ಭಾರತ vs ನ್ಯೂಜಿಲೆಂಡ್‌: ಪಂದ್ಯಕ್ಕೂ ಮುನ್ನ ಕಿವೀಸ್‌ಗೆ ಉಂಟಾಗಿರುವ ಈ 2 ಸಮಸ್ಯೆಗಳಿಂದ ಭಾರತಕ್ಕೆ ಲಾಭ

ಪ್ರಸ್ತುತ ನಡೆಯುತ್ತಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಗ್ರೂಪ್‌ 2ನಲ್ಲಿರುವ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಮತ್ತು ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡಗಳೆರಡೂ ಇತ್ತೀಚಿಗಷ್ಟೆ ನಡೆದ ಸೂಪರ್ 12 ಹಂತದ ತಮ್ಮ ಮೊದಲನೇ ಪಂದ್ಯಗಳಲ್ಲಿ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ವಿರುದ್ಧ ಸೋಲನ್ನು ಅನುಭವಿಸಿವೆ.

ಟಿ20 ವಿಶ್ವಕಪ್: 'ನ್ಯೂಜಿಲೆಂಡ್‌ ವಿರುದ್ಧ ಭಾರತ ತಂಡದಲ್ಲಿ ಈ 2 ಬದಲಾವಣೆ ಮಾಡದಿದ್ದರೆ ಸೋಲು ಖಚಿತ!'ಟಿ20 ವಿಶ್ವಕಪ್: 'ನ್ಯೂಜಿಲೆಂಡ್‌ ವಿರುದ್ಧ ಭಾರತ ತಂಡದಲ್ಲಿ ಈ 2 ಬದಲಾವಣೆ ಮಾಡದಿದ್ದರೆ ಸೋಲು ಖಚಿತ!'

ಅಕ್ಟೋಬರ್ 24ರ ಭಾನುವಾರದಂದು ನಡೆದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್‍ಗಳ ಅಮೋಘ ಜಯವನ್ನು ಸಾಧಿಸುವುದರ ಮೂಲಕ ವಿಶ್ವಕಪ್ ಇತಿಹಾಸದಲ್ಲಿಯೇ ಭಾರತದ ವಿರುದ್ಧ ತನ್ನ ಮೊದಲನೇ ಜಯವನ್ನು ಸಾಧಿಸಿತು. ಇನ್ನು ಹಾಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಸ್ ಎನಿಸಿಕೊಂಡಿರುವ ನ್ಯೂಜಿಲೆಂಡ್ ತಂಡ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಕೆಟ್ಟ ಆರಂಭವನ್ನು ಪಡೆದುಕೊಂಡಿದೆ. ಅಕ್ಟೋಬರ್ 26ರ ಮಂಗಳವಾರದಂದು ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಸೂಪರ್ 12 ಹಂತದ ತನ್ನ ಮೊದಲನೇ ಪಂದ್ಯದಲ್ಲಿ ಪಾಕಿಸ್ತಾನದ ಜೊತೆ ಸೆಣಸಾಡಿದ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡ ಸೋಲನುಭವಿಸುವುದರ ಮೂಲಕ ಟೂರ್ನಿಯಲ್ಲಿ ನೀರಸ ಆರಂಭವನ್ನು ಪಡೆದುಕೊಂಡಿದೆ.

ಆಶ್ಚರ್ಯವೆಂದರೂ ಇದು ಸತ್ಯ: ಈ ತಂಡಗಳು ಇದುವರೆಗೂ ಒಂದೇ ಒಂದು ಟಿ20 ಪಂದ್ಯದಲ್ಲೂ ಎದುರಾಗಿಲ್ಲ!ಆಶ್ಚರ್ಯವೆಂದರೂ ಇದು ಸತ್ಯ: ಈ ತಂಡಗಳು ಇದುವರೆಗೂ ಒಂದೇ ಒಂದು ಟಿ20 ಪಂದ್ಯದಲ್ಲೂ ಎದುರಾಗಿಲ್ಲ!

ಹೀಗೆ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿರುವ ಪಾಕಿಸ್ತಾನ ಮುಂದಿನ ಪಂದ್ಯಗಳಲ್ಲಿ ಆಫ್ಘಾನಿಸ್ತಾನ, ಸ್ಕಾಟ್ಲೆಂಡ್ ಮತ್ತು ನಮೀಬಿಯಾ ತಂಡಗಳ ವಿರುದ್ಧ ಸೆಣಸಾಡಲಿದ್ದು ಈ ಪಂದ್ಯಗಳಲ್ಲಿಯೂ ಸುಲಭವಾಗಿ ಜಯಗಳಿಸುವುದು ಖಚಿತ. ಹೀಗಾಗಿ ಪಾಕಿಸ್ತಾನ ತಂಡ ಗ್ರೂಪ್ 2ರಿಂದ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದುಕೊಳ್ಳಲಿದ್ದು, ಈ ಗುಂಪಿನಿಂದ ಸೆಮಿಫೈನಲ್ ಪ್ರವೇಶಿಸುವ ಎರಡನೇ ತಂಡಕ್ಕಾಗಿ ನ್ಯೂಜಿಲೆಂಡ್ ಮತ್ತು ಭಾರತದ ನಡುವೆ ಇದೀಗ ಪೈಪೋಟಿ ಏರ್ಪಟ್ಟಿದೆ. ಹೀಗಾಗಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಅಕ್ಟೋಬರ್ 31ರಂದು ನಡೆಯಲಿರುವ ಪಂದ್ಯ ಯಾವ ತಂಡ ಸೆಮಿಫೈನಲ್ ಕಡೆ ಮುಖ ಮಾಡಲಿದೆ ಎಂಬುದನ್ನು ನಿರ್ಧರಿಸಲಿದೆ. ಆದರೆ ಈ ಪಂದ್ಯಕ್ಕೂ ಮುನ್ನವೇ ನ್ಯೂಜಿಲೆಂಡ್ ತಂಡಕ್ಕೆ 2 ಆಘಾತಗಳು ಉಂಟಾಗಿದ್ದು ತಂಡದ ಇಬ್ಬರು ಪ್ರಮುಖ ಆಟಗಾರರು ಗಾಯಕ್ಕೀಡಾಗಿದ್ದಾರೆ. ಹೀಗಾಗಿ ಟೀಮ್ ಇಂಡಿಯಾಗೆ ನ್ಯೂಜಿಲೆಂಡ್ ತಂಡದ ಈ ಕೆಳಕಂಡ ಆಟಗಾರರ ಗಾಯದ ಸಮಸ್ಯೆ ಲಾಭವಾಗಿ ಪರಿಣಮಿಸಬಹುದು.

ಹೆಬ್ಬೆರಳಿನ ಗಾಯದಿಂದ ಬಳಲುತ್ತಿದ್ದಾರೆ ಮಾರ್ಟಿನ್ ಗಪ್ಟಿಲ್

ಹೆಬ್ಬೆರಳಿನ ಗಾಯದಿಂದ ಬಳಲುತ್ತಿದ್ದಾರೆ ಮಾರ್ಟಿನ್ ಗಪ್ಟಿಲ್

ಇತ್ತೀಚೆಗಷ್ಟೇ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾಗವಹಿಸಿದ್ದ ನ್ಯೂಜಿಲೆಂಡ್ ತಂಡದ ಪ್ರಮುಖ ಆಟಗಾರ ಮಾರ್ಟಿನ್ ಗಪ್ಟಿಲ್ ಹ್ಯಾರಿಸ್ ರೌಫ್ ಎಸೆತದಲ್ಲಿ ಚೆಂಡು ವೇಗವಾಗಿ ತಾಕಿದ ಕಾರಣ ಹೆಬ್ಬೆರಳಿನ ಗಾಯಕ್ಕೊಳಗಾಗಿದ್ದಾರೆ. ಸದ್ಯ ಈ ಕುರಿತಾಗಿ ಪ್ರತಿಕ್ರಿಯಿಸಿರುವ ವೈದ್ಯರು ಮಾರ್ಟಿನ್ ಗಪ್ಟಿಲ್ 48 ಗಂಟೆಗಳ ಕಾಲ ವಿಶ್ರಾಂತಿ ಪಡೆಯುವ ಅಗತ್ಯವಿದ್ದು ನಂತರ ಅವರು ಆಟವಾಡಲು ಲಭ್ಯರಿದ್ದಾರಾ ಅಥವಾ ಇಲ್ಲವಾ ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದಿದ್ದಾರೆ. ಹೀಗಾಗಿ ಮಾರ್ಟಿನ್ ಗಪ್ಟಿಲ್ ಮುಂಬರಲಿರುವ ಭಾರತ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದು ಬಹುತೇಕ ಅನುಮಾನವಾಗಿದ್ದು ಇದು ಟೀಮ್ ಇಂಡಿಯಾಗೆ ಪ್ಲಸ್ ಪಾಯಿಂಟ್ ಆಗಬಹುದು.

ಲಾಕಿ ಫರ್ಗ್ಯುಸನ್ ಟೂರ್ನಿಯಿಂದಲೇ ಹೊರಕ್ಕೆ!

ಲಾಕಿ ಫರ್ಗ್ಯುಸನ್ ಟೂರ್ನಿಯಿಂದಲೇ ಹೊರಕ್ಕೆ!

ನ್ಯೂಜಿಲೆಂಡ್ ತಂಡದ ಬೌಲಿಂಗ್ ಬಳಗದ ಬಲಿಷ್ಠತೆಯಲ್ಲಿ ಪ್ರಮುಖರಾಗಿದ್ದ ಲಾಕಿ ಫರ್ಗ್ಯುಸನ್ ಪಾಕಿಸ್ತಾನ ವಿರುದ್ಧದ ಪಂದ್ಯ ಆರಂಭಕ್ಕೂ ಮುನ್ನ ನಡೆಸುತ್ತಿದ್ದ ಅಭ್ಯಾಸದ ವೇಳೆ ಕಾಲಿನ ಗಾಯಕ್ಕೆ ಒಳಗಾಗಿದ್ದು ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದರು. ಚಿಕಿತ್ಸೆ ನೀಡಿದ ವೈದ್ಯರು ಗಾಯದ ಪರಿಣಾಮ ತುಸು ಹೆಚ್ಚಾಗಿಯೇ ಇರುವ ಕಾರಣ ಲಾಕಿ ಫರ್ಗ್ಯುಸನ್ ನಾಲ್ಕೈದು ವಾರಗಳ ಕಾಲ ವಿಶ್ರಾಂತಿ ಪಡೆಯಬೇಕಾದ ಅನಿವಾರ್ಯತೆ ಇದೆ ಎಂದಿದ್ದಾರೆ. ಹೀಗಾಗಿ ಲಾಕಿ ಫರ್ಗ್ಯುಸನ್ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ. ಸದ್ಯ ಆ್ಯಡಮ್ ಮಿಲ್ನೆ ಅವರನ್ನು ಲಾಕಿ ಫರ್ಗ್ಯುಸನ್ ಬದಲಾಗಿ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.

18 ವರ್ಷದ ಕೆಟ್ಟ ದಾಖಲೆ ಅಳಿಸಿಹಾಕುತ್ತಾ ಭಾರತ?

18 ವರ್ಷದ ಕೆಟ್ಟ ದಾಖಲೆ ಅಳಿಸಿಹಾಕುತ್ತಾ ಭಾರತ?

ಭಾರತ ನ್ಯೂಜಿಲೆಂಡ್ ವಿರುದ್ಧ ಐಸಿಸಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆದ್ದು 18 ವರ್ಷಗಳೇ ಕಳೆದಿವೆ. ಹೌದು 2003ರಲ್ಲಿ ನಡೆದಿದ್ದ ಐಸಿಸಿ ಪಂದ್ಯಾವಳಿಯ ಪಂದ್ಯವೊಂದರಲ್ಲಿ ನ್ಯೂಜಿಲೆಂಡ್ ತಂಡವನ್ನು ಭಾರತ ಸೋಲಿಸಿತ್ತು. ಇದಾದ ಬಳಿಕ ಯಾವುದೇ ಐಸಿಸಿ ಟೂರ್ನಮೆಂಟ್ ಪಂದ್ಯಗಳಲ್ಲಿಯೂ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು ಸೋಲಿಸಿಲ್ಲ. ಹೀಗಾಗಿ ಈ ಕೆಟ್ಟ ಸೋಲಿನ ಸರಪಳಿಯನ್ನು ಟೀಮ್ ಇಂಡಿಯಾ ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಗೆಲ್ಲುವುದರ ಮೂಲಕ ಅಂತ್ಯಗೊಳಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

For Quick Alerts
ALLOW NOTIFICATIONS
For Daily Alerts
Story first published: Wednesday, October 27, 2021, 17:40 [IST]
Other articles published on Oct 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X