ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವರ್ಷದ ಕೊನೆಯಲ್ಲಿ ದಕ್ಷಿಣ ಆಫ್ರಿಕಾ-ಟೀಮ್ ಇಂಡಿಯಾ ಪ್ರವಾಸ ಸರಣಿ

South Africa to host India in end-of-year Test series

ಜೋಹಾನ್ಸ್‌ಬರ್ಗ್: ವರ್ಷದ ಕೊನೆಯಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಹೋಗಲಿದೆ. ಈ ವೇಳೆ ಭಾರತೀಯ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌, ಏಕದಿನ ಮತ್ತು ಟಿ20ಐ ಸರಣಿಗಳನ್ನು ಆಡಲಿದೆ. ಕ್ರಿಕೆಟ್ ಸೌತ್ ಆಫ್ರಿಕಾ ಈ ಸಂಗತಿಯನ್ನು ಗುರುವಾರ (ಸೆಪ್ಟೆಂಬರ್‌ 9) ತಿಳಿಸಿದೆ.

T20 World Cup 2021: 15 ಮಂದಿಯ ದಕ್ಷಿಣ ಆಫ್ರಿಕಾ ತಂಡ ಪ್ರಕಟT20 World Cup 2021: 15 ಮಂದಿಯ ದಕ್ಷಿಣ ಆಫ್ರಿಕಾ ತಂಡ ಪ್ರಕಟ

ಮಾಹಿತಿಯ ಪ್ರಕಾರ ಡೆಸೆಂಬರ್‌-ಜನವರಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಮಧ್ಯೆ ಮೂರು ಟೆಸ್ಟ್‌ ಪಂದ್ಯಗಳು, ಮೂರು ಏಕದಿನ ಪಂದ್ಯಗಳು ಮತ್ತು ನಾಲ್ಕು ಟಿ20ಐ ಪಂದ್ಯಗಳು ನಡೆಯಲಿವೆ. ಡಿಸೆಂಬರ್ 17ರಿಂದ 21ರ ವರೆಗೆ ಮತ್ತು ಜನವರಿ 3ರಿಂದ 7ರ ವರೆಗೆ ಜೋಹಾನ್ಸ್‌ಬರ್ಗ್‌ನಲ್ಲಿ ಎರಡು ಟೆಸ್ಟ್‌ ಪಂದ್ಯಗಳು ನಡೆಯಲಿವೆ.

ಸೆಂಚುರಿಯನ್‌ನಲ್ಲಿ ಡಿಸೆಂಬರ್‌ 26ರಿಂದ 30ರ ವರೆಗೆ ದ್ವಿತೀಯ ಟೆಸ್ಟ್‌ ಪಂದ್ಯ ನಡೆಯಲಿದೆ. ಈ ಮೂರೂ ಟೆಸ್ಟ್‌ ಪಂದ್ಯಗಳು ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಭಾಗವಾಗಿರಲಿದೆ. ಟೆಸ್ಟ್‌ ಸರಣಿಯ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ನಾಲ್ಕು ಟಿ20ಐ ಪಂದ್ಯಗಳು ಕೇಪ್‌ಟೌನ್‌ನಲ್ಲಿ ನಡೆಯಲಿದೆ.

4 ಟೆಸ್ಟ್‌ಗಳಲ್ಲಿ ಭಾರತದ ಈ 3 ಆಟಗಾರರನ್ನು ಕಟ್ಟಿಹಾಕಲು ನಮ್ಮಿಂದ ಆಗಲಿಲ್ಲ: ಮಾರ್ಕ್ ವುಡ್4 ಟೆಸ್ಟ್‌ಗಳಲ್ಲಿ ಭಾರತದ ಈ 3 ಆಟಗಾರರನ್ನು ಕಟ್ಟಿಹಾಕಲು ನಮ್ಮಿಂದ ಆಗಲಿಲ್ಲ: ಮಾರ್ಕ್ ವುಡ್

"ಇದು ಬಹುಶಃ ನಾವು ಯಾವತ್ತಿಗೂ ಆಯೋಜಿಸಿರದ ಒತ್ತೊತ್ತಾದ ತವರಿನ ಸರಣಿಗಳು ಎನ್ನಿಸಲಿವೆ. ಇಂಥ ಕಠಿಣ ಪರಿಸ್ಥಿತಿಯಲ್ಲಿ ಅತ್ಯುತ್ತಮ ಗುಣಮಟ್ಟದ ಭಾರತ ತಂಡಕ್ಕೆ ನಮ್ಮ ನೆಲದಲ್ಲಿ ಆಡಲು ವ್ಯವಸ್ಥೆ ಮಾಡಿಕೊಡುತ್ತಿರುವುದು ಒಂದು ಅದ್ಭುತ ಅವಕಾಶವಾಗಿದೆ," ಎಂದು ಕ್ರಿಕೆಟ್ ಸೌತ್ ಆಫ್ರಿಕಾದ ಕ್ರಿಕೆಟ್ ನಿರ್ದೇಶಕ ಗ್ರೇಮ್ ಸ್ಮಿತ್ ಹೇಳಿದ್ದಾರೆ.

ಸದ್ಯ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಇದಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಟೀಮ್ ಇಂಡಿಯಾ ಆಟಗಾರರು ಬ್ಯುಸಿ ಆಗಲಿದ್ದಾರೆ. ಆ ಬಳಿಕ ಟಿ20 ವಿಶ್ವಕಪ್‌ ಯುಎಇ ಮತ್ತು ಓಮನ್‌ನಲ್ಲಿ ನಡೆಯಲಿದೆ. ವಿಶ್ವಕಪ್‌ ಬಳಿಕ ಭಾರತ-ದಕ್ಷಿಣ ಆಫ್ರಿಕಾ ಸರಣಿ ನಡೆಯಲಿದೆ.

Story first published: Friday, September 10, 2021, 10:36 [IST]
Other articles published on Sep 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X