ಭಾರತದ ವೇಗಿಗೆ ಸಿಗಬೇಕಾದ ಮಾನ್ಯತೆ ಸಿಗಲಿಲ್ಲ ಎಂದು ಕನ್ನಡಿಗನ ಹೆಸರನ್ನು ಹೇಳಿದ ಶಾನ್ ಪೊಲಾಕ್

ಶಾನ್ ಪೊಲಕ್ ದಕ್ಷಿಣ ಆಫ್ರಿಕಾದ ಲೆಜೆಂಡರಿ ಆಟಗಾರ. ಬೌಲಿಂಗ್‌ನಲ್ಲಿ ಎದುರಾಳಿಗಳನ್ನು ಕಟ್ಟಿಹಾಕುತ್ತಿದ್ದ ಶಾನ್ ಪೊಲಕ್ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ನೆರವಾಗಿ ಆಲ್‌ರೌಂಡರ್ ಎನಿಸಿದ್ದರು. ಇಂತಾ ಅದ್ಭುತ ಆಟಗಾರ ಟೀಮ್ ಇಂಡಿಯಾದ ಮಾಜಿ ವೇಗಿಯನ್ನು ಕೊಂಡಾಡಿದ್ದಾರೆ.

ಟೀಮ್ ಇಂಡಿಯಾದ ಮಾಜಿ ವೇಗಿ ಹೊಂದಿದ್ದ ಪ್ರತಿಭೆಗೆ ತಕ್ಕ ಮನ್ನಣೆ ಆತನಿಗೆ ಸಿಗಲಿಲ್ಲ ಎಂದು ಶಾನ್ ಪೊಲಕ್ ಹೇಳಿದ್ದಾರೆ. ತನ್ನ ಸಮಾಕಾಲೀನ ಆಟಗಾರರಲ್ಲಿ ಈತ ಅತ್ಯುತ್ತಮ ವೇಗದ ಬೌಲರ್ ಎಂದು ಶಾನ್ ಪೊಲಕ್ ಕನ್ನಡಿಗ ಬೌಲರ್‌ನ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ಹಾಗಾದರೆ ಶಾನ್ ಪೊಲಕ್ ತನ್ನ ಸಮಕಾಲೀನ ಬೌಲರ್‌ಗಳ ಪೈಕಿ ಪ್ರಶಂಸೆಯನ್ನು ನೀಡಿದ ಕನ್ನಡಿಗ ಬೌಲರ್ ಯಾರು? ಆ ದಿಗ್ಗಜ ಬೌಲರ್‌ಬಗ್ಗೆ ಪೊಲಕ್ ಹೇಳಿದ್ದೇನು ಮುಂದೆ ಓದಿ..

ಸಂದರ್ಶನದಲ್ಲಿ ಶಾನ್ ಪೊಲಕ್ ಮಾತು

ಸಂದರ್ಶನದಲ್ಲಿ ಶಾನ್ ಪೊಲಕ್ ಮಾತು

ಸ್ಕೈ ಸ್ಪೋರ್ಟ್ಸ್‌ನ ಪೊಡ್ ಕ್ಯಾಸ್ಟ್‌ ಕಾರ್ಯಕ್ರಮದಲ್ಲಿ ಶಾನ್ ಪೊಲಕ್ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಶಾನ್ ಪೊಲಕ್ ಜೊತೆಗೆ ವೆಸ್ಟ್ ಇಂಡೀಸ್‌ನ ಮಾಜಿ ವೇಗದ ಬೌಲರ್ ಮೈಕಲ್ ಹೋಲ್ಡಿಂಗ್ ಜೊತೆಗೆ ಸ್ಟುವರ್ಟ್ ಬ್ರಾಡ್ ಕೂಡ ಪೊಲಕ್‌ಗೆ ಸಾಥ್ ನೀಡಿದ್ದರು.

ಬೇರೆ ಬೇರೆ ಕಾಲಮಾನದ ಅತ್ಯುತ್ತಮ ಬೌಲರ್‌ಗಳ ಬಗ್ಗೆ ಮಾತು

ಬೇರೆ ಬೇರೆ ಕಾಲಮಾನದ ಅತ್ಯುತ್ತಮ ಬೌಲರ್‌ಗಳ ಬಗ್ಗೆ ಮಾತು

ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ವೇಗಿ ಶಾನ್ ಪೊಲಕ್ ಬೇರೆ ಬೇರೆ ಕಾಲಮಾನದ ಅದ್ಭುತ ಬೌಲರ್‌ಗಳ ಬಗ್ಗೆ ಮಾತನ್ನಾಡಿದರು. ಈ ಸಂದರ್ಭದಲ್ಲಿ ಶಾನ್ ಪೊಲಕ್ ಭಾರತ ತಂಡದ ಓರ್ವ ಬೌಲರ್‌ ಬಗ್ಗೆ ಮಾತ್ರ ಮಾತನ್ನಾಡಿದ್ದಾರೆ. ಆತನಿಗೆ ಸಿಗಬೇಕಾದ ಮಾನ್ಯತೆ ಆತನಿಗೆ ಸಿಗಲಿಲ್ಲ ಎಂದು ಹೇಳಿದ್ದಾರೆ.

ಶಾನ್ ಪೊಲಕ್ ಹೇಳಿದ್ದು ಕನ್ನಡಿಗ ಜಾವಗಲ್ ಶ್ರೀನಾಥ್ ಬಗ್ಗೆ

ಶಾನ್ ಪೊಲಕ್ ಹೇಳಿದ್ದು ಕನ್ನಡಿಗ ಜಾವಗಲ್ ಶ್ರೀನಾಥ್ ಬಗ್ಗೆ

ಟೀಮ್ ಇಂಡಿಯಾ ಕಣಡ ಅತ್ಯಂತ ವೇಗದ ಬೌಲರ್ ಅಂದ್ರೆ ಅದು ಜಾವಗಲ್ ಶ್ರೀನಾಥ್. ಈ ಕನ್ನಡಿಗ ವೇಗಿಯ ಬಗ್ಗೆಯೇ ಶಾನ್ ಪೊಲಕ್ ಮಾತನ್ನಾಡಿದ್ದಾರೆ. ಜಾವಗಲ್ ಶ್ರೀನಾಥ್‌ಗೆ ಸಿಗಬೇಕಾದ ಮಾನ್ಯತೆ ಸಿಗಲಿಲ್ಲ, ಆತನೋರ್ವ ಅತ್ಯಂತ ಪ್ರತಿಭಾವಂತ ಬೌಲರ್ ಎಂದು ಶ್ರೀನಾಥ್ ಹೇಳಿದ್ದಾರೆ.

ಶ್ರೀನಾಥ್ ಬೌಲಿಂಗ್ ಸಾಧನೆ

ಶ್ರೀನಾಥ್ ಬೌಲಿಂಗ್ ಸಾಧನೆ

ಶ್ರೀನಾಥ್ ಟೀಮ್ ಇಂಡಿಯಾ ಪರವಾಗಿ ಅದ್ಭುತ ಬೌಲಿಂಗ್ ಸಾಧನೆ ತೋರಿದ ಭಾರತೀಯ ಬೌಲರ್. ಏಕದಿನ ಕ್ರಿಕೆಟ್‌ನಲ್ಲಿ ಅಧಿಕ ವಿಕೆಟ್ ಪಡೆದವರ ಪಟ್ಟಿಯಲ್ಲಿ ಶ್ರೀನಾಥ್ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲನೇ ಸ್ಥಾನದಲ್ಲಿ ಅನಿಲ್ ಕುಂಬ್ಳೆ ಇದ್ದಾರೆ.

ತನ್ನ ಕಾಲಮಾನದ ಅತ್ಯುತ್ತಮ ಬೌಲರ್

ತನ್ನ ಕಾಲಮಾನದ ಅತ್ಯುತ್ತಮ ಬೌಲರ್

ಏಕದಿನ ಕ್ರಿಕೆಟ್‌ನಲ್ಲಿ ಜಾವಗಲ್ ಶ್ರೀನಾಥ್ 315 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಶ್ರೀನಾಥ್ 236 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ, ಆದರೆ ತನ್ನ ಕಾಲಮಾನದ ಅತ್ಯುತ್ತಮ ಬೌಲರ್‌ ಯಾರು ಎಂಬ ಪ್ರಶ್ನೆ ಬಂದಾಗ ಶ್ರೀನಾಥ್ ಹೆಸರು ವಿರಳವಾಗಿ ಕೇಳಿಬರುತ್ತದೆ. ಆದರೆ ಅವರ ಬೌಲಿಂಗ್ ಸಾಧನೆ ಎಲ್ಲದಕ್ಕೂ ಉತ್ತರ ಎಂದು ಶಾನ್ ಪೊಲಕ್ ಕನ್ನಡಿಗ ಬೌಲರ್‌ ಬಗ್ಗೆ ಪ್ರಶಂಸೆಯ ಮಾತುಗಳನ್ನು ಹೇಳಿದ್ದಾರೆ.

ಶ್ರೀನಾಥ್ ಹೊರತು ಪಡಿಸಿ..

ಶ್ರೀನಾಥ್ ಹೊರತು ಪಡಿಸಿ..

ಈ ಸಂದರ್ಭದಲ್ಲಿ ಶಾನ್ ಪೊಲಕ್ ತನ್ನ ಪೀಳೀಗೆಯ ಇತರ ಉತ್ತಮ ಬೌಲರ್‌ಗಳು ಯಾರು ಎಂದುದನ್ನು ಹೇಳಿದ್ದಾರೆ. ಪಾಕಿಸ್ತಾನದ ವಾಸಿಮ್ ಅಕ್ರಂ, ವಾಕರ್ ಯೂನಿಸ್, ಆಸಿಸ್‌ನ ಮೆಕ್‌ಗ್ರಾಥ್ ಬ್ರೆಟ್‌ ಲೀ, ಇಂಗ್ಲೆಂಟ್‌ನಲ್ಲಿ ಜೇಮ್ಸ್ ಆಂಡರ್‌ಸನ್ ಮತ್ತು ಈಗ ತಾವು(ಸ್ಟುವರ್ಟ್ ಬ್ರಾಡ್) ಎಂದು ಹೆಸರಿಸಿದ್ದಾರೆ. ತನ್ನ ಪೀಳಿಗೆಗೂ ಮುನ್ನ ಮಾಲ್ಕೋಲ್ಮ್ ಮಾರ್ಶಲ್ ಅದ್ಭುತ ಬೌಲರ್ ಎಂದು ಹೇಳಿದ್ದಾರೆ ಶಾನ್ ಪೊಲಕ್.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪೊಲಕ್ ಸಾಧನೆ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪೊಲಕ್ ಸಾಧನೆ

ಶಾನ್ ಪೊಲಕ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾಗೆ ನಿಡಿದ ಕೊಡುಗೆ ಅಪಾರ. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಪೊಲಕ್ ಒಟ್ಟಾರೆ 800 ಅಂತಾರಾಷ್ಟ್ರೀಯ ವಿಕೆಟ್ ಪಡೆದಿದ್ದಾರೆ. ಮತ್ತು 8000ದ ಸಮೀಪದಲ್ಲಿ ರನ್‌ ಕಲೆ ಹಾಕಿ ಸಾಧನೆ ಮಾಡಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, April 20, 2020, 15:57 [IST]
Other articles published on Apr 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X