6138.1 ಕೋಟಿಗೆ ಸ್ಟಾರ್ ಇಂಡಿಯಾ ಪಾಲಾದ ಬಿಸಿಸಿಐ ಪ್ರಸಾರ ಹಕ್ಕು

Posted By:
Star India bags BCCI media rights for television of 5 years

ಭಾರತ ಕ್ರಿಕೆಟ್ ತಂಡದ ಪಂದ್ಯಗಳ 5 ವರ್ಷಗಳ ಪ್ರಸಾರದ ಹಕ್ಕನ್ನು ಇಂದು ಬಿಸಿಸಿಐಯು ಹರಾಜು ಮಾಡಿದ್ದು, ಸ್ಟಾರ್ ಇಂಡಿಯಾವು ಭಾರಿ ಮೊತ್ತಕ್ಕೆ ಖರೀದಿಸಿದೆ.

ಈ-ಬಿಡ್ಡಿಂಗ್ ಪದ್ಧತಿಯಲ್ಲಿ ಹರಾಜು ಪ್ರಕ್ರಿಯೆ ನಡೆದಿದ್ದು, ಸ್ಟಾರ್ ಇಂಡಿಯಾವು 6138.1 ಕೋಟಿ ರೂಪಾಯಿಗೆ ಪ್ರಸಾರದ ಹಕ್ಕನ್ನು ಪಡೆದುಕೊಂಡಿದೆ. 2018 ರಿಂದ 2023ರ ವರೆಗೆ ಭಾರತ ಕ್ರಿಕೆಟ್ ತಂಡ ಆಡುವ ಆಟಗಳ ಪ್ರಸಾರವನ್ನು ಸ್ಟಾರ್ ಇಂಡಿಯಾ ಸಮೂಹ ಮಾಡಲಿದೆ.

ಭಾರಿ ತುರುಸಿನ ಹರಾಜು ನಡೆದಿದ್ದು, ಸೋನಿ ಮತ್ತು ಜಿಯೋ ಸಂಸ್ಥೆಗಳು ಸ್ಟಾರ್ ಇಂಡಿಯಾಕ್ಕೆ ಪ್ರಬಲ ಪೈಪೋಟಿ ಒಡ್ಡಿದ್ದವು. ಆದರೆ ಅಂತಿಮವಾಗಿ ಹಕ್ಕುಗಳು ಸ್ಟಾರ್ ಇಂಡಿಯಾ ಪಾಲಾದವು.

5 ವರ್ಷಗಳ ಕಾಲ ಐಪಿಎಲ್‌ನ ಪ್ರಮುಖ ಪ್ರಾಯೋಜಕತ್ವವನ್ನೂ 16,347.5 ಕೋಟಿಗೆ ಖರೀದಿಸಿರುವ ಸ್ಟಾರ್ ಇಂಡಿಯಾ ಈಗ ಅದೇ ಅವಧಿಗೆ ಭಾರತ ಕ್ರಿಕೆಟ್ ತಂಡದ ಪ್ರಸಾರ ಹಕ್ಕನ್ನೂ ಪಡೆದುಕೊಂಡಿದೆ.

ಹರಾಜು ಕೊನೆಗೊಂಡ ನಂತರ ಲೆಕ್ಕಾಚಾರದ ಪ್ರಕಾರ ಇನ್ನು ಮುಂದೆ ಬಿಸಿಸಿಐಯು ಪ್ರತಿ ಪಂದ್ಯಕ್ಕೆ 55 ರಿಂದ 60 ಕೋಟಿ ಹಣ ಗಳಿಸಲಿದೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, April 5, 2018, 18:24 [IST]
Other articles published on Apr 5, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ