ಟಿ20 ವಿಶ್ವಕಪ್: ನಾಲ್ಕು ವರ್ಷಗಳ ಬಳಿಕ ಅಶ್ವಿನ್ ವಾಪಾಸ್: ಅಂತ್ಯವಾಯಿತಾ 'ಕುಲ್-ಚಾ' ಯುಗ

Ashwin ತಂಡಕ್ಕೆ ವಾಪಸ್ ಆಗಲು ಅಸಲಿ ಕಾರಣ ಏನು | Oneindia Kannada

ಮುಂಬೈ, ಸೆಪ್ಟೆಂಬರ್ 9: ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಘೋಷಿಸಲಾಗಿದೆ. ಇದರಲ್ಲಿ ಅಚ್ಚರಿಯ ಆಯ್ಕೆ ಎಂಬಂತೆ ಆರ್ ಅಶ್ವಿನ್ ಭಾರತೀಯ ತಂಡಕ್ಕೆ ಮರಳಿದ್ದಾರೆ. ಹೌದು ಸುಮಾರು ನಾಲ್ಕು ವರ್ಷಗಳ ಕಾಲ ಚುಟುಕು ಕ್ರಿಕೆಟ್‌ನಿಂದ ಹೊರಬಿದ್ದಿದ್ದ ಅಶ್ವಿನ್ ತಂಡಕ್ಕೆ ದೊಡ್ಡ ವೇದಿಕೆಯಲ್ಲಿ ಕಮ್‌ಬ್ಯಾಕ್ ಮಾಡಿದ್ದಾರೆ. ಈ ಆಯ್ಕೆಯೊಂದಿಗೆ ಭಾರತದ ಮತ್ತೊಂದು ಬೌಲಿಂಗ್ ಜೋಡಿಯ ಯುಗ ಅಂತ್ಯವಾಯುತಾ ಎಂಬ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮೂಡಿಸಿದೆ.

ಅನುಭವಿ ಆಟಗಾರ ಆರ್ ಅಶ್ವಿನ್ ಟೀಮ್ ಇಂಡಿಯಾ ಪರವಾಗಿ ಕೊನೆಯದಾಗಿ ಟಿ20 ಕ್ರಿಕೆಟ್ನಲ್ಲಿ ಆಡಿದ್ದು 2017ರಲ್ಲಿ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಬಳಿಕ ಅಶ್ವಿನ್ ಚುಟುಕು ಮಾದರಿಯಲ್ಲಿ ಕಾಣಿಸಿಕೊಂಡಿರಲಿಲ್ಲ. ಯುವ ಬೌಲರ್‌ಗಳಾದ ಕುಲ್‌ದೀಪ್ ಯಾದವ್ ಹಾಗೂ ಯುಜುವೇಂದ್ರ ಚಾಹಲ್ ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದಲ್ಲಿ ಮಿಂಚಲು ಆರಂಭಿಸಿದ್ದು ತಮಿಳು ನಾಡು ಮೂಲದ ಅನುಭವಿ ಬೌಲರ್ ಆರ್ ಅಶ್ವನ್ ತಂಡದಿಂದ ಹೊರಗುಳಿಯಲು ಕಾರಣವಾಯಿತು. ಕುಲ್-ಚಾ ಜೋಡಿಯೆಂದೇ ಪ್ರಸಿದ್ಧವಾದ ಈ ಸ್ಪಿನ್ ಜೋಡಿ ಭಾರತದ ಸೀಮಿತ ಓವರ್‌ಗಳ ತಂಡದ ಖಾಯಂ ಸದಸ್ಯರಾದರು.

ಟಿ20 ವಿಶ್ವಕಪ್‌: ಟೀಮ್ ಇಂಡಿಯಾದಲ್ಲಿಲ್ಲ ಈ ಪ್ರಮುಖ ಆಟಗಾರರಿಗೆ ಸ್ಥಾನಟಿ20 ವಿಶ್ವಕಪ್‌: ಟೀಮ್ ಇಂಡಿಯಾದಲ್ಲಿಲ್ಲ ಈ ಪ್ರಮುಖ ಆಟಗಾರರಿಗೆ ಸ್ಥಾನ

ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ನೇತೃತ್ವದ ಟೀಮ್ ಇಂಡಿಯಾ ಥಿಂಕ್ ಟ್ಯಾಂಕ್ ಐಸಿಸಿ ಚಾಂಪಿಯನ್ಸ್ ಟ್ರೋಫೀ 2017ರ ಬಳಿಕ ಈ ಲೆಗ್‌ಸ್ಪಿನ್ ಜೋಡಿಯನ್ನು ಮೊದಲ ಆಯ್ಕೆಯಾಗಿ ಪರಿಗಣಿಸಿತ್ತು. ಈ ಜೋಡಿ ಅದ್ಭುತವಾದ ಪ್ರದರ್ಶನ ನೀಡಲು ಆರಂಭಿಸಿದ್ದರಿಂದ ಈ ನಿರ್ಧಾರ ತಂಡದ ಪಾಲಿಗೆ ಅತ್ಯುತ್ತಮ ನಿರ್ಧಾರವಾಗಿತ್ತು. ಟಿ20 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಕುಲ್‌ದೀಪ್ ಯಾದವ್ ಹಾಗೂ ಚಾಹಲ್ ಜೋಡಿ ಮಿಂಚುತ್ತಾ ಸಾಗಿತ್ತು.

ಆದರೆ ಕಳೆದ ಒಂದೆರಡು ವರ್ಷಗಳಲ್ಲಿ ಈ ಕುಲ್‌-ಚಾ ಜೋಡಿಯ ಪ್ರದರ್ಶನ ಕೆಳಮುಖವಾಗಿ ಸಾಗಿತ್ತು. 2017ರಿಂದ 19ರ ಅವಧಿಯಲ್ಲಿ ಅಬ್ಬರಿಸಿದ್ದ ಈ ಜೋಡಿ ಆ ಬಳಿಕ ವಿಕೆಟ್ ಪಡೆಯಲು ವಿಫಲವಾಗುತ್ತಾ ಸಾಗಿದರು. ಜೊತೆಗೆ ರನ್‌ಗಳು ಕೂಡ ಸರಾಗವಾಗಿ ಬಿಟ್ಟುಕೊಡಲು ಆರಂಭಿಸಿದ್ದರು. ಅದರಲ್ಲೂ ಕುಲ್‌ದೀಪ್ ಯಾದವ್ ಕಳೆದ ಒಂದು ವರ್ಷದಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ಕೂಡ ವಿಫಲವಾದರು. ಐಪಿಎಲ್‌ನಲ್ಲಿ ಕೆಕೆಆರ್ ಪರವಾಗಿ ಕೂಡ ಆಡುವ ಬಳಗದಲ್ಲಿ ಯಾದವ್‌ಗೆ ಸ್ಥಾನ ದೊರೆಯುವುದು ಕಷ್ಟವಾಗಿದೆ.

ಈ ಸಂದರ್ಭದಲ್ಲಿಯೂ ಟಿ20 ಕ್ರಿಕೆಟ್‌ಗೆ ಆರ್ ಅಶ್ವಿನ್ ಮರಳಬೇಕು ಎಂಬ ಬಗ್ಗೆ ಚರ್ಚೆಗಳು ಆಗಲೇ ಇಲ್ಲ. ಯಾಕೆಂದರೆ ಈ ಸಂದರ್ಭದಲ್ಲಿ ಟಿ20 ಕ್ರಿಕೆಟ್‌ಲ್ಲಿ ಕೆಲ ಹೊಸ ಹೆಸರುಗಳು ಕೇಳು ಬರಲು ಆರಂಭಿಸಿತ್ತು. ಸ್ಪಿನ್ನರ್‌ಗಳಾಗಿ ರಾಹುಲ್ ಚಹರ್, ವರುಣ್ ಚಕ್ರವರ್ತಿ ಹಾಗೂ ಅಕ್ಷರ್ ಪಟೇಲ್ ಮಿಂಚುತ್ತಾ ಬಂದಿದ್ದಾರೆ.

ಟಿ20 ವಿಶ್ವಕಪ್‌ಗೆ ಬಲಿಷ್ಠ ಟೀಮ್ ಇಂಡಿಯಾ ತಂಡ ಪ್ರಕಟ: ಸಂಪೂರ್ಣ ತಂಡದ ವಿವರಟಿ20 ವಿಶ್ವಕಪ್‌ಗೆ ಬಲಿಷ್ಠ ಟೀಮ್ ಇಂಡಿಯಾ ತಂಡ ಪ್ರಕಟ: ಸಂಪೂರ್ಣ ತಂಡದ ವಿವರ

ಇವರಲ್ಲಿ ಮೂವರನ್ನು ಕೂಡ ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಮಂಡಳಿ ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಿದೆ. ಆದರೆ ಇದೇ ಸಂದರ್ಭದಲ್ಲಿ ಆಯ್ಕೆಗಾರರು ಆರ್ ಅಶ್ವಿನ್‌ ಅವರ ಅನುಭವ ತಂಡಕ್ಕಿರುವ ಅಗತ್ಯವನ್ನು ಕಂಡುಕೊಂಡಿದ್ದಾರೆ. ಈ ಮೂಲಕ ಬೌಲಿಂಗ್ ವಿಭಾಗದಲ್ಲಿ ಮತ್ತಷ್ಟು ಶಕ್ತಿ ನೀಡಲು ಬಯಸಿದ್ದಾರೆ.

ಈ ಮಧ್ಯೆ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಆರ್ ಅಶ್ವಿನ್‌ಗೆ ಅವಕಾಶ ನೀಡದೇ ಇರುವ ವಿಚಾರವಾಗಿ ಆರ್ ಅಶ್ವಿನ್ ಹಾಗೂ ನಾಯಕ ವಿರಾಟ್ ಕೊಹ್ಲಿ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬಂತಾ ಮಾತುಗಳು ಚರ್ಚೆಯಾಗುತ್ತಿದೆ. ಈಗ ಟಿ20 ವಿಶ್ವಕಪ್‌ಗೆ ಆರ್ ಅಶ್ವಿನ್ ಆಯ್ಕೆ ಈ ಎಲ್ಲಾ ಅನುಮಾನಗಳಿಗೆ ಹಾಗೂ ಗಾಳಿಸುದ್ದಿಗಳಿಗೆ ಅಂತ್ಯ ಹಾಡುವ ಸಾಧ್ಯತೆಯಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, September 9, 2021, 8:34 [IST]
Other articles published on Sep 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X