ವಿಲಿಯಮ್ಸನ್‌ ಬಗ್ಗೆ ಟೀಮ್‌ ಇಂಡಿಯಾ ಕೋಚ್‌ ರವಿ ಶಾಸ್ತ್ರಿ ಹೇಳಿದ್ದಿದು!

ಕ್ಯಾಪ್ಟನ್ಸಿಯಲ್ಲಿ ಧೋನಿಯನ್ನೇ ಮೀರಿಸಿದ ವಿಲಿಯಮ್ಸನ್..! ಹೇಗೆ ಗೊತ್ತಾ..? | Oneindia Kannada

ಲಂಡನ್‌, ಜುಲೈ 17: ಇತ್ತೇಚೆಗಷ್ಟೇ ಅಂತ್ಯಗೊಂಡ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ನ್ಯೂಜಿಲೆಂಡ್‌ ತಂಡ ಬೌಂಡರಿಗಳ ಆಧಾರದ ಮೇರೆಗೆ ರನ್ನರ್ಸ್ಅಪ್‌ ಸ್ಥಾನ ಪಡೆದ ಬಳಿಕ ನಾಯಕ ಕೇನ್‌ ವಿಲಿಯಮ್ಸನ್‌ ನಡೆದುಕೊಂಡ ರೀತಿಯನ್ನು ಟೀಮ್‌ ಇಂಡಿಯಾದ ಮುಖ್ಯ ಕೋಚ್‌ ರವಿ ಶಾಸ್ತ್ರಿ ಕೊಂಡಾಡಿದ್ದಾರೆ.

ಕಳೆದ ಭಾನುವಾರ ಒಲಂಡನ್‌ನ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್‌ ತಂಡಗಳು ನಿಗದಿತ ಓವರ್‌ಗಳಲ್ಲಿ ಬಳಿಕ ಸೂಪರ್‌ ಓವರ್‌ನಲ್ಲೂ ಸಮಬಲ ಸಾಧಿಸಿದ್ದವು, ಬಳಿಕ ಫಲಿತಾಂಶ ತರುವ ಸಲುವಾಗಿ ಇತ್ತಂಡಗಳು ಗಳಿಸಿದ ಬೌಂಡರಿಗಳ ಆಧಾರದ ಮೇರೆಗೆ ಇಂಗ್ಲೆಂಡ್‌ಗೆ ಪ್ರಶಸ್ತಿ ಒಲಿಯಿತು.

2019-2020ರಲ್ಲಿ ಭಾರತ ತವರಿನಲ್ಲಿ ಆಡುವ ಕ್ರಿಕೆಟ್‌ ಸರಣಿಗಳ ವಿವರ ಇಲ್ಲಿದೆ

ಇಷ್ಟು ಕಡಿಮೆ ಅಂತರದಲ್ಲಿ ನ್ಯೂಜಿಲೆಂಡ್‌ ತಂಡಕ್ಕೆ ಸೋಲೆದುರಾದರೂ ಎಲ್ಲಿಯೂ ಕೂಡ ನ್ಯೂಜಿಲೆಂಡ್‌ ತಂಡದ ಘನೆತಗೆ ದಕ್ಕೆಯಾಗದಂತೆ ನಡೆದುಕೊಳ್ಳದೆ ಅತ್ಯುನ್ನ ರೀತಿಯಲ್ಲಿ ನಾಯಕನ ಜವಾಬ್ದಾರಿ ನಿಭಾಯಿಸಿದ ಕಿವೀಸ್‌ ಕಪ್ತಾನ ಕೇನ್‌ ವಿಲಿಯಮ್ಸನ್‌ ಅವರನ್ನು ಭಾರತ ತಂಡದ ಕೋಚ್‌ ರವಿ ಶಾಸ್ತ್ರಿ ಟ್ವಿಟರ್‌ ಮೂಲಕ ಗುಣಗಾನ ಮಾಡಿದ್ದಾರೆ.

"ನಿಮ್ಮ ಶಾಂತ ಸ್ವಭಾವ ಮತ್ತು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ನಿಜಕ್ಕೂ ಅದ್ಭುತ. ಕಳೆದ 48 ಗಂಡೆಗಳ ಅವಧಿಯಲ್ಲಿ ನೀವು ಕಾಯ್ದುಕೊಂಡ ಮೌನ ಮತ್ತು ಘನತೆ ಅತ್ಯದ್ಭುತ. ವಿಶ್ವಕಪ್‌ ಟ್ರೋಫಿ ಮೇಲೆ ನಿಮ್ಮ ಒಂದು ಕೈ ಇತ್ತೆಂಬುದು ನಿಮಗೆ ತಿಳಿದಿದತ್ತು. ನಿಮ್ಮಿಂದ ಮತ್ತೊಮ್ಮೆ ಇದು ಸಾಧ್ಯವಿದೆ, ದೇವರು ಒಳ್ಳೆಯದನ್ನು ಮಾಡಲಿ," ಎಂದು ರವಿ ಶಾಸ್ತ್ರಿ ಟ್ವೀಟ್‌ ಮಾಡಿದ್ದಾರೆ.

ಧೋನಿಗೆ ಟೀಮ್‌ ಇಂಡಿಯಾದ ಕದ ಮುಚ್ಚುವ ಸಮಯ ಹತ್ತಿರ?!

ಇದಕ್ಕೂ ಮುನ್ನ ಕೊನೆಗೂ ಮೌನ ಮುರಿದಿದ್ದ ಕೇನ್‌ ವಿಲಿಯಮ್ಸನ್‌, ಬೌಂಡರಿಗಳ ಆಧಾರದ ಮೇರೆಗೆ ಸೋಲೆದುರಾದುದ್ದನ್ನು ನುಂಗಲು ಬಹಳ ಕಷ್ಟವಾಯಿತು ಎಂದಿದ್ದರು.

ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ನ್ಯೂಜಿಲೆಂಡ್‌ ತಂಡ ಸತತ ಎರಡನೇ ಬಾರಿ ರನ್ನರ್ಸ್ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿದೆ. 2015ರಲ್ಲಿಯೂ ಫೈನಲ್‌ ತಲುಪಿದ್ದ ನ್ಯೂಜಿಲೆಂಡ್‌ ತಂಡ ಆಸ್ಟ್ರೇಲಿಯಾ ಎದುರು ಮುಗ್ಗರಿಸಿ ನಿರಾಸೆ ಅನುಭವಿಸಿತ್ತು.

For Quick Alerts
ALLOW NOTIFICATIONS
For Daily Alerts
Story first published: Wednesday, July 17, 2019, 19:55 [IST]
Other articles published on Jul 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X