ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿಷೇಧದ ಬಳಿಕ ಮೊದಲ ಬಾರಿಗೆ ಮುಖಾಮುಖಿಯಾದ ಸ್ಮಿತ್-ವಾರ್ನರ್!

Steve Smith, David Warner play together for first time since ban

ಸಿಡ್ನಿ, ನವೆಂಬರ್ 10: ಚೆಂಡು ವಿರೂಪ ಪ್ರಕರಣದಲ್ಲಿ ನಿಷೇಧಕ್ಕೆ ಒಳಗಾಗಿದ್ದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಇದೇ ಮೊದಲಬಾರಿಗೆ ಒಂದೇ ಮೈದಾನದಲ್ಲಿ ಕ್ರಿಕೆಟ್ ಆಡಿದರು. ತವರು ನೆಲದಲ್ಲಿ ನಡೆದಿದ್ದ ಸಿಡ್ನಿ ಗ್ರೇಡ್ ಕ್ರಿಕೆಟ್ ಟೂರ್ನಿನಲ್ಲಿ ಶನಿವಾರ (ನವೆಂಬರ್ 10) ಇಬ್ಬರೂ ಮೈದಾನಕ್ಕಿಳಿದಿದ್ದರು.

ಮಹಿಳಾ ವಿಶ್ವಕಪ್ ಟಿ20: ಹರ್ಮನ್ ಪ್ರೀತ್ ಅಬ್ಬರಕ್ಕೆ ಬೆಚ್ಚಿದ ಕಿವೀಸ್ಮಹಿಳಾ ವಿಶ್ವಕಪ್ ಟಿ20: ಹರ್ಮನ್ ಪ್ರೀತ್ ಅಬ್ಬರಕ್ಕೆ ಬೆಚ್ಚಿದ ಕಿವೀಸ್

ಸಿಡ್ನಿಯ ಕೂಗೀ ಓವಲ್ ನಲ್ಲಿ ನಡೆದ ಪಂದ್ಯಾಟದಲ್ಲಿ ಸ್ಮಿತ್ ಅವರ ಸದರ್ಲ್ಯಾಂಡ್ ಮತ್ತು ವಾರ್ನರ್ ಅವರ ರಾಂಡ್ವಿಕ್ ಪೀಟರ್ಶಮ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಶೇನ್ ವ್ಯಾಟ್ಸನ್, ಸ್ಟೀವ್ ವಾ, ಬೌಲಿಂಗ್ ದಿಗ್ಗಜ ಮಿಚೆಲ್ ಜಾನ್ಸನ್ ಕೂಡ ಇದ್ದಿದ್ದು ವಿಶೇಷವೆನಿಸಿತು.

ಪಂದ್ಯದಲ್ಲಿ ಪಾಲ್ಗೊಂಡಿದ್ದ ಇಬ್ಬರೂ ಆಟಗಾರರನ್ನೂ ಸುತ್ತಲೂ ನೆರೆದ ಕ್ರಿಕೆಟ್ ಅಭಿಮಾನಿಗಳು ಆದರದಿಂದ ಕಂಡಿದ್ದು ಗಮನಸೆಳೆಯಿತು. ಬಾಲ್ ಟ್ಯಾಂಪರಿಂಗ್ ಕಪ್ಪು ಚುಕ್ಕೆಯನ್ನು ಲೆಕ್ಕಿಸದೆಯೆ ಅಭಿಮಾನಿಗಳು ಈ ಇಬ್ಬರೂ ಆಟಗಾರರಿಂದ ಆಟೋಗ್ರಾಫ್ ಪಡೆದರು, ಸೆಲ್ಫಿ ತೆಗೆದು ಸಂಭ್ರಮಿಸಿದರು.

ಕ್ರಿಕೆಟ್: ಸತತ 7 ಸೋಲುಗಳ ಬಳಿಕ ಕೊನೆಗೂ ಗೆದ್ದ ಆಸ್ಟ್ರೇಲಿಯಾಕ್ರಿಕೆಟ್: ಸತತ 7 ಸೋಲುಗಳ ಬಳಿಕ ಕೊನೆಗೂ ಗೆದ್ದ ಆಸ್ಟ್ರೇಲಿಯಾ

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ರಾಂಡ್ವಿಕ್ ಪೀಟರ್ಶಮ್ ತಂಡ 50 ಓವರ್ ಗೆ 8 ವಿಕೆಟ್ ಕಳೆದು 267 ರನ್ ಪೇರಿಸಿತ್ತು. ಡೇವಿಡ್ ವಾರ್ನರ್ 13 ರನ್ ಪೇರಿಸಿ ಸ್ಟೀವ್ ವಾ ಪುತ್ರ ಅಸ್ಟಿನ್ ವಾಗೆ ವಿಕೆಟ್ ಒಪ್ಪಿಸಿದರು. ಗುರಿ ಬೆನ್ನಟ್ಟಿದ ಸದರ್ಲ್ಯಾಂಡ್ 49.4 ಓವರ್ ಗೆ 7 ವಿಕೆಟ್ ಕಳೆದು 269 ರನ್ ಪೇರಿಸಿ ಗೆಲುವನ್ನಾಚರಿಸಿತು. ಸ್ಮಿತ್ 48 ರನ್ ತಂಡಕ್ಕೆ ಸೇರಿಸಿದ್ದರು.

Story first published: Saturday, November 10, 2018, 16:01 [IST]
Other articles published on Nov 10, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X