ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೂಪರ್ ಸೀರಿಸ್; ಸೌರವ್ ಗಂಗೂಲಿ ಚಿಂತನೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ಮೆಚ್ಚುಗೆ

Sourav Ganguly ‘Odi Super Series’ Finds Support From Cricket Australia Ceo

ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ಕ್ರಿಕೆಟ್‌ನಲ್ಲಿ ಒಂದಷ್ಟು ಬದಲಾವಣೆಯ ಗಾಳಿ ಬೀಸಿದೆ. ಈಗಾಗಲೆ ಟೆಸ್ಟ್‌ ಅಹರ್ನಿಶಿ ಟೆಸ್ಟ್‌ ಪಂದ್ಯ ಯಶಸ್ಸಿನ ಬಳಿಕ ಗಂಗೂಲಿ ನಾಲ್ಕು ರಾಷ್ಟ್ರಗಳ ಟೂರ್ನಿಯ ಚಿಂತನೆಯನ್ನು ಹಂಚಿಕೊಂಡಿದ್ದರು. ಗಂಗೂಲಿಯ ಈ ಚಿಂತನೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೌರವ್ ಗಂಗೂಲಿ ವ್ಯಕ್ತಪಡಿಸಿರುವ ಈ ಚಿಂತನೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಸಿಇಓ ಕೆವಿನ್ ರೋಬರ್ಟ್ ಇದೊಂದು ವಿನೂತನ ಚಿಂತನೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಲಂಡನ್‌ನಲ್ಲಿ ಇಂಗ್ಲೆಂಡ್ ಮತ್ತು ವೃಲ್ಸ್ ಕ್ರಿಕೆಟ್‌ ಬೋರ್ಡ್‌ನ ಸಭೆಯಲ್ಲಿ ಈ ಕುರಿತು ಮಾತುಕತೆ ನಡೆಸಲಾಗಿತ್ತು.

ಕ್ರಿಕೆಟ್‌ ಆಸ್ಟ್ರೇಲಿಯಾ ಸಿಇಒ ಕೆವಿನ್ ರೋಬರ್ಟ್ ' ಸೌರವ್ ಗಂಗೂಲಿ ಅಧ್ಯಕ್ಷರಾಗಿರುವ ಬಿಸಿಸಿಐನಿಂದ ಬಂದಿರುವ ಈ ಯೋಚನೆ ವಿನೂತನ ಚಿಂತನೆಗೆ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ. ಗಂಗೂಲಿ ಅಧಿಕಾರವನ್ನು ವಹಿಸಿಕೊಂಡು ಕೆಲವೇ ತಿಂಗಳಾಗಿದೆ. ಅದಾಗಲೇ ಗಂಗೂಲಿ ಡೇ-ನೈಟ್ ಪಂದ್ಯವನ್ನು ಯಶಸ್ವಿಯಾಗಿ ಆಯೋಜಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೀಗ ಮತ್ತೊಂದು ಸಂಭಾವ್ಯ ಯೋಜನೆಯನ್ನು ಹಂಚಿಕೊಂಡಿದ್ದಾರೆ ಎಂದು ಸೌರವ್ ಗಂಗೂಲಿ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ.

ಸೌರವ್ ಗಂಗೂಲಿ ಹಂಚಿಕೊಂಡಿರುವ ಈ ಯೋಜನೆಬಗ್ಗೆ ಇಸಿಬಿ ಜೊತೆಗೆ ಮಾತುಕತೆಯನ್ನು ನಡೆಸಲಾಗಿದೆ. ಆದರೆ ಕ್ರಿಕೆಟ್‌ ಆಸ್ಟ್ರೇಲಿಯಾ ಸಿಇಒ ಈ ಬಗ್ಗೆ ಪ್ರತಿಕ್ರಿಯೆ ನೀಡಿದರಾದರೂ ಪಾಲ್ಗೊಳ್ಳುವ ಬಗ್ಗೆ ಯಾವುದೇ ಮಾತುಗಳನ್ನೂ ಆಡಿಲ್ಲ.

ಭಾರತ, ಆಸ್ಟ್ರೇಲಿಯಾ ಇಂಗ್ಲೆಂಡ್ ಹಾಗೂ ಇನ್ನೊಂದು ಪ್ರಮುಖ ರಾಷ್ಟ್ರವನ್ನೊಳಗೊಂಡ ಸರಣಿಯ ಬಗ್ಗೆ ಚಿಂತನೆಯನ್ನು ನಡೆಸಿದ್ದಾಗಿ ಹೇಳಿಕೊಂಡಿದ್ದರು. ಅಂದುಕೊಂಡಂತೆ ನಡೆದರೆ 2021ರ ವೇಳೆಗೆ ಈ ಟೂರ್ನಿ ಆಯೋಜನೆಯಾಗಲಿದ್ದು ಮೊದಲ ಟೂರ್ನಿಯ ಆತಿಥ್ಯವನ್ನು ಭಾರತವೇ ವಹಿಸಲಿದೆ.

Story first published: Friday, December 27, 2019, 18:23 [IST]
Other articles published on Dec 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X