SMAT: ಅನಿರುದ್ಧ ಜೋಶಿ ಅರ್ಧ ಶತಕ, ರೈಲ್ವೇಸ್ ಮಣಿಸಿದ ಕರ್ನಾಟಕ

ಆಲೂರು: ಬೆಂಗಳೂರಿನ ಆಲೂರಿಲ್ಲಿರುವ ಕೆಎಸ್‌ಸಿಎ ಕ್ರಿಕೆಟ್ ಗ್ರೌಂಡ್‌ನಲ್ಲಿ ಶನಿವಾರ ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಎಲೈಟ್ ಗ್ರೂಪ್ 'ಎ' ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಕರ್ನಾಟಕ ತಂಡ 2 ವಿಕೆಟ್ ಗೆಲುವನ್ನಾಚರಿಸಿದೆ. ಅನಿರುದ್ಧ ಜೋಶಿ ಅವರ ಅರ್ಧ ಶತಕದ ನೆರವಿನಿಂದ ಕರ್ನಾಟಕ ಟೂರ್ನಿಯ 3ನೇ ಜಯ ದಾಖಲಿಸಿದೆ (ಚಿತ್ರದಲ್ಲಿ ದೇವದತ್ ಪಡಿಕ್ಕಲ್).

ಆಸ್ಟ್ರೇಲಿಯಾ ವಿರುದ್ಧ ಆಡ್ತಿರೋದು ಅತೀ ದುರ್ಬಲ ಭಾರತ ತಂಡ ಅನ್ನೋದು ಗೊತ್ತಾ!?

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ರೈಲ್ವೇಸ್, ಪ್ರಥಮ್ ಸಿಂಗ್ 41, ಶಿವಂ ಚೌಧರಿ 48, ಧೃಶಾಂತ್ ಸೋನಿ 12, ಹರ್ಷ ತ್ಯಾಗಿ 33, ಪ್ರದೀಪ್ ಪೂಜಾರ್ 2, ಮೃಣಾಲ್ ದೇವಧರ್ 2 ರನ್‌ನೊಂದಿಗೆ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಕರ್ನಾಟಕದಿಂದ ರೋಹನ್ ಕದಮ್ 14, ದೇವದತ್ ಪಡಿಕ್ಕಲ್ 37, ನಾಯಕ ಕರುಣ್ ನಾಯರ್ 15, ಅನಿರುದ್ಧ್ ಜೋಶಿ 64 (40 ಎಸೆತ), ಶ್ರೇಯಸ್ ಗೋಪಾಲ್ 10, ಕೃಷ್ಣಪ್ಪ ಗೌತಮ್ 12 ರನ್ ಸೇರಿಸಿದರು. ಕರ್ನಾಟಕ 19.4 ಓವರ್‌ಗೆ 8 ವಿಕೆಟ್ ಕಳೆದು 158 ರನ್ ಬಾರಿಸಿತು.

ಭಾರತ vs ಆಸ್ಟ್ರೇಲಿಯಾ: ರೋಹಿತ್ ಶರ್ಮಾ ಹೆಸರಿಗೆ ಕೆಟ್ಟ ದಾಖಲೆ

ರೈಲ್ವೇಸ್ ಇನ್ನಿಂಗ್ಸ್‌ನಲ್ಲಿ ಕರ್ನಾಟಕದ ವಿ ಕೌಶಿಕ್ 1, ಪ್ರಸಿದ್ಧ್ ಕೃಷ್ಣ 2, ಶ್ರೇಯಸ್ ಗೋಪಾಲ್ 2 ಪಡೆದರೆ, ಕರ್ನಾಟಕದ ಇನ್ನಿಂಗ್ಸ್‌ನಲ್ಲಿ ಪ್ರದೀಪ್ ಪೂಜಾರ್ 3, ಶಿವೇಂದ್ರ ಸಿಂಗ್ 2, ದೃಶಾಂತ್ ಸೋನಿ 3 ವಿಕೆಟ್‌ನೊಂದಿಗೆ ಗಮನ ಸೆಳೆದರು. ಕರ್ನಾಟಕ 4 ಪಂದ್ಯಗಳಲ್ಲಿ 3 ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಪಂಜಾಬ್ ಬಳಿಕ ದ್ವಿತೀಯ ಸ್ಥಾನದಲ್ಲಿದೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, January 16, 2021, 19:01 [IST]
Other articles published on Jan 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X