ಪಾಕಿಸ್ತಾನ ಭಾರತದಿಂದ ಈ ವಿಚಾರದಲ್ಲಿ ಸಾಕಷ್ಟು ಕಲಿಯಬೇಕಿದೆ: ಪಾಕಿಸ್ತಾನದ ಮಾಜಿ ನಾಯಕನ ಹೇಳಿಕೆ

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಭಾರತದ ದೇಶೀಯ ಕ್ರಿಕೆಟ್‌ನ ವ್ಯವಸ್ಥೆಯ ಬಗ್ಗೆ ಭಾರೀ ಪ್ರಶಂಸೆಯನ್ನು ವ್ಯಕ್ತಪಡಿಸಿ ಮಾತನಾಡಿದ್ದಾರೆ. ಪಾಕಿಸ್ತಾನ ಇದರಿಂದ ಪಾಠವನ್ನು ಕಲಿಯಬೇಕಿದ್ದು ಹಾಗಾದಲ್ಲಿ ಮಾತ್ರವೇ ಪಾಕಿಸ್ತಾನ ಉತ್ಕೃಷ್ಟ ಮಟ್ಟದ ಆಟಗಾರರನ್ನು ಹೊಂದಲು ಸಾಧ್ಯ ಎಂದಿದ್ದಾರೆ ಸಲ್ಮಾನ್ ಬಟ್.

38ರ ಹರೆಯದ ಸಲ್ಮಾನ್ ಬಟ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದು ಪಾಕಿಸ್ತಾನದ ದೇಶೀಯ ಕ್ರಿಕೆಟ್ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಭಾರತದ ಕ್ರಿಕೆಟ್ ವ್ಯವಸ್ಥೆಯಿಂದ ಪಾಕಿಸ್ತಾನ ಕ್ರಿಕೆಟ್ ತಂಡ ಮತ್ತು ಮ್ಯಾನೇಜ್‌ಮೆಂಟ್ ಯಾವ ರೀತಿಯ ಪಾಠ ಕಲಿಯಬೇಕು ಎಂಬುದನ್ನು ಹಂಚಿಕೊಂಡಿದ್ದಾರೆ.

ಪಾಕಿಸ್ತಾನ ತಂಡ ಇತ್ತೀಚೆಗೆ ತವರಿನಲ್ಲಿಯೇ ಸಾಲು ಸಾಲು ಸೋಲು ಅನುಭವಿಸಿ ಮುಖಭಂಗಕ್ಕೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಸಾಕಷ್ಟು ಟೀಕೆಗಳು ಕೂಡ ವ್ಯಕ್ತವಾಗಿತ್ತು. ಈ ವಿಚಾರವನ್ನು ಮುಂದಿಟ್ಟು ಇದೀಗ ಸಲ್ಮಾನ್ ಬಟ್ ಕೂಡ ಮಾತನಾಡಿದ್ದಾರೆ. ಮುಂಬರುವ ದಿನಗಳಲ್ಲಿ ಅದ್ಭುತ ಪ್ರತಿಭೆಗಳನ್ನು ಹುಟ್ಟುಹಾಕಬೇಕಿದ್ದರೆ ಪಾಕಿಸ್ತಾನ ಕ್ರಿಕೆಟ್ ತನ್ನ ದೇಶೀಯ ಕ್ರಿಕೆಟ್‌ನ ವ್ಯವಸ್ಥೆಯನ್ನು ತಳಮಟ್ಟದಲ್ಲಿ ಪರಿಷ್ಕರಿಸುವ ಅಗತ್ಯವಿದೆ ಎಂದಿದ್ದಾರೆ ಸಲ್ಮಾನ್ ಬಟ್.

"ಪಾಕಿಸ್ತಾನ ಹಾಗೂ ಇತರ ಕೆಲ ತಂಡಗಳು ಇತರ ತಂಡಗಳು ಪಂದ್ಯವನ್ನು ಗೆಲ್ಲುವ ಅವಕಾಶವಿದ್ದರೂ ಬೃಹತ್ ಸ್ಕೋರ್‌ಗಳನ್ನು ಬೆನ್ನಟ್ಟುವಾಗ ಗೆಲ್ಲಲು ಹೆಣಗಾಡುತ್ತವೆ. ಆದರೆ ಭಾರತ ತಂಡ ದೀರ್ಘ ಇನ್ನಿಂಗ್ಸ್‌ಗಳನ್ನು ಆಡುವ ಮನೋಧರ್ಮವನ್ನು ಹೊಂದಿರುವ ಬ್ಯಾಟರ್‌ಗಳನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ವಯೋಮಾನದ ಕ್ರಿಕೆಟ್‌ಇಂದಲೂ ಆಟಗಾರರಿಗೆ ಬೆಂಬಲವನ್ನು ನೀಡುತ್ತಾ ಬಲರಾಗುತ್ತದೆ" ಎಂದಿದ್ದಾರೆ ಸಲ್ಮಾನ್ ಬಟ್.

"ಭಾರತದ ಈ ವ್ಯವಸ್ಥೆಯನ್ನು ಪಾಕಿಸ್ತಾನ ಕಲಿತುಕೊಳ್ಳಬೇಕಿದೆ. ಅಂಥಾ ಟೂರ್ನಮೆಂಟ್‌ಗಳನ್ನು ಆಯೋಜಿಸುವ ಅಗತ್ಯವಿದ್ದು ಈ ಮೂಲಕ ಯುವ ಆಟಗಾರರಿಗೆ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವ ಅವಕಾಶ ದೊರೆಯುತ್ತದೆ. ಐದು ಹತ್ತು ವರ್ಷಗಳಲ್ಲಿ ಈ ಕೌಶಲ್ಯಗಳು ಅವರೊಳಗೆ ಬೆರೆತುಕೊಳ್ಳುತ್ತದೆ" ಎಂದಿದ್ದಾರೆ ಸಲ್ಮಾನ್ ಬಟ್.

For Quick Alerts
ALLOW NOTIFICATIONS
For Daily Alerts
Story first published: Friday, January 20, 2023, 18:59 [IST]
Other articles published on Jan 20, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X