ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದ ಬಗ್ಗೆ ವಿಷಾದವಿಲ್ಲ ಎಂದ ಟಿ ನಟರಾಜನ್

T Natarajan On not selected for India’s T20 World Cup Squad

ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿ ಮಿಂಚಿದ ಆಟಗಾರ ಟಿ ನಟರಾಜನ್. ಬಳಿಕ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿ ಮೂರು ಮಾದರಿಯಲ್ಲಿಯೂ ಭಾರತೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಈ ಸರಣಿಯಲ್ಲಿಯೂ ನಟರಾಜನ್ ನೀಡಿದ ಪ್ರದರ್ಶನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಪ್ರದರ್ಶನದಿಂದಾಗಿ ನಟರಾಜನ್ ಭಾರತೀಯ ಚುಟುಕು ಕ್ರಿಕೆಟ್ ತಂಡದ ಖಾಯಂ ಸದಸ್ಯನಾಗುವ ವಿಶ್ವಾಸ ಮೂಡಿಸಿತ್ತು ಮಾತ್ರವಲ್ಲದೆ ಟಿ20 ವಿಶ್ವಕಪ್‌ನಲ್ಲಿ ನಟರಾಜನ್ ಖಂಡಿತಾ ಸ್ಥಾನ ಪಡೆಯಲಿದ್ದಾರೆ ಎಂಬ ವಿಶ್ವಾಸ ಮೂಡಿಸಿತ್ತು.

ಆದರೆ ಗಾಯ ನಟರಾಜನ್ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿತ್ತು. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಬಳಿಕ ಗಾಯಕ್ಕೆ ಒಳಗಾದ ನಟರಾಜನ್ ನಂತರ ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು. ಬಳಿಕ ಐಪಿಎಲ್‌ನಲ್ಲಿಯೂ ಕೇವಲ ಎರಡು ಪಂದ್ಯಕ್ಕಷ್ಟೇ ಸೀಮಿತವಾದ ನಟರಾಜನ್ ಭಾರತದಲ್ಲಿ ನಡೆದ ಮೊದಲಾರ್ಧದ ಆರಂಭಿಕ ಹಂತದಲ್ಲಿಯೇ ಟೂರ್ನಿಯಿಂದ ಹೊರಗುಳಿದು ಶಸ್ತ್ರಚಿಕಿತ್ಸೆಗೆ ಒಳಗಾದರು.

ಐಪಿಎಲ್ ಇತಿಹಾಸದಲ್ಲಿ 7ನೇ ಬಾರಿಗೆ ಮೂರಂಕಿ ದಾಟಲು ವಿಫಲವಾದ ಆರ್‌ಸಿಬಿಐಪಿಎಲ್ ಇತಿಹಾಸದಲ್ಲಿ 7ನೇ ಬಾರಿಗೆ ಮೂರಂಕಿ ದಾಟಲು ವಿಫಲವಾದ ಆರ್‌ಸಿಬಿ

ಹೀಗೆ ಗಾಯದಿಂದಾಗಿ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಸುದೀರ್ಘ ಕಾಲ ನಟರಾಜನ್ ದೂರವುಳಿಯಬೇಕಾಯಿತು. ಇದೇ ಕಾರಣದಿಂದಾಗಿ ಟಿ20 ವಿಶ್ವಕಪ್‌ಗೆ ಇತ್ತೀಚೆಗೆ ಆಯ್ಕೆ ಮಾಡಿದ ತಮಡದಲ್ಲಿ ಸ್ಥಾನ ಪಡೆಯಲು ನಟರಾಜನ್ ವಿಫಲವಾಗಿದ್ದಾರೆ. ಆದರೆ ಟಿ20 ವಿಶ್ವಕಪ್‌ನ ತಂಡಕ್ಕೆ ಆಯ್ಕೆಯಾಗದಿರುವುದಕ್ಕೆ ನಾನು ವಿಷಾದವನ್ನು ಹೊಂದಿಲ್ಲ ಎಂದು ನಟರಾಜನ್ ಹೇಳಿದ್ದಾರೆ.

ಇನ್ನು ಟಿ20 ವಿಶ್ವಕಪ್‌ಗೆ ತಂಡವನ್ನು ಆಯ್ಕೆ ಮಾಡಿದ ನಂತರ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ ಮಾತನಾಡಿ ಆಯ್ಕೆಯ ವೇಳೆ ನಟರಾಜನ್ ಹೆಸರು ಚರ್ಚೆಗೆ ಬಂದಿತ್ತು ಎಂದಿದ್ದಾರೆ. ಆದರೆ ಗಾಯದ ಕಾರಣದಿಂದಾಗಿ ಅವರನ್ನು ಆಯ್ಕೆ ಮಾಡಿಲ್ಲ ಎಂದು ವಿವರಿಸಿದ್ದರು.

ಐಪಿಎಲ್: ಕೆಕೆಆರ್ ವಿರುದ್ಧದ ಹೀನಾಯ ಸೋಲಿಗೆ ಕಾರಣ ಯಾರೆಂಬುದನ್ನು ಬಹಿರಂಗಪಡಿಸಿದ ಕೊಹ್ಲಿಐಪಿಎಲ್: ಕೆಕೆಆರ್ ವಿರುದ್ಧದ ಹೀನಾಯ ಸೋಲಿಗೆ ಕಾರಣ ಯಾರೆಂಬುದನ್ನು ಬಹಿರಂಗಪಡಿಸಿದ ಕೊಹ್ಲಿ

ಆಯ್ಕೆಯಾಗಲಾರೆ ಎಂದು ನಿರೀಕ್ಷಿಸಿದ್ದೆ
ಇಎಸ್‌ಪಿಎಲ್ ಕ್ರಿಕ್‌ಇನ್ಫೋ ಜೊತೆಗೆ ನಡೆಸಿದ ಸಂವಾದದಲ್ಲಿ ಟಿ20 ವಿಶ್ವಕಪ್‌ಗೆ ಸ್ಥಾನ ಪಡೆಯದ ವಿಚಾರವಾಗಿ ನಟರಾಜನ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ನಟರಾಜನ್ ಟಿ20 ವಿಶ್ವಕಪ್‌ಗೆ ಆಯ್ಕೆಯಾಗದ ಕಾರಣಕ್ಕೆ ತಾನು ಬೇಸರಗೊಂಡಿಲ್ಲ ಎಂದಿದ್ದಾರೆ. ಅಲ್ಲದೆ ಸುದೀರ್ಘ ಕಾಲದಿಂದ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವುಳಿದಿದ್ದ ಕಾರಣಕ್ಕೆ ಆಯ್ಕೆಯಾಗಲು ಸಾಧ್ಯವಿಲ್ಲ ಎಂಬುದನ್ನು ನಿರೀಕ್ಷಿಸಿದ್ದೆ ಎಂದು ನಟರಾಜನ್ ಹೇಳಿದ್ದಾರೆ

ಸಣ್ಣ ಅವಧಿಯಲ್ಲಿ ಆ ಉನ್ನತ ಸ್ಥಾನ ತಲುಪುವುದು ಕಠಿಣ
"ಟಿ20 ವಿಶ್ವಕಪ್‌ಗೆ ನಾನು ಆಯ್ಕೆಯಾಗದ ಬಗ್ಗೆ ನಾನು ವಿಷಾದವನ್ನು ಹೊಂದಿಲ್ಲ. ಅತ್ಯಂತ ಕಡಿಮೆ ಅವಧಿಯಲ್ಲಿ ಈ ಸ್ಥಾನಕ್ಕೇ ಏರುವುದು ಬಹಳ ಕಠಿಣ ಎಂಬ ಸಂಗತಿ ನನಗೆ ಅರಿವಿದೆ. ಬಹಳಷ್ಟು ಜನರು ನೀನು ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಬೇಕಿತ್ತು ಎಂದು ಹೇಳಿದ್ದಾರೆ. ಆದರೆ 15 ಸದಸ್ಯರ ತಂಡಕ್ಕೆ ನಾನು ಆಯ್ಕೆಯಾಗುವುದಿಲ್ಲ ಎಂಬುದನ್ನು ನಿರೀಕ್ಷಿಸಿದ್ದೆ. ನಾನು ಈಗಷ್ಟೇ ಗಾಯದಿಂದ ಚೇತರಿಸಿಕೊಂಡಿದ್ದು ಕಳೆದ ಐದು ಐದೂವರೆ ತಿಂಗಳಿಂದ ಕ್ರಿಕೆಟ್ ಆಡಿರಲಿಲ್ಲ ಎಂಬ ಅರಿವು ನನಗಿದೆ" ಎಂದು ಟಿ ನಟರಾಜನ್ ಹೇಳಿಕೆ ನೀಡಿದ್ದಾರೆ.

ಐಪಿಎಲ್ ಬಳಿಕ ಆಯ್ಕೆ ನಡೆಸಿದ್ದರೆ ಅವಕಾಶವಿತ್ತು
ಮುಂದುವರಿದು ಮಾತನಾಡಿದ ನಟರಾಜನ್ ಐಪಿಎಲ್ ಆವೃತ್ತಿಯ ನಂತರ ವಿಶ್ವಕಪ್ ಆಯ್ಕೆ ನಡೆಸಿದ್ದರೆ ತನಗೆ ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವ ಅವಕಾಶವಿತ್ತು ಎಂದಿದ್ದಾರೆ. "ಟಿ20 ವಿಶ್ವಕಪ್‌ಗೆ ಐಪಿಎಲ್ ಬಳಿಕ ಆಯ್ಕೆ ನಡೆಸಿದ್ದರೆ ತಂಡಕ್ಕೆ ಮರಳಲು ಅವಕಾಶವಿತ್ತು. ಪಂದ್ಯವನ್ನು ಆಡದೆ ತಂಡಕ್ಕೆ ಆಯ್ಕೆಯಾಗುವುದನ್ನು ನಿರೀಕ್ಷಿಸಲು ನೀವು ಸಾಧ್ಯವಿಲ್ಲ. ಕನಿಷ್ಠ ನೆಟ್ ಬೌಲರ್ ಆಗಿ ತಂಡದೊಂದಿಗೆ ಪ್ರಯಾಣಿಸಲು ಅವಕಾಶ ದೊರೆಯಬಹುದು ಎಂದು ಭಾವಿಸಿದ್ದೆ. ಆದರೆ 15 ಮಂದಿಯ ತಂಡದಲ್ಲಿ ಸ್ಥಾನವನ್ನು ನಾನು ಖಂಡಿತಾ ನಿರೀಕ್ಷಿಸಿರಲಿಲ್ಲ" ಎಂದಿದ್ದಾರೆ ನಟರಾಜನ್.

'ಧೋನಿ ಟಿಪ್ಸ್ ಕೊಟ್ಟಿದ್ದಾರೆ, ಒಳ್ಳೆಯ ಆರಂಭ ಸಿಕ್ಕಿದೆ, ಈ ಸಲ ಕಪ್ ನಮ್ದೇ' ಎಂದ ಆರ್‌ಸಿಬಿ ಆಟಗಾರ!'ಧೋನಿ ಟಿಪ್ಸ್ ಕೊಟ್ಟಿದ್ದಾರೆ, ಒಳ್ಳೆಯ ಆರಂಭ ಸಿಕ್ಕಿದೆ, ಈ ಸಲ ಕಪ್ ನಮ್ದೇ' ಎಂದ ಆರ್‌ಸಿಬಿ ಆಟಗಾರ!

ಮುಂದುವರಿದು ಮಾತನಾಡಿದ ನಟರಾಜನ್, "ನಾನು ಕಾಲಿನ ಗಾಯದಿಂದ ಚೇತರಿಸಿಕೊಳ್ಳುವ ಬಗ್ಗೆ ಮತ್ತು ಐಪಿಎಲ್‌ನಲ್ಲಿ ಆಡುವ ಬಗ್ಗೆ ಮಾತ್ರವೇ ಗಮನಹರಿಸಿದ್ದೆ. ಉಳಿದದ್ದೆಲ್ಲವೂ ತಾನಾಗಿಯೇ ನಡೆಯುತ್ತದೆ ಎಂಬ ಆತ್ಮವಿಶ್ವಾಸವನ್ನು ಕೂಡ ಈ ಸಂದರ್ಭದಲ್ಲಿ ನಟರಾಜನ್ ವ್ಯಕ್ತಪಡಿಸಿದ್ದಾರೆ.

ಗೊಂದಲಕ್ಕೆ ಒಳಗಾದಾಗ ಭವಿ ಸಹಾಯ ಪಡೆಯುವೆ

ಇನ್ನು ಇದೇ ಸಂದರ್ಭದಲ್ಲಿ ನಟರಾಜನ್ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಸಹಾಯದ ಬಗ್ಗೆಯೂ ಮಾತನಾಡಿದ್ದಾರೆ. ತನ್ನ ವೃತ್ತಿ ಜೀವನದಲ್ಲಿ ಭುವನೇಶ್ವರ್ ಕುಮಾರ್ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ ಎಂದಿದ್ದಾರೆ ನಟ್ಟು. "ನಾವಿಬ್ಬರೂ ಕಳೆದ ಮೂರ್ನಾಲ್ಕು ಆವೃತ್ತಿಗಳಿಂದ ಎಸ್‌ಆರ್‌ಹೆಚ್ ತಂಡದಲ್ಲಿದ್ದೇವೆ. ನಾವಿಬ್ಬರು ಸಾಕಷ್ಟು ಸಂಗತಿಗಳನ್ನು ಒಬ್ಬರರಿಗೊಬ್ಬರು ಹಂಚಿಕೊಳ್ಳುತ್ತೇವೆ. ನಾನು ಎರಡು ವರ್ಷಗಳ ಕಾಲ ಆಡಲು ಯಾವುದೇ ಅವಕಾಶಗಳನ್ನು ಪಡೆಯದಿದ್ದಾಗ ಭುವನೇಶ್ವರ್ ಕುಮಾರ್ ನನಗೆ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ನನಗಾಗಿ ಅವಕಾಶ ಬರುತ್ತದೆ ಎಂದು ಆತ್ಮವಿಶ್ವಾಸ ತುಂಬಿದ್ದಾರೆ. ಯಾವುದೇ ನಿರೀಕ್ಷೆಗಳಿಲ್ಲದೆ ಬೌಲಿಂಗ್ ಮೇಲೆ ಗಮನಹರಿಸಲು ಅವರು ಸಲಹೆ ನೀಡಿದ್ದರು. ತಾನು ಕೂಡ ಬೆಂಚ್ ಕಾದಿರುವುದನ್ನು ವಿವರಿಸಿದ್ದ ಭುವನೇಶ್ವರ್ ಕುಮಾರ್ ನಿರುತ್ಸಾಹಗೊಳ್ಳದಂತೆ ಪ್ರೇರೇಪಿಸಿದ್ದರು" ಎಂದಿದ್ದಾರೆ ನಟರಾಜನ್.

ನೆಟ್‌ನಲ್ಲಿ ನಾನು ಫೀಲ್ಟಿಂಗ್ ನಿಲ್ಲಿಸುವ ವಿಚಾರವಾಗಿ ಹಾಗೂ ಪಂದ್ಯಕ್ಕೆ ಸಂಬಂಧಿಸಿದ ಸಾಕಷ್ಟು ಮಾಹಿತಿಯನ್ನು ಕೇಳುತ್ತಿರುತ್ತೇನೆ. ಆತ ನನಗೆ ಯಾವಾಗಲೂ ವಿಶ್ವಾಸವಿದ್ದರೆ ಆ ವಿಚಾರದಲ್ಲಿ ಮುಂದುವರಿಯುವಂತೆ ತಿಳಿಸುತ್ತಾರೆ. ಆ ನಿರ್ಧಾರದಲ್ಲಿ ರನ್‌ಗಳನ್ನು ನೀಡಿದರೂ ಚಿಂತಸಬೇಕಾಗಿಲ್ಲ ಎನ್ನುತ್ತಾರೆ. ನಾನು ಗೊಂದಲಕ್ಕೊಳಗಾದಾಗ ಅವರಿಂದ ಮಾಹಿತಿಯನ್ನು ಪಡೆಯುತ್ತಿರುತ್ತೇನೆ. ಅವರು ತನ್ನ ಅನುಭವವನ್ನು ಹಂಚಿಕೊಳ್ಳುತ್ತಾರೆ. ಹೀಗಾಗಿ ಯಾವಾಗ ಬೇಕಾದರೂ ತನಗೆ ಕರೆ ಮಾಡುವಂತೆ ತಿಳಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಅವರೊಂದಿಗಿನ ಈ ಪಯಣ ನಿಜಕ್ಕೂ ತುಂಬಾ ಅದ್ಭುತವಾಗಿದೆ" ಎಂದು ಟಿ ನಟರಾಜನ್ ವಿವರಿಸಿದ್ದಾರೆ.

2016ರ ಐಪಿಎಲ್ ಟೂರ್ನಿಯ ಚಾಂಪಿಯನ್ ತಂಡವಾಗಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಈ ಬಾರಿ ಅತ್ಯಂತ ಕೆಟ್ಟ ಪ್ರದರ್ಶನವನ್ನು ನೀಡಿದೆ. ಹೀಗಾಗಿ ಯುಎಇ ಚರಣದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ ಹೈದರಾಬಾದ್ ತಂಡ. ಸದ್ಯ ಟೂರ್ನಿಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಟೂರ್ನಿಯಲ್ಲಿ ಭರ್ತಿ ಏಳು ಪಂದ್ಯಗಳು ಬಾಕಿಯಿದೆ. ಇದರಲ್ಲಿ ಪ್ಲೇಆಫ್ ಹಂತಕ್ಕೇರಬೇಕಾದರೆ ಕನಿಷ್ಠ ಆರು ಪಂದ್ಯಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಗೆಲುವು ಗಳಿಸಬೇಕಿದೆ. ಕೇನ್ ವಿಲಿಯಮ್ಸನ್ ನೇತೃತ್ವದ ತಂಡ ಈ ಹಂತದಲ್ಲಿ ಕ್ರಮವಾಗಿ ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್, ರಾಜಸ್ಥಾನ್ದ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಟರ್ಸ್ ತಂಡವನ್ನು ಎದುರಿಸಲಿದೆ.

Story first published: Wednesday, September 22, 2021, 10:08 [IST]
Other articles published on Sep 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X