ಟಿ20 ವಿಶ್ವಕಪ್: ನ್ಯೂಜಿಲೆಂಡ್‌ಗೆ ಮತ್ತೊಂದು ಜಯ; ಭಾರತದ ಸೆಮಿಫೈನಲ್ ಕನಸಿಗೆ ತಣ್ಣೀರು?

ಪ್ರಸ್ತುತ ಯುಎಇಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ 36ನೇ ಪಂದ್ಯದಲ್ಲಿ ಇಂದು (ನವೆಂಬರ್‌ 5) ನ್ಯೂಜಿಲೆಂಡ್ ಮತ್ತು ನಮೀಬಿಯಾ ತಂಡಗಳು ಸೆಣಸಾಟ ನಡೆಸಿದವು. ಇತ್ತಂಡಗಳ ನಡುವೆ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ನ್ಯೂಜಿಲೆಂಡ್ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ತನ್ನ ಸೆಮಿಫೈನಲ್ ಕನಸು ಮತ್ತು ಆಸೆಯನ್ನು ಮತ್ತಷ್ಟು ಭದ್ರಪಡಿಸಿಕೊಂಡಿರುವ ನ್ಯೂಜಿಲೆಂಡ್ ಅಫ್ಘಾನಿಸ್ತಾನ ಮತ್ತು ಟೀಮ್ ಇಂಡಿಯಾ ಸೆಮಿಫೈನಲ್ ಆಸೆಗೆ ಬಹುತೇಕ ತಣ್ಣೀರನ್ನು ಎರಚಿದೆ.

ಭಾರತ vs ಸ್ಕಾಟ್ಲೆಂಡ್: ಗೆಲುವಿಗಾಗಿ ಕೊಹ್ಲಿಯ ಹಳೇ ತಂತ್ರ; ಸೆಮಿಫೈನಲ್ ಪ್ರವೇಶಿಸಲು ಈ ರೀತಿ ನಡೆಯಲೇಬೇಕು!ಭಾರತ vs ಸ್ಕಾಟ್ಲೆಂಡ್: ಗೆಲುವಿಗಾಗಿ ಕೊಹ್ಲಿಯ ಹಳೇ ತಂತ್ರ; ಸೆಮಿಫೈನಲ್ ಪ್ರವೇಶಿಸಲು ಈ ರೀತಿ ನಡೆಯಲೇಬೇಕು!

ಟೂರ್ನಿಯಲ್ಲಿ ನ್ಯೂಜಿಲೆಂಡ್ ಆಡಿದ ನಾಲ್ಕನೇ ಪಂದ್ಯ ಇದಾಗಿದ್ದು, ಈ ಪಂದ್ಯದಲ್ಲಿ ನಮೀಬಿಯಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದರ ಮೂಲಕ ತನ್ನ ಎದುರಾಳಿ ನ್ಯೂಜಿಲೆಂಡ್ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ನೀಡಿತು. ಹೀಗೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಪರ ಆರಂಭಿಕ ಆಟಗಾರರಾದ ಮಾರ್ಟಿನ್ ಗಪ್ಟಿಲ್ 18 ಹಾಗೂ ಡೆರಿಲ್ ಮಿಚೆಲ್ 19 ಕಲೆಹಾಕಿದರು. ನಂತರ ಕೇನ್ ವಿಲಿಯಮ್ಸನ್ 28 ಮತ್ತು ಡಿವೊನ್ ಕಾನ್ವೆ 17 ರನ್ ಗಳಿಸಿದರು. ಬಳಿಕ ಒಂದಾದ ಜೇಮ್ಸ್ ನೀಶಮ್ ಮತ್ತು ಗ್ಲೆನ್ ಫಿಲಿಪ್ಸ್ ವೇಗದ ಆಟವನ್ನಾಡುವ ಮೂಲಕ ನ್ಯೂಜಿಲೆಂಡ್ ತಂಡದ ರನ್ ಏರಿಸಿದರು. ನೀಶಮ್ 23 ಎಸೆತಗಳಲ್ಲಿ ಅಜೇಯ 35 ರನ್ ಗಳಿಸಿದರೆ, ಗ್ಲೆನ್ ಫಿಲಿಪ್ಸ್ 21 ಎಸೆತಗಳಲ್ಲಿ 39 ರನ್ ಬಾರಿಸಿದರು. ಈ ಮೂಲಕ ನ್ಯೂಜಿಲೆಂಡ್‌ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿ ನಮೀಬಿಯಾಗೆ 164 ರನ್‌ಗಳ ಗುರಿಯನ್ನು ನೀಡಿತು.

ಭಾರತ ವಿರುದ್ಧದ ಟೆಸ್ಟ್ ಸರಣಿಗೆ 15 ಆಟಗಾರರ ತಂಡ ಪ್ರಕಟಿಸಿದ ನ್ಯೂಜಿಲೆಂಡ್‌; ಬಲಿಷ್ಠರಿಗೇ ಸ್ಥಾನವಿಲ್ಲ!ಭಾರತ ವಿರುದ್ಧದ ಟೆಸ್ಟ್ ಸರಣಿಗೆ 15 ಆಟಗಾರರ ತಂಡ ಪ್ರಕಟಿಸಿದ ನ್ಯೂಜಿಲೆಂಡ್‌; ಬಲಿಷ್ಠರಿಗೇ ಸ್ಥಾನವಿಲ್ಲ!

ಆದರೆ ಈ ಗುರಿಯನ್ನು ಬೆನ್ನತ್ತಲು ಮುಂದಾದ ನಮೀಬಿಯಾ ವಿಫಲವಾಗಿ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 111 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ನ್ಯೂಜಿಲೆಂಡ್ 52 ರನ್‌ಗಳ ಭರ್ಜರಿ ಜಯವನ್ನು ದಾಖಲಿಸಿತು. ಈ ಪಂದ್ಯದಲ್ಲಿ ಗೆದ್ದಿದ್ದು ಮಾತ್ರವಲ್ಲದೇ ಟೂರ್ನಿಯಲ್ಲಿ 6 ಅಂಕಗಳನ್ನು ಪಡೆದು ಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿರುವ ನ್ಯೂಜಿಲೆಂಡ್ ಇದೀಗ ಸೆಮಿಫೈನಲ್ ಕನಸು ಇಟ್ಟುಕೊಂಡಿದ್ದ ಭಾರತ ಮತ್ತು ಅಫ್ಘಾನಿಸ್ತಾನಗಳು ಹಿನ್ನಡೆ ಅನುಭವಿಸುವಂತೆ ಮಾಡಿದೆ.

ಐಸಿಸಿ ಟ್ರೋಫಿಯ ಟೂರ್ನಿಗಳಲ್ಲಿ ಭಾರತ ಫೈನಲ್ ಪ್ರವೇಶಿಸುವುದಕ್ಕೂ ಮತ್ತು ಟ್ರೋಫಿ ಗೆಲ್ಲುವುದಕ್ಕೂ ಇತ್ತೀಚಿನ ವರ್ಷಗಳಲ್ಲಿ ಅತೀ ದೊಡ್ಡ ಪ್ರಮಾಣದಲ್ಲಿ ಅಡ್ಡಿಯಾಗುತ್ತಿರುವ ನ್ಯೂಜಿಲೆಂಡ್ ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿಯೂ ಸಹ ಭಾರತ ಸೆಮಿಫೈನಲ್ ಪ್ರವೇಶಕ್ಕೆ ಅಡ್ಡಿಯನ್ನು ಉಂಟುಮಾಡಿದೆ. ಇನ್ನು ನ್ಯೂಜಿಲೆಂಡ್ ಮತ್ತು ನಮೀಬಿಯಾ ತಂಡಗಳ ನಡುವಿನ ಪಂದ್ಯ ಮುಗಿದ ನಂತರ ಟೀಮ್ ಇಂಡಿಯಾಗೆ ಸೆಮಿಫೈನಲ್ ಪ್ರವೇಶಿಸುವ ಅರ್ಹತೆ ಎಷ್ಟಿದೆ ಎಂಬುದರ ಕುರಿತ ಮಾಹಿತಿ ಮುಂದೆ ಓದಿ..

ಭಾರತ ತನ್ನ ಎಲ್ಲಾ ಪಂದ್ಯವನ್ನು ದೊಡ್ಡ ಅಂತರದಲ್ಲಿ ಗೆಲ್ಲಲೇಬೇಕು

ಭಾರತ ತನ್ನ ಎಲ್ಲಾ ಪಂದ್ಯವನ್ನು ದೊಡ್ಡ ಅಂತರದಲ್ಲಿ ಗೆಲ್ಲಲೇಬೇಕು

ಟೂರ್ನಿಯಲ್ಲಿ ಇದುವರೆಗೂ 3 ಪಂದ್ಯಗಳನ್ನಾಡಿರುವ ಟೀಮ್ ಇಂಡಿಯಾ 2 ಪಂದ್ಯಗಳಲ್ಲಿ ಸೋತಿದ್ದು ಕೇವಲ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಗೆದ್ದಿದೆ. ಸದ್ಯ ಸ್ಕಾಟ್ಲೆಂಡ್ ವಿರುದ್ಧ ಇರುವ ಪಂದ್ಯದಲ್ಲಿ ಟೀಮ್ ಇಂಡಿಯಾ ದೊಡ್ಡ ಅಂತರದಲ್ಲಿ ಗೆಲ್ಲುವುದರ ಮೂಲಕ ಉತ್ತಮ ನೆಟ್ ರನ್ ರೇಟ್ ಪಡೆದುಕೊಂಡರೆ ಮಾತ್ರ ಮುಂದಿನ ಪಂದ್ಯಗಳ ಫಲಿತಾಂಶದ ಆಧಾರದ ಮೇಲೆ ಸೆಮಿಫೈನಲ್ ಪ್ರವೇಶಿಸುವ ಅವಕಾಶ ದೊರೆತರೆ ಟೀಮ್ ಇಂಡಿಯಾ ಉತ್ತಮ ನೆಟ್ ರನ್ ರೇಟ್ ಸಹಾಯದಿಂದ ಸೆಮಿಫೈನಲ್ ಪ್ರವೇಶಿಸಬಹುದು. ಕೇವಲ ಈ ಪಂದ್ಯದಲ್ಲಿ ಮಾತ್ರವಲ್ಲದೆ ಮುಂಬರಲಿರುವ ನಮೀಬಿಯಾ ವಿರುದ್ಧದ ಪಂದ್ಯದಲ್ಲಿಯೂ ಕೂಡ ಟೀಮ್ ಇಂಡಿಯಾ ದೊಡ್ಡ ಅಂತರದಲ್ಲಿ ಗೆಲ್ಲಬೇಕಿದೆ.

ಅಫ್ಘಾನಿಸ್ತಾನ ವಿರುದ್ಧ ನ್ಯೂಜಿಲೆಂಡ್ ಸೋಲಲೇಬೇಕು

ಅಫ್ಘಾನಿಸ್ತಾನ ವಿರುದ್ಧ ನ್ಯೂಜಿಲೆಂಡ್ ಸೋಲಲೇಬೇಕು

ಟೀಮ್ ಇಂಡಿಯಾ ಸ್ಕಾಟ್ಲೆಂಡ್ ಮತ್ತು ನಮೀಬಿಯಾ ವಿರುದ್ಧದ ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಸಾಕಾಗುವುದಿಲ್ಲ ಜೊತೆಗೆ ನ್ಯೂಜಿಲೆಂಡ್ ತನ್ನ ಮುಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಸೋತರೆ ಮಾತ್ರ ಟೀಮ್ ಇಂಡಿಯಾಗೆ ಸೆಮಿಫೈನಲ್ ಪ್ರವೇಶಿಸುವ ಅವಕಾಶಗಳು ಲಭಿಸುತ್ತವೆ. ಒಂದುವೇಳೆ ಅಫ್ಘಾನಿಸ್ತಾನದ ವಿರುದ್ಧ ನ್ಯೂಜಿಲೆಂಡ್ ಜಯ ಸಾಧಿಸಿದರೆ ನ್ಯೂಜಿಲೆಂಡ್ ತಂಡ ನೇರವಾಗಿ ಸೆಮಿಫೈನಲ್ ಪ್ರವೇಶಿಸಲಿದ್ದು ಟೀಮ್ ಇಂಡಿಯಾ ಟೂರ್ನಿಯಿಂದ ಹೊರ ಬೀಳಲಿದೆ.

Toss ಗೆದ್ದಿದ್ದು ನನಗೆ ಸಿಕ್ಕ ದೊಡ್ಡ ಉಡುಗೊರೆ | Oneindia Kannada
ಆರಂಭದ ಪಂದ್ಯಗಳನ್ನು ಸೋತಿದ್ದೇ ತಪ್ಪಾಯ್ತು

ಆರಂಭದ ಪಂದ್ಯಗಳನ್ನು ಸೋತಿದ್ದೇ ತಪ್ಪಾಯ್ತು

ಹೌದು, ಟೀಮ್ ಇಂಡಿಯಾ ಆರಂಭದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧದ ಮೊದಲೆರಡು ಪಂದ್ಯಗಳನ್ನು ಸೋತಿದ್ದೇ ಇದೀಗ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸುವಲ್ಲಿ ಅನುಮಾನವನ್ನು ಹುಟ್ಟು ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಟೀಮ್ ಇಂಡಿಯಾ ಪಾಕಿಸ್ತಾನ ಅಥವಾ ನ್ಯೂಜಿಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಯಾವುದಾದರೊಂದು ಪಂದ್ಯವನ್ನು ಗೆದ್ದಿದ್ದರೂ ಸಹ ಭಾರತಕ್ಕೆ ಇತರೆ ತಂಡಗಳ ಪಂದ್ಯಗಳ ಫಲಿತಾಂಶದ ಮೇಲೆ ಅವಲಂಬಿತವಾಗದೇ ನೇರವಾಗಿ ಸೆಮಿಫೈನಲ್ ಪ್ರವೇಶಿಸುವ ಅವಕಾಶವಿರುತ್ತಿತ್ತು.

For Quick Alerts
ALLOW NOTIFICATIONS
For Daily Alerts
Story first published: Friday, November 5, 2021, 19:09 [IST]
Other articles published on Nov 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X