ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹೇಡನ್-ಗಿಲ್‌ಕ್ರಿಸ್ಟ್‌ ದಾಖಲೆ ಮುರಿದ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ!

ರೋಹಿತ್, ಕೊಹ್ಲಿ ಒಟ್ಟಿಗೆ ಮಾಡಿದ ಸಾಧನೆ ಏನು ಗೊತ್ತಾ..? | Rohit | Virat | ICC | Cricket | Oneindia Kannada
Rohit Sharma-Virat Kohli surpass Matthew Hayden-Adam Gilchrist record

ಬೆಂಗಳೂರು, ಜನವರಿ 20: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಭಾರತ 7 ವಿಕೆಟ್‌ ಸುಲಭ ಗೆಲುವನ್ನಾಚರಿಸಿತ್ತು. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಪಡೆ 2-1ರ ಜಯ ಸಾಧಿಸಿತ್ತು. ಸರಣಿಯ ಆರಂಭಿಕ ಪಂದ್ಯದಲ್ಲಿ 10 ವಿಕೆಟ್ ಹೀನಾಯವಾಗಿ ಸೋತು ಸರಣಿ ಸೋಲಿನ ಭೀತಿಯಲ್ಲಿದ್ದ ಭಾರತ ಕಡೆಗೂ ನಿಟ್ಟುಸಿರು ಬಿಟ್ಟಿದೆ.

ಟಿ20 ಇತಿಹಾಸದಲ್ಲೆ ಕೆಟ್ಟ ದಾಖಲೆ ಬರೆದ ಡಿ ವಿಲಿಯರ್ಸ್ ತಂಡ: ವೀಡಿಯೋಟಿ20 ಇತಿಹಾಸದಲ್ಲೆ ಕೆಟ್ಟ ದಾಖಲೆ ಬರೆದ ಡಿ ವಿಲಿಯರ್ಸ್ ತಂಡ: ವೀಡಿಯೋ

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಐಯ್ಯರ್ ಬ್ಯಾಟಿಂಗ್‌ ಆತಿಥೇಯರಿಗೆ ಸುಲಭ ಗೆಲುವು ತಂದಿತ್ತು. ಭಾರತದದ ವಿಜಯಕ್ಕೆ ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜಾ ಅವರ ಮಾರಕ ಬೌಲಿಂಗ್‌ ದಾಳಿಯೂ ಕಾರಣವಾಗಿತ್ತು.

ಭಾರತ vs ಆಸ್ಟ್ರೇಲಿಯಾ: ನಿರ್ಣಾಯಕ ಪಂದ್ಯದಲ್ಲಿ ರೋಹಿತ್ ಶರ್ಮಾ ದಾಖಲೆಭಾರತ vs ಆಸ್ಟ್ರೇಲಿಯಾ: ನಿರ್ಣಾಯಕ ಪಂದ್ಯದಲ್ಲಿ ರೋಹಿತ್ ಶರ್ಮಾ ದಾಖಲೆ

ಇದೇ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪ್ರತ್ಯೇಕ ವೈಯಕ್ತಿಕ ದಾಖಲೆಗಳನ್ನು ನಿರ್ಮಿಸಿದ್ದಾರಲ್ಲದೆ, ಜೊತೆಯಾಟಕ್ಕಾಗಿ ಅಪರೂಪದ ದಾಖಲೆಯೊಂದಕ್ಕೂ ಕಾರಣರಾಗಿದ್ದಾರೆ.

ಸ್ಟೀವ್ ಸ್ಮಿತ್ ಶತಕದಾಟ

ಸ್ಟೀವ್ ಸ್ಮಿತ್ ಶತಕದಾಟ

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾದಿಂದ 131, ಮಾರ್ನಸ್ ಲ್ಯಾಬುಸ್ಚಾಗ್ನೆ 54, ಅಲೆಕ್ಸ್ ಕ್ಯಾರಿ 35 ರನ್‌ನೊಂದಿಗೆ ಪ್ರವಾಸಿ ತಂಡ, 50 ಓವರ್‌ಗೆ 9 ವಿಕೆಟ್‌ನಷ್ಟದಲ್ಲಿ 286 ರನ್‌ ಮಾಡಿತ್ತು. ಆಸೀಸ್‌ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿದ್ದು ಭಾರತದ ಬೌಲರ್‌ಗಳು. ಮೊಹಮ್ಮದ್ ಶಮಿ 63ಕ್ಕೆ 4 ವಿಕೆಟ್, ರವೀಂದ್ರ ಜಡೇಜಾ 44ಕ್ಕೆ 2 ವಿಕೆಟ್‌ ಮುರಿದು ಆಸ್ಟ್ರೇಲಿಯಾವನ್ನು ಕಾಡಿದ್ದರು.

ರೋಹಿತ್-ಕೊಹ್ಲಿ ಭರ್ಜರಿ ಬ್ಯಾಟಿಂಗ್

ರೋಹಿತ್-ಕೊಹ್ಲಿ ಭರ್ಜರಿ ಬ್ಯಾಟಿಂಗ್

ಚೇಸಿಂಗ್‌ಗೆ ಇಳಿದ ಭಾರತದಿಂದ ಕೆಎಲ್ ರಾಹುಲ್ 12.3ನೇ ಓವರ್‌ಗೆ ಔಟಾದರು. ಅನಂತರ ಬಂದ ನಾಯಕ ವಿರಾಟ್ ಕೊಹ್ಲಿ (89 ರನ್), ಆರಂಭಿಕ ಬ್ಯಾಟ್ಸ್‌ಮನ್, ಉಪನಾಯಕ ರೋಹಿತ್ ಶರ್ಮಾಗೆ (119 ರನ್) ಉತ್ತಮ ಜೊತೆಯಾಟ ನೀಡಿದರು. ಇಬ್ಬರ ಜೊತೆಯಾಟದಿಂದ ತಂಡಕ್ಕೆ 100+ ರನ್‌ ಸೇರ್ಪಡೆಗೊಂಡಿತು.

ಜೊತೆಯಾಟದ ದಾಖಲೆ ನಿರ್ಮಾಣ

ಜೊತೆಯಾಟದ ದಾಖಲೆ ನಿರ್ಮಾಣ

ಬೆಂಗಳೂರು ಪಂದ್ಯದಲ್ಲಿ ರೋಹಿತ್‌-ವಿರಾಟ್ ಜೋಡಿಗೆ 100+ ರನ್ ದೊರೆತಿದ್ದು ಇದು 11ನೇ ಸಾರಿ. ಇದು ಏಕದಿನದಲ್ಲಿ ವಿಶ್ವದಲ್ಲಿ ಜೋಡಿಯೊಂದು ಅತೀ ಹೆಚ್ಚುಬಾರಿ 100+ ರನ್ ಗಳಿಸಿದ ಎರಡನೇ ದಾಖಲೆಗೆ ಕಾರಣವಾಗಿದೆ. ಈ ಸಾಧನೆ ಸಾಲಿನಲ್ಲಿ ಭಾರತದ ಸಚಿನ್ ತೆಂಡೂಲ್ಕರ್-ಸೌರವ್ ಗಂಗೂಲಿ ಜೋಡಿ ಅಗ್ರ ಸ್ಥಾನದಲ್ಲಿದೆ.

ಹೇಡನ್-ಗಿಲ್‌ಕ್ರಿಸ್ಟ್‌ ದಾಖಲೆ ಪತನ

ಹೇಡನ್-ಗಿಲ್‌ಕ್ರಿಸ್ಟ್‌ ದಾಖಲೆ ಪತನ

ಏಕದಿನದಲ್ಲಿ ಅತೀ ಹೆಚ್ಚು ಬಾರಿ 100+ ರನ್ ಜೊತೆಯಾಟ ನೀಡಿ, ದಾಖಲೆ ಸಾಲಿನಲ್ಲಿ ದ್ವಿತೀಯ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾದ ಆ್ಯಡಂ ಗಿಲ್‌ಕ್ರಿಸ್ಟ್‌ ಮತ್ತು ಮ್ಯಾಥ್ಯೂ ಹೇಡನ್ ಜೋಡಿಯನ್ನು ಕೊಹ್ಲಿ-ರೋಹಿತ್ ಜೋಡಿ ಮೀರಿಸಿದೆ. ಗಿಲ್‌ಕ್ರಿಸ್ಟ್‌-ಹೇಡನ್ ಜೋಡಿ 52 ಇನ್ನಿಂಗ್ಸ್‌ಗಲ್ಲಿ 10 ಬಾರಿ 100+ ರನ್ ಗಳಿಸಿದ್ದರು.

ಭಾರತದ ಜೋಡಿಯಿಂದ 17 ಶತಕಗಳು

ಭಾರತದ ಜೋಡಿಯಿಂದ 17 ಶತಕಗಳು

ಏಕದಿನದಲ್ಲಿ ಜೊತೆಯಾಟದಲ್ಲಿ ಅತೀ ಹೆಚ್ಚು ಬಾರಿ 100+ ರನ್ ಗಳಿಸಿದ ದಾಖಲೆಯಲ್ಲಿ ಮೊದಲ ಸ್ಥಾನದಲ್ಲಿರುವ ಸಚಿನ್-ಗಂಗೂಲಿ ಒಟ್ಟಿಗೆ 17 ಬಾರಿ ಈ ಸಾಧನೆ ತೋರಿದ್ದಾರೆ. ಈ ದಾಖಲೆಗಾಗಿ ಇಬ್ಬರೂ ಒಟ್ಟಿಗೆ 91 ಇನ್ನಿಂಗ್ಸ್‌ಗಳನ್ನು ಬಳಸಿಕೊಂಡಿದ್ದಾರೆ. ಇದರೊಂದಿಗೆ ಏಕದಿನದಲ್ಲಿ ಆರಂಭಿಕರಾಗಿ ವೇಗದಲ್ಲಿ 9000+ ರನ್ ದಾಖಲೆಗೆ ರೋಹಿತ್ ಗುರುತಿಸಿಕೊಂಡರೆ, ನಾಯಕನಾಗಿ ವೇಗವಾಗಿ 5000 ರನ್ ದಾಖಲೆ ಕೊಹ್ಲಿ ಬರೆದಿದ್ದಾರೆ.

Story first published: Monday, January 20, 2020, 17:45 [IST]
Other articles published on Jan 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X