ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹುಟ್ಟುಹಬ್ಬದ ದಿನ ದಾಖಲೆಯ ಬೌಲಿಂಗ್ ಪ್ರದರ್ಶನ ನೀಡಿದ ವನಿಂದು ಹಸರಂಗ

Sri Lankan spinner Hasarangacelebrates his birthday with a record-breaking spell

ಕೊಲಂಬೋ, ಜುಲೈ 29: ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯಲ್ಲಿ ಶ್ರೀಲಂಕಾ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನ ಮೂಲಕ ಲಂಕಾ ಟಿ20 ಸರಣಿಯನ್ನು ವಶಕ್ಕೆ ಪಡೆದಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಶ್ರೀಲಂಕಾ 2-1 ಅಂತರದಿಂದ ಗೆದ್ದು ಬೀಗಿದೆ.

ಈ ಪಂದ್ಯದ ದಿನವೇ ತಮ್ಮ 24ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಶ್ರೀಲಂಕಾ ಸ್ಪಿನ್ನರ್ ದಾಖಲೆಯ ಪ್ರದರ್ಶನ ನೀಡಿ ಮಿಂಚಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ ಹುಟ್ಟುಹಬ್ಬದ ದಿನ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ದಾಖಲೆಯನ್ನು ಹಸರಂಗ ಇಂದಿನ ಪಂದ್ಯದಲ್ಲಿ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಭಾರತದ ವಿರುದ್ಧ ಈ 3ನೇ ಟಿ20 ಪಂದ್ಯದಲ್ಲಿ ಹಸರಂಗ ಕೇವಲ 9 ರನ್‌ಗಳನ್ನು ನೀಡಿ 4 ವಿಕೆಟ್ ಕಬಳಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್: ಒಲಿಂಪಿಕ್ಸ್ ಚಾಂಪಿಯನ್ ವಿರುದ್ಧ ಭಾರತದ ಅತನು ದಾಸ್‌ಗೆ ಜಯಟೋಕಿಯೋ ಒಲಿಂಪಿಕ್ಸ್: ಒಲಿಂಪಿಕ್ಸ್ ಚಾಂಪಿಯನ್ ವಿರುದ್ಧ ಭಾರತದ ಅತನು ದಾಸ್‌ಗೆ ಜಯ

ಋತಿರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಭುವನೇಶ್ವರ್ ಕುಮಾರ್ ಹಾಗೂ ವರುಣ್ ಚಕ್ರವರ್ತಿ ಹಸರಂಗ ಕೈ ಚಳಕಕ್ಕೆ ಬಲಿಯಾದರು. ಈ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ 11 ಡಾಟ್ ಬಾಲ್ ಎಸೆದಿದ್ದಾರೆ ಹಸರಂಗ ಹಾಗೂ ಒಂದೇ ಒಂದು ಬೌಂಡರಿಯನ್ನು ನೀಡಿಲ್ಲ ಎಂಬುದು ಮತ್ತೊಂದು ವಿಶೇಷತೆಯಾಗಿದೆ.

9 ರನ್‌ಗಳನ್ನು ನೀಡಿ 4 ವಿಕೆಟ್ ಕಬಳಿಸಿರುವುದು ಟಿ20 ಕ್ರಿಕೆಟ್‌ನಲ್ಲಿ ಯಾವುದೇ ಬೌಲರ್ ತಮ್ಮ ಜನ್ಮದಿನದಂದು ಪ್ರದರ್ಶಿಸಿದ ಅತ್ಯುತ್ತಮ ಬೌಲಿಂಗ್ ದಾಖಲೆಯಾಗಿದೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್ ಹೆಸರಿನಲ್ಲಿ ಈ ದಾಖಲೆಯಿತ್ತು. ತಾಹಿರ್ 2014ರಲ್ಲಿ ನೆದರ್‌ಲ್ಯಾಂಡ್ ತಂಡದ ವಿರುದ್ಧ 21 ರನ್‌ಗಳಿಗೆ 4 ವಿಕೆಟ್ ಕಬಳಿಸಿದ್ದರು.

Rahul Dravid ಅವರ ಪ್ರಕಾರ ಯಾವ ಆಟಗಾರ ಬೆಸ್ಟ್ ಆಟಗಾರ | Oneindia Kannada

ಭಾರತದ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯವನ್ನು ಶ್ರೀಲಂಕಾ ಬುಧವಾರ 4 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಈ ಮೂಲಕ ಟಿ20 ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸಿತ್ತು. ಇದಕ್ಕೂ ಮುನ್ನ ಮೊದಲ ಟಿ20 ಪಂದ್ಯವನ್ನು ಭಾರತ 38 ರನ್‌ಗಳ ಅಂತರದಿಂದ ಸುಲಭ ಜಯವನ್ನು ಸಾಧಿಸಿತ್ತು.

Story first published: Thursday, July 29, 2021, 23:56 [IST]
Other articles published on Jul 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X