ನ್ಯೂಜಿಲೆಂಡ್‌ ವಿರುದ್ಧದ ಪಂದ್ಯಕ್ಕೆ ಭಾರತ ತಂಡದಲ್ಲಾಗಬೇಕಾದ ಬದಲಾವಣೆಗಳನ್ನು ತಿಳಿಸಿದ ಪಠಾಣ್

ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡ ಅತ್ಯುತ್ತಮ ಆರಂಭವನ್ನು ಪಡೆದುಕೊಳ್ಳುವುದರ ಮೂಲಕ ಸೂಪರ್ 12 ಗ್ರೂಪ್‌ 2ರ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಟೂರ್ನಿಯಲ್ಲಿ ಇದುವರೆಗೂ 3 ಪಂದ್ಯಗಳನ್ನಾಡಿರುವ ಪಾಕಿಸ್ತಾನ ಮುರೂ ಪಂದ್ಯಗಳಲ್ಲಿಯೂ ಗೆಲ್ಲುವುದರ ಮೂಲಕ ತನ್ನ ಸೆಮಿಫೈನಲ್ ಹಾದಿಯನ್ನು ಸುಗಮವಾಗಿಸಿಕೊಂಡಿದೆ.

ಟಿ20 ವಿಶ್ವಕಪ್: ಫೈನಲ್‌ ಪ್ರವೇಶಿಸಲಿರುವ ತಂಡಗಳನ್ನು ಹೆಸರಿಸಿದ ಬೆನ್ ಸ್ಟೋಕ್ಸ್ಟಿ20 ವಿಶ್ವಕಪ್: ಫೈನಲ್‌ ಪ್ರವೇಶಿಸಲಿರುವ ತಂಡಗಳನ್ನು ಹೆಸರಿಸಿದ ಬೆನ್ ಸ್ಟೋಕ್ಸ್

ನಿನ್ನೆ ( ಅಕ್ಟೋಬರ್ 29 ) ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದಲ್ಲಿ ಪಾಕಿಸ್ತಾನ 5 ವಿಕೆಟ್‍ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ತನ್ನ ಸೆಮಿಫೈನಲ್ ಪ್ರವೇಶವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಹೀಗಾಗಿ ಇದೇ ಗುಂಪಿನ ಮತ್ತೆರಡು ತಂಡಗಳಾದ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಅಕ್ಟೋಬರ್ 31ರ ಭಾನುವಾರದಂದು ನಡೆಯಲಿರುವ ಪಂದ್ಯ ಮಹತ್ವದ್ದಾಗಿದೆ.

ಹೌದು, ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ಸೆಮಿಫೈನಲ್ ರೇಸ್‌ನಲ್ಲಿ ಮುಂದುವರಿಯಲಿದ್ದು ಸೋಲುವ ತಂಡ ಬಹುತೇಕ ಸೆಮಿಫೈನಲ್ ಪ್ರವೇಶಿಸುವ ಆಸೆಯನ್ನು ಕೈಬಿಡುವಂತೆ ಆಗಲಿದೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಭಾರತ ತಂಡದ ಆಡುವ ಬಳಗ ಬಲಿಷ್ಠವಾಗಿರಬೇಕು ಎಂದು ಈಗಾಗಲೇ ಹಲವಾರು ಮಾಜಿ ಕ್ರಿಕೆಟಿಗರು ತಂಡದಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಆರ್‌ಸಿಬಿ ಅಲ್ಲ ಮುಂಬೈ ಇಂಡಿಯನ್ಸ್‌ಗೆ ರಾಹುಲ್?; ಅನುಮಾನ ಸೃಷ್ಟಿಸಿದ ಕೆಎಲ್ ರಾಹುಲ್‌ರ ಈ ನಡೆ!ಆರ್‌ಸಿಬಿ ಅಲ್ಲ ಮುಂಬೈ ಇಂಡಿಯನ್ಸ್‌ಗೆ ರಾಹುಲ್?; ಅನುಮಾನ ಸೃಷ್ಟಿಸಿದ ಕೆಎಲ್ ರಾಹುಲ್‌ರ ಈ ನಡೆ!

ಅದೇ ರೀತಿ ಇದೀಗ ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ ಹೇಗಿರಬೇಕು ಮತ್ತು ಯಾವ ಆಟಗಾರರು ತಂಡದಲ್ಲಿದ್ದಾರೆ ತಂಡ ಬಲಿಷ್ಠವಾಗಿರುತ್ತದೆ ಎಂಬುದರ ಕುರಿತು ಈ ಕೆಳಕಂಡಂತೆ ಸಲಹೆಯನ್ನು ನೀಡಿದ್ದಾರೆ.

ಹಾರ್ದಿಕ್ ಆಡದಿದ್ದರೆ ಶಾರ್ದೂಲ್ ಠಾಕೂರ್

ಹಾರ್ದಿಕ್ ಆಡದಿದ್ದರೆ ಶಾರ್ದೂಲ್ ಠಾಕೂರ್

"ಸದ್ಯ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ ಮಾಡಲಿದ್ದಾರಾ ಎಂಬುದು. ಫಿನಿಶಿಂಗ್ ಮಾಡುವ ಸಾಮರ್ಥ್ಯವನ್ನು ಹಾರ್ದಿಕ್ ಪಾಂಡ್ಯ ಈಗಲೂ ಹೊಂದಿದ್ದಾರಾ ಎಂಬ ಗೊಂದಲ ಕಾಡುತ್ತಿದೆ. ಇದಕ್ಕೆಲ್ಲಾ ಹಾರ್ದಿಕ್ ಪಾಂಡ್ಯ ತಯಾರಿದ್ದರೆ ಯಾವುದೇ ಸಮಸ್ಯೆಯಿಲ್ಲ. ಒಂದುವೇಳೆ ಹಾರ್ದಿಕ್ ಪಾಂಡ್ಯ ಸಜ್ಜಾಗಿಲ್ಲ ಎಂದರೆ ಅವರ ಬದಲು ಶಾರ್ದೂಲ್ ಠಾಕೂರ್ ಕಣಕ್ಕಿಳಿಯಲು ಸರಿಯಾದ ಆಯ್ಕೆಯಾಗಿದ್ದಾರೆ" ಎಂದು ಇರ್ಫಾನ್ ಪಠಾಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶಾರ್ದೂಲ್ ಠಾಕೂರ್ ಜೊತೆ ಮತ್ತೋರ್ವ ಬೌಲರ್ ಬೇಕು

ಶಾರ್ದೂಲ್ ಠಾಕೂರ್ ಜೊತೆ ಮತ್ತೋರ್ವ ಬೌಲರ್ ಬೇಕು

ಇನ್ನೂ ಮುಂದುವರಿದು ಮಾತನಾಡಿರುವ ಇರ್ಫಾನ್ ಪಠಾಣ್ ಶಾರ್ದೂಲ್ ಠಾಕೂರ್ ಆಯ್ಕೆಯಾದರೆ ಮತ್ತೋರ್ವ ಬೌಲರ್ ಅಗತ್ಯತೆ ತಂಡಕ್ಕೆ ಬೀಳಲಿದೆ ಎಂದಿದ್ದಾರೆ. ಹೀಗಾಗಿ ಶಾರ್ದೂಲ್ ಠಾಕೂರ್ ಜತೆಗೆ ರವಿಚಂದ್ರನ್ ಅಶ್ವಿನ್ ಅವರಿಗೂ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶವನ್ನು ನೀಡಬೇಕೆಂದು ಇರ್ಫಾನ್ ಪಠಾಣ್ ಸಲಹೆ ನೀಡಿದ್ದಾರೆ.

18 ವರ್ಷದ ಈ ಸೋಲಿನ ಸರಪಳಿಗೆ ಬ್ರೇಕ್ ಬೀಳುತ್ತಾ?

18 ವರ್ಷದ ಈ ಸೋಲಿನ ಸರಪಳಿಗೆ ಬ್ರೇಕ್ ಬೀಳುತ್ತಾ?

ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಹಾಗೂ ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಟೀಮ್ ಇಂಡಿಯಾದ ಸೆಮಿಫೈನಲ್ ಹಾದಿ ಸುಗಮವಾಗಲಿದೆ. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಈ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಭಾರತ ಸುಲಭವಾಗಿ ಗೆಲ್ಲಲಿದೆ ಎಂಬುದನ್ನು ಹೇಳುವುದು ಕಷ್ಟ. ಏಕೆಂದರೆ ಭಾರತ ನ್ಯೂಜಿಲೆಂಡ್ ವಿರುದ್ಧ ಐಸಿಸಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆದ್ದು 18 ವರ್ಷಗಳೇ ಕಳೆದಿವೆ. ಹೌದು 2003ರಲ್ಲಿ ನಡೆದಿದ್ದ ಐಸಿಸಿ ಪಂದ್ಯಾವಳಿಯ ಪಂದ್ಯವೊಂದರಲ್ಲಿ ನ್ಯೂಜಿಲೆಂಡ್ ತಂಡವನ್ನು ಭಾರತ ಸೋಲಿಸಿತ್ತು. ಇದಾದ ನಂತರ ನಡೆದ ಯಾವುದೇ ಐಸಿಸಿ ಪಂದ್ಯಾವಳಿಯ ಪಂದ್ಯದಲ್ಲಿಯೂ ನ್ಯೂಜಿಲೆಂಡ್ ತಂಡವನ್ನು ಭಾರತ ಸೋಲಿಸಿಲ್ಲ.

For Quick Alerts
ALLOW NOTIFICATIONS
For Daily Alerts
Story first published: Saturday, October 30, 2021, 14:24 [IST]
Other articles published on Oct 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X