T20 World Cup Points Table : ಪಾಕ್ ವಿರುದ್ಧ ಜಿಂಬಾಬ್ವೆ ಗೆದ್ದ ಬಳಿಕ ಪಾಯಿಂಟ್ಸ್ ಟೇಬಲ್ ಹೇಗಿದೆ?

ಐಸಿಸಿ ಟಿ20 ವಿಶ್ವಕಪ್‌ ಸೂಪರ್ 12 ಹಂತವು ಸಾಕಷ್ಟು ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಿದೆ. ಮೊದಲಿಗೆ ಭಾರತ ಮತ್ತು ಪಾಕಿಸ್ತಾನ ಪಂದ್ಯವು ಅಭಿಮಾನಿಗಳ ಎದೆ ಝಲ್ ಎನಿಸಿದ್ರೆ, ಗುರುವಾರ ಪಾಕಿಸ್ತಾನ ಮತ್ತು ಜಿಂಬಾಬ್ವೆ ತಂಡದ ನಡುವಿನ ಕಾದಾಟವು ಕ್ರಿಕೆಟ್ ಲೋಕಕ್ಕೆ ಅಚ್ಚರಿ ಮೂಡಿಸಿತು.

ಸೂಪರ್‌ 12ನ ಗ್ರೂಪ್‌ 2ನಲ್ಲಿ ಸ್ಥಾನ ಪಡೆದಿರುವ ಈ ನಾಲ್ಕು ತಂಡಗಳು ಗೆಲುವು ಮತ್ತು ಸೋಲಿನ ಬಳಿಕ ಸಾಕಷ್ಟು ವ್ಯತ್ಯಾಸಗೊಂಡಿವೆ. ಪಾಯಿಂಟ್ಸ್‌ ಟೇಬಲ್‌ನಲ್ಲಿ ಸೆಮಿಫೈನಲ್ ತಲುಪಲು ಪ್ರಬಲ ಪೈಪೋಟಿ ಎದುರಾಗಿದೆ. ಜಿಂಬಾಬ್ವೆ ತಂಡವು ಯಾರೂ ಊಹಿಸದ ರೀತಿಯಲ್ಲಿ ಬಲಿಷ್ಠ ಪಾಕಿಸ್ತಾನವನ್ನ ಮಣಿಸಿಬಿಟ್ಟಿದೆ.

ಸೋಲುವ ಪಂದ್ಯದಲ್ಲಿ ಮಳೆಯಿಂದಾಗಿ ಬಚಾಚ್ ಆಗಿದ್ದ ಜಿಂಬಾಬ್ವೆ

ಸೋಲುವ ಪಂದ್ಯದಲ್ಲಿ ಮಳೆಯಿಂದಾಗಿ ಬಚಾಚ್ ಆಗಿದ್ದ ಜಿಂಬಾಬ್ವೆ

ಹೌದು ಜಿಂಬಾಬ್ವೆ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಸೋಲುವ ಪಂದ್ಯವು ಮಳೆಯಿಂದಾಗಿ ಬಚಾವ್ ಆಗಿ 1 ಪಾಯಿಂಟ್ ಪಡೆದಿತ್ತು. ಆದ್ರೆ ಪಾಕ್ ವಿರುದ್ಧ ಇಂತಹ ಪ್ರದರ್ಶನ ನೀಡುತ್ತದೆ ಎಂದು ಯಾರೂ ಊಹಿಸಿರ್ಲಿಲ್ಲ. ಕೊನೆಯ ಎಸೆತದಲ್ಲಿ 3ರನ್‌ ಬೇಕಿದ್ದ ವೇಳೆಯಲ್ಲಿ ಪಾಕ್ ಗುರಿ ತಲುಪಲಾಗದೆ 1ರನ್‌ಗಳಿಂದ ಸೋಲನ್ನ ಅನುಭವಿಸಿದೆ.

ಇದಕ್ಕೂ ಮುನ್ನ ಗುರುವಾರ ನಡೆದ ಭಾರತ ಮತ್ತು ನೆದರ್ಲ್ಯಾಂಡ್ಸ್ ಪಂದ್ಯವು ಪೂರ್ವ ಯೋಚಿತ ರೀತಿಯಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದ್ದು 69ರನ್‌ಗಳಿಂದ ಪಂದ್ಯವನ್ನ ಜಯಿಸಿತು. ಹೀಗೆ ಎರಡು ಪಂದ್ಯಗಳ ಫಲಿತಾಂಶ ಹೊರಬಂದ ಮೇಲೆ ಪಾಯಿಂಟ್ಸ್ ಟೇಬಲ್‌ನಲ್ಲಿ ಅಪ್‌ಡೇಟ್ ಆಗಿದ್ದು ಈ ಕೆಳಗೆ ಕಾಣಬಹುದು.

T20 ವಿಶ್ವಕಪ್: ಮುಂದಿನ ಫಲಿತಾಂಶ ಹೀಗಾದ್ರೆ, ಜಿಂಬಾಬ್ವೆ ತಂಡ ಸೆಮಿಫೈನಲ್ ತಲುಪುವುದು ಗ್ಯಾರೆಂಟಿ

ಗ್ರೂಪ್ 2 ಪಾಯಿಂಟ್ಸ್ ಟೇಬಲ್ ಅಪ್‌ಡೇಟ್‌

ಗ್ರೂಪ್ 2 ಪಾಯಿಂಟ್ಸ್ ಟೇಬಲ್ ಅಪ್‌ಡೇಟ್‌

ಗ್ರೂಪ್ 2ನಲ್ಲಿ ಆಡಿರುವ ಎರಡು ಪಂದ್ಯಗಳನ್ನ ಜಯಿಸಿರುವ ಟೀಂ ಇಂಡಿಯಾ ಅಗ್ರಸ್ಥಾನದಲ್ಲಿದೆ. ಭಾರತ 4 ಪಾಯಿಂಟ್ಸ್ ಹಾಗೂ ನೆಟ್‌ರನ್‌ರೇಟ್‌ +1.425 ನಷ್ಟಿದೆ.

ದಕ್ಷಿಣ ಆಫ್ರಿಕಾ ತಂಡವು ಆಡಿರುವ ಎರಡು ಪಂದ್ಯಗಲ್ಲಿ ಒಂದು ಗೆಲವು ಮತ್ತು ಮತ್ತೊಂದು ಪಂದ್ಯವು(ಜಿಂಬಾಬ್ವೆ ವಿರುದ್ಧ) ಫಲಿತಾಂಶ ಹೊರಬರದ ಹಿನ್ನಲೆ ಒಟ್ಟು 3 ಪಾಯಿಂಟ್ ಕಲೆಹಾಕಿದ್ದು, ಬರೋಬ್ಬರಿ 5.200 ನೆಟ್‌ರನ್‌ರೇಟ್ ಹೊಂದುವ ಮೂಲಕ ಎರಡನೇ ಸ್ಥಾನವನ್ನು ಅಲಂಕರಿಸಿದೆ.

ಇನ್ನು ಪಾಕಿಸ್ತಾನ ತಂಡಕ್ಕೆ ಆಘಾತ ನೀಡಿರುವ ಜಿಂಬಾಬ್ವೆ ತಂಡವು ದಕ್ಷಿಣ ಆಫ್ರಿಕಾದಷ್ಟೇ 3 ಅಂಕಗಳನ್ನ ಸಂಪಾದಿಸಿದ್ದು, ನೆಟ್ ರನ್‌ರೇಟ್‌ +0.050 ಕಾರಣ ಮೂರನೇ ಸ್ಥಾನದಲ್ಲಿದೆ.

ಇನ್ನುಳಿದಂತೆ ಬಾಂಗ್ಲಾದೇಶ 2 ಪಂದ್ಯಗಳಲ್ಲಿ ತಲಾ ಒಂದು ಗೆಲವು ಮತ್ತು ಸೋಲಿನ ಮೂಲಕ 4ನೇ ಸ್ಥಾನ. 2ಕ್ಕೆ 2 ಪಂದ್ಯ ಸೋತಿರುವ ಪಾಕಿಸ್ತಾನ ತಂಡವು 5ನೇ ಸ್ಥಾನ ಅಲಂಕರಿಸಿದ್ದು, ಪಾಕ್‌ನಷ್ಟೇ ಫಲಿತಾಂಶ ಹೊಂದಿರುವ ನೆದರ್ಲ್ಯಾಂಡ್ಸ್‌ ತಂಡವು ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯಲ್ಲಿದೆ.

ಟಿ20 ವಿಶ್ವಕಪ್‌: ಕೊಹ್ಲಿ, ಸೂರ್ಯನನ್ನು RRR ಹೀರೋಗಳಿಗೆ ಹೋಲಿಸಿದ ವೀರೇಂದ್ರ ಸೆಹ್ವಾಗ್

ಗ್ರೂಪ್ 1 ಪಾಯಿಂಟ್ಸ್‌ ಟೇಬಲ್ ಅಪ್‌ಡೇಟ್‌

ಗ್ರೂಪ್ 1 ಪಾಯಿಂಟ್ಸ್‌ ಟೇಬಲ್ ಅಪ್‌ಡೇಟ್‌

ಸೂಪರ್ 12 ಗ್ರೂಪ್ 1ರಲ್ಲಿ ನ್ಯೂಜಿಲೆಂಡ್ ತಂಡವು ಅಗ್ರಸ್ಥಾನಿಯಾಗಿದೆ. ಆಡಿರುವ 2 ಪಂದ್ಯಗಳಲ್ಲಿ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 89ರನ್ ಗೆಲುವು, ಅಫ್ಘಾನಿಸ್ತಾನ ವಿರುದ್ಧದ ಎರಡನೇ ಪಂದ್ಯವು ಮಳೆಯಿಂದಾಗಿ ಕೊಚ್ಚಿ ಹೋದ ಪರಿಣಾಮ 1 ಅಂಕ ಸೇರಿಸಿ ಒಟ್ಟು 3 ಪಾಯಿಂಟ್ ಜೊತೆಗೆ ನೆಟ್‌ರನ್‌ರೇಟ್ ಉತ್ತಮವಿದ್ದು ಅಗ್ರಸ್ಥಾನದಲ್ಲಿದೆ.

ಶ್ರೀಲಂಕಾ ತಂಡವು ತಲಾ 1 ಗೆಲುವು ಮತ್ತು 1 ಸೋಲಿನೊಂದಿಗೆ 2 ಪಾಯಿಂಟ್ಸ್ ಸಂಪಾದಿಸಿದ್ದು ನೆಟ್ ರನ್‌ರೇಟ್ +0.450 ಇರುವ ಕಾರಣ ಎರಡನೇ ಸ್ಥಾನ ಅಲಂಕರಿಸಿದೆ.

ದ್ವೀಪರಾಷ್ಟ್ರದಷ್ಟೇ ಪಾಯಿಂಟ್ಸ್ ಪಡೆದಿರುವ ಇಂಗ್ಲೆಂಡ್ ತಂಡವು 2 ಪಾಯಿಂಟ್ಸ್ ಜೊತೆಗೆ ನೆಟ್‌ರನ್‌ರೇಟ್‌ (+0.239) ಕೊಂಚ ಹಿಂದಿರುವ ಕಾರಣ ಮೂರನೇ ಸ್ಥಾನದಲ್ಲಿದೆ.

ಇನ್ನುಳಿದಂತೆ ಐರ್ಲೆಂಡ್ 2 ಪಾಯಿಂಟ್ಸ್‌ ನೆಟ್‌ರನ್‌ರೇಟ್ -1.169, ಆಸ್ಟ್ರೇಲಿಯಾ 2 ಪಾಯಿಂಟ್ಸ್‌ ನೆಟ್‌ರನ್‌ರೇಟ್ -1.555, ಅಫ್ಘಾನಿಸ್ತಾನ ಕೇವಲ 1 ಪಾಯಿಂಟ್ಸ್‌ ಮೂಲಕ ಕೊನೆಯ ಮೂರು ಸ್ಥಾನ ಅಲಂಕರಿಸಿವೆ.

For Quick Alerts
ALLOW NOTIFICATIONS
For Daily Alerts
Story first published: Friday, October 28, 2022, 0:00 [IST]
Other articles published on Oct 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X