ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಶ್ರೀಲಂಕಾದ 18 ಸದಸ್ಯರ ತಂಡ ಪ್ರಕಟ

Sri Lanka announced 18-member squad for test series against Bangladesh

ಮೇ 15ರಿಂದ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಆರಂಭವಾಗಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿ ಇದಾಗಿದ್ದು ಬಾಂಗ್ಲಾದೇಶ ಈ ಸರಣಿಯ ಆತಿಥ್ಯ ವಹಿಸಿಕೊಳ್ಳಲಿದೆ. ಈ ಸರಣಿಯಲ್ಲಿ ಭಾಗಿಯಾಗಲಿರುವ ಶ್ರೀಲಂಕಾ ತಂಡದ 18 ಸದಸ್ಯರ ಬಳಗವನ್ನು ಇಂದು ಪ್ರಕಟಿಸಲಾಗಿದೆ. ಹೆಚ್ಚಾಗಿ ಅನನುಭವಿಗಳನ್ನೇ ತುಂಬಿರುವ ತಂಡ ಇದಾಗಿದ್ದು ಬಾಂಗ್ಲಾ ಪ್ರವಾಸದಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿ 18 ಆಟಗಾರರ ತಂಡವನ್ನು ಪ್ರಕಟಿಸಿದ್ದು ಇದರಲ್ಲಿ ಅನೇಕ ಪ್ರಮುಖ ಆಟಗಾರರು ಕಾಣಿಸಿಕೊಂಡಿಲ್ಲ. ಈ ಸ್ಕ್ವಾಡ್‌ನಲ್ಲಿ ನಾಲ್ವರು ಅನ್‌ಕ್ಯಾಪ್‌ಡ್ ಆಟಗಾರರಿಗೆ ಅವಕಾಶವನ್ನು ನೀಡಲಾಗಿದೆ. ವಿಕೆಟ್ ಕೀಪರ್ ಬ್ಯಾಟರ್ ಕಮಿಲ್ ಮಿಶರ, ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಕಮಿಂದು ಮೆಂಡಿಸ್, ಎಡಗೈ ವೇಗಿ ದಿಲ್ಶನ್ ಮದುಶಂಕ ಇದೇ ಮೊದಲ ಬಾರಿಗೆ ಶ್ರೀಲಂಕಾ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ ಆಟಗಾರರಾಗಿದ್ದಾರೆ.

IPL 2022: ಹಾರ್ದಿಕ್ ಪಾಂಡ್ಯ ವಿಕೆಟ್ ಪಡೆದು, ಫ್ಲೈಯಿಂಗ್ ಕಿಸ್ ಕೊಟ್ಟ ರಿಷಿ ಧವನ್IPL 2022: ಹಾರ್ದಿಕ್ ಪಾಂಡ್ಯ ವಿಕೆಟ್ ಪಡೆದು, ಫ್ಲೈಯಿಂಗ್ ಕಿಸ್ ಕೊಟ್ಟ ರಿಷಿ ಧವನ್

ಸ್ಕ್ವಾಡ್‌ನಲ್ಲಿಲ್ಲ ಪ್ರಮುಖ ಆಟಗಾರರು: ಈ ಸರಣಿಗೆ ಮುನ್ನವೇ ಬ್ಯಾಟರ್ ಸಿಲ್ವಾ ತಾನು ಸರಣಿಗೆ ಲಭ್ಯವಿಲ್ಲ ಎಂಬುದನ್ನು ತಿಳಿಸಿದ್ದರು ಎಂಬುದು ಗಮನಾರ್ಹ. ಮತ್ತೊಂದೆಡೆ ಸುರಂಗ ಲಕ್ಮಲ್ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರವಾಗಿ ಆಡುತ್ತಿರುವ ದುಷ್ಮಂತ ಚಮೀರ ಈ ಸರಣಿಗೆ ಆಯ್ಕೆಗೆ ಲಭ್ಯವಿಲ್ಲ. ಹೀಗಾಗಿ ಈ ಆಟಗಾರರನ್ನು ಹೊರತುಪಡಿಸಿ ತಂಡವನ್ನು ಆಯ್ಕೆ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಎಡಗೈ ವೇಗಿ ವಿಶ್ವ ಫೆರ್ನಾಂಡೋ ಅವರ ನೇತೃತ್ವದಲ್ಲಿ ಬೌಲಿಂಗ್ ದಾಳಿ ನಡೆಸಲಿದೆ. ಇವರಿಗೆ ಕುಸನ್ ರಜಿತ, ಅಸಿತ ಫೆರ್ನಾಂಡೋ, ಚಮಿಕ ಕರುಣರತ್ನೆ ಮತ್ತು ಯುವ ಆಟಗಾರ ದಿಲ್ಶನ್ ಮದುಶಂಕ ಬೌಲಿಂಗ್‌ನಲ್ಲಿ ಸಾಥ್ ನೀಡಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ಲಸಿತ್ ಎಂಬಿಲ್ದೇನಿಯಾ ಅನುಭವಿ ಆಟಗಾರನಾಗಿ ಸ್ಕ್ವಾಡ್‌ನಲ್ಲಿದ್ದರೆ ರಮೇಶ್ ಮೆಂಡಿಸ್ ಹಾಗೂ ಪ್ರವೀಣ್ ಜಯವಿಕ್ರಮೆ ಕೂಡ ಅವಕಾಶ ಪಡೆದುಕೊಂಡಿದ್ದಾರೆ.

ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ಕರುಣರತ್ನೆ ತಂಡದ ಜವಾಬ್ಧಾರಿ ವಹಿಸಿಕೊಂಡಿದ್ದು ಟೆಸ್ಟ್ ಕ್ರಿಕೆಟ್ ಶ್ರೇಯಾಂಕಪಟ್ಟಿಯಲ್ಲಿ 6ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರಿಗೆ ದಿನೇಶ್ ಚಾಂಡಿಮಲ್, ಏಂಜಲೋ ಮ್ಯಾಥ್ಯೂಸ್ ಮತ್ತು ನಿರೋಶನ್ ಡಿಕ್‌ವೆಲ್ಲಾ ಬ್ಯಾಟರ್‌ಗಳಾಗಿ ಸಾಥ್ ನೀಡಲಿದ್ದಾರೆ.

ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದ ಚಾಂಪಿಯನ್ ಶಿಪ್ ಗೆದ್ದ ಜೈನ್ ವಿಶ್ವವಿದ್ಯಾಲಯಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದ ಚಾಂಪಿಯನ್ ಶಿಪ್ ಗೆದ್ದ ಜೈನ್ ವಿಶ್ವವಿದ್ಯಾಲಯ

ಶ್ರೀಲಂಕಾ ಸ್ಕ್ವಾಡ್: ದಿಮುತ್ ಕರುಣಾರತ್ನೆ (ನಾಯಕ), ಕಮಿಲ್ ಮಿಶ್ರಾ, ಓಷಾದ ಫೆರ್ನಾಂಡೋ, ಏಂಜೆಲೊ ಮ್ಯಾಥ್ಯೂಸ್, ಕುಸಲ್ ಮೆಂಡಿಸ್, ಧನಂಜಯ ಡಿ ಸಿಲ್ವಾ, ಕಮಿಂದು ಮೆಂಡಿಸ್, ನಿರೋಶನ್ ಡಿಕ್ವೆಲ್ಲಾ, ದಿನೇಶ್ ಚಾಂಡಿಮಲ್, ರಮೇಶ್ ಮೆಂಡಿಸ್, ಚಮಿಕಾ ಕರುಣಾರತ್ನೆ, ಸುಮಿದಾ ಲಕ್ಷಣ್, ಕಸುನ್ ಎಫ್ ರಜಿತಾ, ಡಿ ಅಶ್ವಿಲ್ ಎಫ್ ರಜಿತನ್, ಡಿ. ಮದುಶಂಕ, ಪ್ರವೀಣ್ ಜಯವಿಕ್ರಮ, ಲಸಿತ್ ಎಂಬುಲ್ದೇನಿಯ.

Story first published: Thursday, May 5, 2022, 10:43 [IST]
Other articles published on May 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X