Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಶ್ರೀಲಂಕಾ: ಪ್ರವಾಸ ಒಪ್ಪಂದಕ್ಕೆ 29 ಕ್ರಿಕೆಟರ್ ಸಹಿ, ಏಂಜಲೋ ಮ್ಯಾಥ್ಯೂಸ್ ನಕಾರ

Sri Lanka vs India: 29 Sri Lanka cricketers sign tour contracts for series; Angelo Mathews pulls out

ಕೊಲಂಬೋ: ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಆಟಗಾರರಿಗೆ ನೂತನ ವೇತನ ಸ್ವರೂಪ ಪ್ರಕಟಿಸಿದಾಗಿನಿಂದಲೂ ಲಂಕಾ ಆಟಗಾರರು ಸುದ್ದಿಯಾಗುತ್ತಲೇ ಇದ್ದಾರೆ. ನೂತನ ವೇತನ ನಿಯಮದಿಂದ ಅಸಮಾಧಾನಗೊಂಡಿರುವ ಕ್ರಿಕೆಟಿಗರು ರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಲು ಹಿಂದೇಟು ಹಾಕುತ್ತಿದ್ದಾರೆ.

ಶ್ರೀಲಂಕಾ ರಾಷ್ಟ್ರೀಯ ತಂಡದ ಆಟಗಾರರು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಅವರು ರಾಷ್ಟ್ರೀಯ ಸರಣಿಗಳಿಗಾಗಿ ಲಭ್ಯರಿಲ್ಲ ಎಂದೇ ಅರ್ಥ. ಬೋರ್ಡ್ ಮತ್ತು ಲಂಕಾ ಕ್ರಿಕೆಟಿಗರ ನಡುವಿನ ಅಸಮಾಧಾನದ ಕಾರಣದಿಂದಲೇ ಇನ್ನೂ ಲಂಕಾ ಬೋರ್ಡ್ ಮುಂಬರಲಿರುವ ಭಾರತ-ಶ್ರೀಲಂಕಾ ಸರಣಿಗೆ ತಂಡ ಪ್ರಕಟಿಸಿಲ್ಲ.

ಆದರೆ ಭಾರತ ವಿರುದ್ಧದ ಸರಣಿಗೆ ಶೀಘ್ರ ಲಂಕಾ ತಂಡ ಪ್ರಕಟಗೊಳ್ಳಲಿದೆ. ಯಾಕೆಂದರೆ ಭಾರತ-ಶ್ರೀಲಂಕಾ ಪ್ರವಾಸ ಸರಣಿಯ ಒಪ್ಪಂದಕ್ಕೆ 29 ಆಟಗಾರರು ಸಹಿ ಹಾಕಿದ್ದಾರೆ. ಅಸಲಿಗೆ ಶಿಖರ್ ಧವನ್ ಬಳಗದ ವಿರುದ್ಧದ ಸರಣಿಗೆ 30 ಆಟಗಾರರಿಂದ ಒಪ್ಪಂದ ಮಾಡಿಕೊಳ್ಳಲು ಲಂಕಾ ಬೋರ್ಡ್ ಬಯಸಿತ್ತು. ಆದರೆ ಇದರಲ್ಲಿ ಅನುಭವಿ ಆಲ್ ರೌಂಡರ್ ಏಂಜಲೋ ಮ್ಯಾಥ್ಯೂಸ್ ಸಹಿ ಹಾಕಿಲ್ಲ.

"ಭಾರತ ವಿರುದ್ಧದ ಸರಣಿಗಾಗಿ ಶ್ರೀಲಂಕಾದ 30 ಜನರ ತಂಡದಲ್ಲಿ ಸೇರಿಸಲ್ಪಟ್ಟಿದ್ದ ಏಂಜಲೋ ಮ್ಯಾಥ್ಯೂಸ್ ತನ್ನನ್ನು ರಾಷ್ಟ್ರೀಯ ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ವೈಯಕ್ತಿಕ ಕಾರಣ ನೀಡಿದ್ದಾರೆ. ಹೀಗಾಗಿ ಮುಂದಿನ ಸೂಚನೆಯವರೆಗೂ ಅವರು ತಂಡದಲ್ಲಿ ಅಲಭ್ಯರಿರಲಿದ್ದಾರೆ," ಎಂದು ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ತಿಳಿಸಿದೆ. ಭಾರತ-ಶ್ರೀಲಂಕಾ ಸರಣಿ ಜುಲೈ 13ರಿಂದ ಆರಂಭಗೊಳ್ಳಲಿದೆ.

Story first published: Wednesday, July 7, 2021, 18:06 [IST]
Other articles published on Jul 7, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+