾ. ನಾನು ಯಾವಾಗಲೂ ಅವರ ನಾಯಕತ್ವದ ಅಭಿಮಾನಿಯಾಗಿದ್ದೇನೆ, ಅವರು ಒತ್ತಡದಲ್ಲಿ ಶಾಂತವಾಗಿ ಮತ್ತು ಆಟವನ್ನು ನಿರ್ವಹಿಸುವ ರೀತಿ ಉತ್ತಮವಾಗಿದೆ. ತಂಡಕ್ಕೆ ಕೂಲ್ ಕ್ಯಾಪ್ಟನ್ ಬೇಕು. ನಾಕೌಟ್ ಹಂತದಲ್ಲಿ ಅವನು ತನ್ನ ನಿರ್ಧಾರಗಳನ್ನು ಸರಿಯಾಗಿ ತೆಗೆದುಕೊಳ್ಳಬಹುದು." ಎಂದು ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಪ್ರಮುಖ ಸ್ಪಿನ್ನರ್ ಯುಜುವೇಂದ್ರ ಚಹಾಲ್‌ರನ್ನು ಕಣಕ್ಕಿಳಿಸಬೇಕು ಎಂದು ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

ಚಹಾಲ್ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಬೇಕು

ಚಹಾಲ್ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಬೇಕು

ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಚಹಾಲ್‌ರನ್ನು ತಂಡಕ್ಕೆ ಕರೆತರುವುದು ಬಹಳ ಮುಖ್ಯ ಎಂದು ಪಠಾಣ್ ಅಭಿಪ್ರಾಯಪಟ್ಟಿದ್ದಾರೆ. ಅವರನ್ನು ಆಡುವ ಬಳಗದಲ್ಲಿ ಸೇರಿಸಿಕೊಂಡರೆ ತಂಡ ಇನ್ನಷ್ಟು ಬಲಿಷ್ಠವಾಗುತ್ತದೆ ಎಂದು ಹೇಳಿದ್ದಾರೆ.

ಆದರೆ, ಅಗ್ರ ಕ್ರಮಾಂಕದಲ್ಲಿ ರೋಹಿತ್ ಶರ್ಮಾ ರನ್ ಗಳಿಸಬೇಕಿದೆ. ಈ ಮೊದಲು ಅವರು ಪ್ರಮುಖ ಪಂದ್ಯಗಳಲ್ಲಿ ಉತ್ತಮವಾಗಿ ಆಡಿರುವ ಇತಿಹಾಸ ಹೊಂದಿದ್ದಾರೆ. ಅದೇ ರೀತಿ ಸೆಮಿಫೈನಲ್‌ನಲ್ಲಿ ಸಿಡಿಯಬೇಕು ಎಂದು ಹೇಳಿದ್ದಾರೆ.

ಚಾಹಲ್ ಟೂರ್ನಿಯಲ್ಲಿ ಇನ್ನೂ ಒಂದು ಪಂದ್ಯವನ್ನು ಆಡಿಲ್ಲ. ಭಾರತೀಯ ಕ್ರಿಕೆಟ್ ಮ್ಯಾನೇಜ್‌ಮೆಂಟ್‌ ಬ್ಯಾಟಿಂಗ್‌ ಸಾಮರ್ಥ್ಯವನ್ನು ಪರಿಗಣಿಸಿ ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಅವರಿಗೆ ಆದ್ಯತೆ ನೀಡಿದೆ.

Ind vs Eng: ಪ್ರಮುಖ ಬೌಲರ್ ಬದಲಿಗೆ ಈತನಿಗೆ ಅವಕಾಶ ನೀಡಲು ಮುಂದಾದ ಇಂಗ್ಲೆಂಡ್

ಸ್ಫೋಟಕ ಇನ್ನಿಂಗ್ಸ್ ಆಡಬೇಕು

ಸ್ಫೋಟಕ ಇನ್ನಿಂಗ್ಸ್ ಆಡಬೇಕು

ರೋಹಿತ್ ಶರ್ಮಾ ಆರಂಭದಲ್ಲಿ ಕೆಲಹೊತ್ತು ಕ್ರೀಸ್‌ನಲ್ಲಿ ಕಾಲ ಕಳೆದರೆ ನಂತರ ಅವರು ಎದುರಾಳಿ ಬೌಲಿಂಗ್‌ ಅನ್ನು ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.

ಅವರು ಖಂಡಿತವಾಗಿಯೂ ಒಂದೆರಡು ಓವರ್ ಎಚ್ಚರಿಕೆಯಿಂದ ಆಡಬೇಕು. ಅವರು ಸ್ವತಃ ಸಮಯ ನೀಡಿದರೆ ಮತ್ತು ರೋಹಿತ್ ಅವರ ಫಾರ್ಮ್‌ಗೆ ಮರಳಿದರೆ ಉತ್ತಮ ಆರಂಭವನ್ನು ಪಡೆಯುತ್ತೇವೆ, ಇದು ಭಾರತಕ್ಕೆ ತುಂಬಾ ಒಳ್ಳೆಯದು ಏಕೆಂದರೆ ನಾವು ಮಧ್ಯಮ ಕ್ರಮಾಂಕದಲ್ಲಿ ಶಕ್ತಿಶಾಲಿಯಾಗಿದ್ದೇವೆ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಮತ್ತು ರಿಷಬ್ ಪಂತ್‌ರಂತಹ ಸ್ಫೋಟಕ ಆಟಗಾರರಿದ್ದಾರೆ ಎಂದು ಹೇಳಿದರು.

ಕ್ರಿಸ್ ವೋಕ್ಸ್ ವಿರುದ್ಧ ಎಚ್ಚರಿಕೆಯಿಂದ ಇರಬೇಕು

ಕ್ರಿಸ್ ವೋಕ್ಸ್ ವಿರುದ್ಧ ಎಚ್ಚರಿಕೆಯಿಂದ ಇರಬೇಕು

ಇಂಗ್ಲೆಂಡ್‌ನ ಕ್ರಿಸ್ ವೋಕ್ಸ್ ದೊಡ್ಡ ರೋಹಿತ್ ಶರ್ಮಾಗೆ ಅಪಾಯ ಎಂದು ನಾನು ಭಾವಿಸುತ್ತೇನೆ. ಅವರ ವಿರುದ್ಧ ರೋಹಿತ್ ಉತ್ತಮವಾಗಿ ಆಡಿದರೆ, ಉಳಿದ ಬೌಲರ್ ಗಳನ್ನು ಅನಾಯಾಸವಾಗಿ ಎದುರಿಸುತ್ತಾರೆ ಎಂದು ಇರ್ಫಾನ್ ಹೇಳಿದ್ದಾರೆ.

ರೋಹಿತ್ ಇದುವರೆಗಿನ ಪಂದ್ಯಾವಳಿಯಲ್ಲಿ ಐದು ಇನ್ನಿಂಗ್ಸ್‌ಗಳಲ್ಲಿ 109.87 ಸ್ಟ್ರೈಕ್ ರೇಟ್‌ನಲ್ಲಿ 89 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ಪಂದ್ಯದ ಮುನ್ನ ತರಬೇತಿ ಸಮಯದಲ್ಲಿ ಅವರು ತಮ್ಮ ಮುಂಗೈಗೆ ಹೊಡೆತವನ್ನು ಅನುಭವಿಸಿದರು ಆದರೆ ಗಾಯದಿಂದ ಚೇತರಿಸಿಕೊಂಡಿದ್ದು ಇಂಗ್ಲೆಂಡ್ ವಿರುದ್ಧ ಆಡಲಿದ್ದಾರೆ.

Story first published: Thursday, November 10, 2022, 6:00 [IST]
Other articles published on Nov 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X