ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

SA Vs Eng 1st ODI: ಚೇಸಿಂಗ್‌ನಲ್ಲಿ ಎಡವಿದ ಇಂಗ್ಲೆಂಡ್ : ದಕ್ಷಿಣ ಆಫ್ರಿಕಾಗೆ 27 ರನ್‌ಗಳ ಜಯ

SA Vs Eng 1st ODI: South Africa Defeat England By 27 Runs

3 ಪಂದ್ಯಗಳ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಇಂಗ್ಲೆಂಡ್ ವಿರುದ್ಧ 27 ರನ್‌ಗಳ ರೋಚಕ ಜಯ ಸಾಧಿಸಿದೆ. ಈ ಜಯದ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

298 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್‌ ಉತ್ತಮ ಆರಂಭ ಪಡೆದ ಹೊರತಾಗಿಯೂ ಅಂತಿಮ ಹಂತದಲ್ಲಿ ಎಡವಿತು. ಜೇಸನ್ ರಾಯ್ ಶತಕ ಗಳಿಸಿದರೂ ತಂಡವನ್ನು ಗೆಲ್ಲಿಸಲಾಗಲಿಲ್ಲ. ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದ ದಕ್ಷಿಣ ಆಫ್ರಿಕಾ ಬೌಲರ್ ಗಳು ಇಂಗ್ಲೆಂಡ್ ತಂಡವನ್ನು ಆಲೌಟ್ ಮಾಡಿದರು.

Ranji Trophy 2022-23: ಹೊರಬಿದ್ದ ಮುಂಬೈ; ಕರ್ನಾಟಕ ಸೇರಿ ಕ್ವಾರ್ಟರ್ ಫೈನಲ್ ತಲುಪಿದ ಅಗ್ರ 8 ತಂಡಗಳುRanji Trophy 2022-23: ಹೊರಬಿದ್ದ ಮುಂಬೈ; ಕರ್ನಾಟಕ ಸೇರಿ ಕ್ವಾರ್ಟರ್ ಫೈನಲ್ ತಲುಪಿದ ಅಗ್ರ 8 ತಂಡಗಳು

ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ರಾಸ್ಸಿ ವ್ಯಾನ್ ಡೆರ್ ಡಸೆನ್ ಅದ್ಭುತ ಶತಕದ ನೆರವಿನಿಂದ 298 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ನಾಯಕ ಟೆಂಬಾ ಬವುಮಾ ಮತ್ತು ಕ್ವಿಂಟನ್ ಡಿ ಕಾಕ್ ಮೊದಲನೇ ವಿಕೆಟ್‌ಗೆ 61 ರನ್‌ ಕಲೆಹಾಕುವ ಮೂಲಕ ಉತ್ತಮ ಆರಂಭ ಒದಗಿಸಿದರು.

ಡಿ ಕಾಕ್ 41 ಎಸೆತಗಳಲ್ಲಿ 37 ರನ್ ಗಳಿಸಿದರೆ, ಬವುಮಾ 28 ಎಸೆತಗಳಲ್ಲಿ 36 ರನ್ ಗಳಿಸಿ ಔಟಾದರು. ನಂತರ ಬಂದ ವ್ಯಾನ್ ಡರ್ ಡಸೆನ್ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. 117 ಎಸೆತಗಳಲ್ಲಿ 6 ಬೌಂಡರಿ 1 ಸಿಕ್ಸರ್ ಸಹಿತ 111 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

Ind vs NZ1st T20: ವಾಶಿಂಗ್ಟನ್ 'ಸುಂದರ' ಆಟ ವ್ಯರ್ಥ: ಭಾರತಕ್ಕೆ ಮೊದಲ ಪಂದ್ಯದಲ್ಲೇ ಸೋಲಿನ ಆಘಾತInd vs NZ1st T20: ವಾಶಿಂಗ್ಟನ್ 'ಸುಂದರ' ಆಟ ವ್ಯರ್ಥ: ಭಾರತಕ್ಕೆ ಮೊದಲ ಪಂದ್ಯದಲ್ಲೇ ಸೋಲಿನ ಆಘಾತ

ದಕ್ಷಿಣ ಆಫ್ರಿಕಾ ಸವಾಲಿನ ಮೊತ್ತ

ದಕ್ಷಿಣ ಆಫ್ರಿಕಾ ಸವಾಲಿನ ಮೊತ್ತ

ಐಡೆನ್ ಮರ್ಕ್ರಾಮ್ 13 ರನ್ ಗಳಿಸಿ ಔಟಾಗಿ ನಿರಾಸೆ ಮೂಡಿಸಿದರು. ಹೆನ್ರಿಕ್ ಕ್ಲಸೀನ್ 32 ಎಸೆತಗಳಲ್ಲಿ 30 ರನ್ ಗಳಿಸಿದರು. ಡೇವಿಡ್ ಮಿಲ್ಲರ್ ಅರ್ಧಶತಕ ಸಿಡಿಸುವ ಮೂಲಕ ಅಂತಿಮ ಹಂತದಲ್ಲಿ ಮಿಂಚಿದರು. 56 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸ್ ಗಳಿಸುವ ಮೂಲಕ 53 ರನ್ ಗಳಿಸಿದರು.

ಅಂತಿಮವಾಗಿ ದಕ್ಷಿಣ ಆಫ್ರಿಕಾ 7 ವಿಕೆಟ್ ಕಳೆದುಕೊಂಡು 298 ರನ್ ಗಳಿಸಿದರು. ಇಂಗ್ಲೆಂಡ್ ಪರವಾಗಿ ಸ್ಯಾಮ್ ಕರನ್ 3 ವಿಕೆಟ್ ಪಡೆದರೆ, ಜೋಫ್ರಾ ಆರ್ಚರ್, ಮೊಯೀನ್ ಅಲಿ, ಆದಿಲ್ ರಶೀದ್, ಒಲೀ ಸ್ಟೋನ್ ತಲಾ ವಿಕೆಟ್ ಪಡೆದು ಮಿಂಚಿದರು.

ಅಂತಿಮ ಹಂತದಲ್ಲಿ ಎಡವಿದ ಇಂಗ್ಲೆಂಡ್

ಅಂತಿಮ ಹಂತದಲ್ಲಿ ಎಡವಿದ ಇಂಗ್ಲೆಂಡ್

299 ರನ್‌ಗಳ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಅತ್ಯುತ್ತಮ ಆರಂಭ ಪಡೆಯಿತು. ಜೇಸನ್ ರಾಯ್ ಮತ್ತು ಡೇವಿಡ್ ಮಲನ್ ಸ್ಫೋಟಕ ಆಟವಾಡಿದರು. 19.3 ಓವರ್ ಗಳಲ್ಲಿ ಮೊದಲ ವಿಕೆಟ್‌ಗೆ 146 ರನ್ ಗಳಿಸಿದರು. ಡೇವಿಡ್ ಮಲನ್ 55 ಎಸೆತಗಳಲ್ಲಿ 59 ರನ್ ಗಳಿಸಿದರು.

ನಂತರ ಬಂದ ಬೆನ್ ಡಕೆಟ್ (3), ಹ್ಯಾರರಿ ಬ್ರೂಕ್ (0) ಬೇಗನೆ ಪೆವಿಲಿಯನ್ ಸೇರಿದರು. ನಾಯಕ ಜೋಸ್ ಬಟ್ಲರ್ 36 ರನ್ ಗಳಿಸಿ ಜೇಸನ್ ರಾಯ್‌ಗೆ ಸಾಥ್ ನೀಡಿದರು. ಜೇಸನ್ ರಾಯ್ 91 ಎಸೆತಗಳಲ್ಲಿ 11 ಬೌಂಡರಿ, 4 ಸಿಕ್ಸರ್ ಸಹಿತ 113 ರನ್ ಗಳಿಸಿದರು.

ದಕ್ಷಿಣ ಆಫ್ರಿಕಾ ಉತ್ತಮ ಬೌಲಿಂಗ್

ದಕ್ಷಿಣ ಆಫ್ರಿಕಾ ಉತ್ತಮ ಬೌಲಿಂಗ್

ಜೇಸನ್ ರಾಯ್ ಔಟಾಗುತ್ತಿದ್ದಂತೆ ಇಂಗ್ಲೆಂಡ್ ಪತನ ಆರಂಭವಾಯಿತು. ಮೊಯೀನ್ ಅಲಿ 17 ರನ್, ಡೇವಿಡ್ ವಿಲ್ಲೆ 8 ರನ್, ಆದಿಲ್ ರಶೀದ್ ಅಜೇಯ 14, ಜೋಫ್ರಾ ಆರ್ಚರ್ 0, ಒಲೀ ಸ್ಟೋನ್ 1 ರನ್‌ಗಳಿಗೆ ಔಟ್ ಆದರು. 44.2 ಓವರ್ ಗಳಲ್ಲಿ 271 ರನ್ ಗಳಿಸಿ ಆಲೌಟ್ ಆಗುವ ಮೂಲಕ 27 ರನ್‌ಗಳ ಸೋಲನುಭವಿಸಿದೆ.

ಆನ್ರಿಕ್ ನೋಕಿಯಾ 4 ವಿಕೆಟ್ ಪಡೆದು ಮಿಂಚಿದರು, ಸಿಸಾಂಡ ಮಗಲ 3 ವಿಕೆಟ್ ಪಡೆದರು, ಕಗಿಸೋ ರಬಾಡ 2 ವಿಕೆಟ್ ಪಡೆದರೆ, ತಬ್ರೀಜ್ ಶಂಸಿ 1 ವಿಕೆಟ್ ಪಡೆದರು.

Story first published: Saturday, January 28, 2023, 8:34 [IST]
Other articles published on Jan 28, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X