ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ರಶೀದ್ ಖಾನ್: ಈ ಸಾಧನೆ ಮಾಡಿದ 2ನೇ ಬೌಲರ್

SA 20: Rashid Khan Completed 500 Wickets In The T20 Format

ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಎಸ್‌ಎ20 ಲೀಗ್‌ನಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್ ಪಡೆದ ರಶೀದ್ ಖಾನ್ ಹೊಸ ಇತಿಹಾಸ ನಿರ್ಮಿಸಿದರು.

ಟಿ20 ಮಾದರಿ ಕ್ರಿಕೆಟ್‌ನಲ್ಲಿ 500 ವಿಕೆಟ್‌ ಪಡೆದ ಎರಡನೇ ಬೌಲರ್ ಎನ್ನುವ ಖ್ಯಾತಿಗೆ ರಶೀದ್ ಖಾನ್ ಪಾತ್ರರಾಗಿದ್ದಾರೆ. ಇನ್ನೂ 24 ವರ್ಷದ ರಶೀದ್ ಖಾನ್‌ ಟಿ20 ಮಾದರಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಅಗ್ರಸ್ಥಾನದಲ್ಲಿರುವ ಡ್ವೇನ್‌ ಬ್ರಾವೋ ಅವರ ದಾಖಲೆಯನ್ನು ಮುರಿಯುವ ಸಾಧ್ಯತೆ ಹೆಚ್ಚಾಗಿದೆ.

IND Vs NZ 3rd ODI: ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ: ಶಮಿ, ಸಿರಾಜ್‌ಗೆ ವಿಶ್ರಾಂತಿIND Vs NZ 3rd ODI: ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ: ಶಮಿ, ಸಿರಾಜ್‌ಗೆ ವಿಶ್ರಾಂತಿ

ತಮ್ಮ 16ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ರಶೀದ್‌ ಖಾನ್‌ ಎಂಟು ವರ್ಷಗಳಲ್ಲೇ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 2015 ಅಕ್ಟೋಬರ್ 26 ರಂದು ರಶೀದ್ ಖಾನ್ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.

2017ರ ಐಪಿಎಲ್‌ ಆವೃತ್ತಿಯಲ್ಲಿ ರಶೀದ್ ಖಾನ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮೂಲಕ ಪದಾರ್ಪಣೆ ಮಾಡಿದರು. 2022ರ ಆವೃತ್ತಿಯಿಂದ ಅವರು ಗುಜರಾತ್ ಜೈಂಟ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ.

ವಿಶ್ವದ ಪ್ರಮುಖ ಲೀಗ್‌ಗಳಲ್ಲಿ ಆಡಿರುವ ರಶೀದ್ ಖಾನ್

ಇಂಡಿಯನ್ ಪ್ರೀಮಿಯರ್ ಲೀಗ್, ಬಿಗ್ ಬ್ಯಾಷ್ ಲೀಗ್, ಪಾಕಿಸ್ತಾನ ಸೂಪರ್ ಲೀಗ್, ಬಾಂಗ್ಲಾದೇಶ ಪ್ರೀಮಿಯರ್ ಲೀಗ್, ನ್ಯಾಟ್‌ವೆಸ್ಟ್ ಟಿ20 ಲೀಗ್, ಸೂಪರ್ ಸ್ಮ್ಯಾಶ್ ಲೀಗ್, ಶ್ರೀಲಂಕಾ ಪ್ರೀಮಿಯರ್ ಲೀಗ್ ಸೇರಿದಂತೆ ವಿಶ್ವದಾದ್ಯಂತ ನಡೆಯುವ ಪ್ರಮುಖ ಟಿ20 ಲೀಗ್‌ಗಳಲ್ಲಿ ಆಡಿದ್ದಾರೆ. ರಶೀದ್ ಖಾನ್ ಸದ್ಯ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಎಸ್‌ಎ 20 ಲೀಗ್‌ನಲ್ಲಿ ಎಂಐ ಕೇಪ್‌ಟೌನ್‌ ತಂಡದ ನಾಯಕನಾಗಿದ್ದಾರೆ.

ಇದುವರೆಗೂ ಆಡಿರುವ ಎಲ್ಲಾ ಟಿ20 ಮಾದರಿ ಪಂದ್ಯಗಳಲ್ಲಿ ಅವರು 500 ವಿಕೆಟ್ ಪಡೆದುಕೊಂಡಿದ್ದಾರೆ. ವೆಸ್ಟ್ ಇಂಡೀಸ್‌ನ ದಿಗ್ಗಜ ಡ್ವೇನ್ ಬ್ರಾವೋ 614 ವಿಕೆಟ್‌ಗಳನ್ನು ಪಡೆದು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 474 ವಿಕೆಟ್ ಪಡೆದಿರುವ ವೆಸ್ಟ್ ಇಂಡೀಸ್‌ನ ಮತ್ತೊಬ್ಬ ಸ್ಪಿನ್ನರ್ ಮೂರನೇ ಸ್ಥಾನದಲ್ಲಿದ್ದಾರೆ.

ಐಪಿಎಲ್‌ನಲ್ಲಿ ಇದುವರೆಗೂ 92 ಪಂದ್ಯಗಳನ್ನಾಡಿರುವ ರಶೀದ್ ಖಾನ್, 6.38 ಎಕಾನಮಿ ಮತ್ತು 20.83 ಸರಾಸರಿಯಲ್ಲಿ 112 ವಿಕೆಟ್ ಪಡೆದಿದ್ದಾರೆ. ಅಫ್ಘಾನಿಸ್ತಾನದ ಪ್ರಮುಖ ಬೌಲರ್ ಆಗಿರುವ ರಶೀದ್ ಖಾನ್, ಮುಂದಿನ ದಿನಗಳಲ್ಲಿ ಮತ್ತಷ್ಟು ದಾಖಲೆಗಳನ್ನು ನಿರ್ಮಿಸುವ ಉತ್ಸಾಹದಲ್ಲಿದ್ದಾರೆ.

Story first published: Tuesday, January 24, 2023, 14:51 [IST]
Other articles published on Jan 24, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X