ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ಗೆ ಮುನ್ನ ಸತತ 5 ಟಿ20 ಸರಣಿ ಸೋಲು: ಆಸ್ಟ್ರೇಲಿಯಾದ ವಿಶ್ವಕಪ್ ಗೆಲುವಿನ ರೋಚಕ ಹಾದಿ

T20 world cup: Australia won the t20 world cup after 5 consecutive t20 series lost
T20 ವಿಶ್ವಕಪ್ ಕಿರೀಟ ಆಸ್ಟ್ರೇಲಿಯಾ ಮುಡಿಗೆ: ಕಿವೀಸ್ ಗೆ ನಿರಾಸೆ | Oneindia Kannada

ಟಿ20 ವಿಶ್ವಕಪ್‌ಗೆ ಮುನ್ನ ಆಸ್ಟ್ರೇಲಿಯಾ ತಂಡ ಟಿ20 ಕ್ರಿಕೆಟ್ ಮಾದರಿಯಲ್ಲಿ ನೀಡಿದ ಪ್ರದರ್ಶನವನ್ನು ನೋಡಿದರೆ ಯಾವ ಕ್ರಿಕೆಟ್ ಅಭಿಮಾನಿ ಕೂಡ ಆಸ್ಟ್ರೇಲಿಯಾ ಈ ಬಾರಿ ಟಿ20 ವಿಶ್ವಕಪ್ ಗೆಲ್ಲಬಹುದು ಎಂಬ ನಿರೀಕ್ಷೆಯಿಟ್ಟುಕೊಂಡಿರಲು ಸಾಧ್ತಯವೇ ಇಲ್ಲ. ಅದಕ್ಕೆ ಕಾರಣ ಚುಟುಕು ಕ್ರಿಕೆಟ್ ಮಾದರಿಯಲ್ಲಿ ಆಸಿಸ್ ಪಡೆಯ ಕಳಪೆ ಪ್ರದರ್ಶನ. ಕ್ರಿಕೆಟ್ ಜಗತ್ತಿನಲ್ಲಿ ಇತ್ತೀಚೆಗೆ ನಿರಂತರವಾಗಿ ಕಳೆಗುಂದಿದಂತೆ ಭಾಸವಾಗುತ್ತಿದ್ದ ಆಸ್ಟ್ರೇಲಿಯಾ ತಂಡ ಚುಟುಕು ಮಾದರಿಯಲ್ಲಂತೂ ಅತ್ಯಂತ ದಯನೀಯ ಪ್ರದರ್ಶನ ನೀಡಿಕೊಂಡು ಬಂದಿತ್ತು. ಸೋಲಿನ ಮೇಲೆ ಸೋಲು ಕಾಣುತ್ತಾ ಬಂದ ಆಸ್ಟ್ರೇಲಿಯಾ ವಿಶ್ವಕಪ್‌ನಲ್ಲಿಯೂ ಹೇಳಿಕೊಳ್ಳುವಂತಾ ಪ್ರದರ್ಶನ ನೀಡುವ ನಿರೀಕ್ಷೆ ಮೂಡಿಸಿರಲಿಲ್ಲ.

ಆದರೆ ಐಸಿಸಿ ಟ್ರೋಫಿಯಲ್ಲಿ ಯಾವತ್ತಿಗೂ ಪಟ್ಟು ಸಡಿಲಿಸಲು ಬಯಸದ ಆಸ್ಟ್ರೇಲಿಯಾ ಈ ಬಾರಿಯ ವಿಶ್ವಕಪ್‌ನಲ್ಲಿಯೂ ಅಂತಾದ್ದೇ ಪ್ರದರ್ಶನ ನೀಡಿತು. ತಂಡದ ಸಾಂಘಿಕ ಪ್ರದರ್ಶನ ಟೂರ್ನಿಯನ್ನು ಗೆದ್ದು ಬೀಗುವಂತೆ ಮಾಡಿದೆ. ಕ್ರಿಕೆಟ್ ಅಭಿಮಾನಿಗಳು ಅಕ್ಷರಶಃ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಆಡಿ ಚಾಂಪಿಯನ್ ತಂಡವಾಗಿ ಮೆರೆದಾಡಿದೆ.

ಟಿ20 ವಿಶ್ವಕಪ್‌ಗೆ ಆಟಗಾರರ ಆಯ್ಕೆ ನಡೆದಾಗ ಕೊಹ್ಲಿಯನ್ನು ಕೇಳಲೇ ಇಲ್ಲ ಎಂದ ರವಿಶಾಸ್ತ್ರಿ!ಟಿ20 ವಿಶ್ವಕಪ್‌ಗೆ ಆಟಗಾರರ ಆಯ್ಕೆ ನಡೆದಾಗ ಕೊಹ್ಲಿಯನ್ನು ಕೇಳಲೇ ಇಲ್ಲ ಎಂದ ರವಿಶಾಸ್ತ್ರಿ!

ಸತತ ಐದು ಪಂದ್ಯಗಳಲ್ಲಿ ಸೋಲು

ಸತತ ಐದು ಪಂದ್ಯಗಳಲ್ಲಿ ಸೋಲು

ಟಿ20 ವಿಶ್ವಕಪ್‌ಗೆ ಮುನ್ನ ಆಸ್ಟ್ರೇಲಿಯಾ ತಂಡ ಟಿ20 ಮಾದರಿಯಲ್ಲಿ ಅದೆಂತಾ ಕಳಪೆ ಪ್ರದರ್ಶನ ನೀಡಿತ್ತು ಎಂಬುದಕ್ಕೆ ಆ ತಂಡದ ಫಲಿತಾಂಶವೇ ಸಾಕ್ಷಿ. ಒಂದಲ್ಲ ಎರಡಲ್ಲ ಬರೊಬ್ಬರಿ ಐದು ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ಸೋಲು ಕಂಡಿತ್ತು. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಸೋಲಿನೊಂದಿಗೆ ಆರಂಭವಾದ ಈ ಸೋಲಿನ ಅಭಿಯಾನ ಟಿ20 ವಿಶ್ವಕಪ್‌ಗೂ ಹಿಂದೆ ನಡೆದ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯವರೆಗೂ ಮುಂದುವರಿದಿತ್ತು.

ಕೊನೆಯ ಎರಡು ಸರಣಿಯಲ್ಲಿ ಅನುಭವಿಸಿದ್ದು ಮಹಾ ಸೋಲು

ಕೊನೆಯ ಎರಡು ಸರಣಿಯಲ್ಲಿ ಅನುಭವಿಸಿದ್ದು ಮಹಾ ಸೋಲು

ಆಸ್ಟ್ರೇಲಿಯಾ ತಂಡದ ಟಿ20 ಸರಣಿ ಸೋಲು 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯೊಂದಿಗೆ ಆರಂಬವಾಗಿತ್ತು. ಆ ಸರಣಿಯಲ್ಲಿ ಆಸ್ಟ್ರೇಲಿಯಾ 1-2 ಅಂತರದಿಂದ ಇಂಗ್ಲೆಂಡ್‌ಗೆ ಶರಣಾಗಿತ್ತು, ನಂತರ ಭಾರತದ ವಿರುದ್ಧದ ಟಿ20 ಸರಣಿಯನ್ನು ಕೂಡ 1-2 ಅಂತರದಿಂದ ಸೋಲು ಕಂಡಿತ್ತು. ಬಳಿಕ ನ್ಯೂಜಿಲೆಂಡ್ ವಿರುದ್ಧ ನಡೆದ ಟಿ20 ಸರಣಿಯಲ್ಲಿ 3-2 ಅಂತರದಿಂದ ಸೋಲು ಕಂಡಿತ್ತು. ಅದರೆ ಈ ಮೂರು ಸರಣಿ ಸೋಲಿನ ನಂತರ ಆಸ್ಟ್ರೇಲಿಯಾ ತಂಡ ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ವಿರುದ್ಧ ಅನುಭವಿಸಿದ ಸೋಲು ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಮತ್ತಷ್ಟು ಆಘಾತ ನೀಡಿತ್ತು. ಪ್ರಮುಖ ಆಟಗಾರರ ಅಲಭ್ಯತೆಯಲ್ಲಿ ನಡೆದ ಈ ಸರಣಿಯಲ್ಲಿ ಆಸ್ಟ್ರೇಲಿಯಾ 1-4ರ ಭಾರೀ ಅಂತರದಿಂದ ಸೋಲು ಅನುಭವಿಸಿತು. ಈ ಬೃಹತ್ ಸರಣಿ ಸೋಲಿನ ಕಹಿ ಅನುಭವದೊಂದಿಗೆ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ವೇದಿಕೆಗೆ ಕಾಲಿಟ್ಟಿತ್ತು. ಆದರೆ ನಂತರ ನಡೆದಿದ್ದು ಈಗ ಇತಿಹಾಸ.

ಸೆಮಿಫೈನಲ್‌ಗೆ ಪ್ರವೇಶಿಸಲು ಅದೃಷ್ಟದ ಸಾಥ್

ಸೆಮಿಫೈನಲ್‌ಗೆ ಪ್ರವೇಶಿಸಲು ಅದೃಷ್ಟದ ಸಾಥ್

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಸೆನಿಫೈನಲ್ ಪ್ರವೇಶ ಸುಲಭವಾಗಿರಲಿಲ್ಲ. ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಶ್ರೀಲಂಕಾ, ಬಾಂಗ್ಲಾದೇಶಗಳಂತಾ ಬಲಿಷ್ಠ ತಂಡಗಳೇ ಇದ್ದ ಗುಂಪಿನಲ್ಲಿತ್ತು ಆಸ್ಟ್ರೇಲಿಯಾ. ಆದರೆ ಸೆಮಿಫೈನಲ್ ಪ್ರವೇಶಕ್ಕೆ ಆಸಿಸ್ ತಂಡಕ್ಕೆ ದಕ್ಷಿಣ ಆಫ್ರಿಕಾ ತಂಡದಿಂದ ಭಾರೀ ಪೈಪೋಟಿ ಏರ್ಪಟ್ಟಿತು. ಸೂಪರ್ 13 ಹಂತದ ಐದು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ನಾಲ್ಕರಲ್ಲಿ ಗೆಲುವು ಸಾಧಿಸಿತ್ತು. ಆದರೆ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾ ತಂಡಗಳಿಸಿದ್ದ ನೆಟ್‌ರನ್‌ರೇಟ್ ಹಿಂದಿಕ್ಕುವಲ್ಲಿ ವಿಫಲವಾಗಿತ್ತು. ಹೀಗಾಗಿ ಸೆಮಿಫೈನಲ್ ಟಿಕೆಟ್ ದಕ್ಷಿಣ ಆಪ್ರಿಕಾ ತಂಡದ ಕೈ ತಪ್ಪಿ ಆಸಿಸ್ ಪಾಲಾಯಿತು. ಇದನ್ನು ಸಮರ್ಥವಾಗಿ ಬಳಸಿಕೊಂಡ ಆಸ್ಟ್ರೇಲಿಯಾ ನಂತರ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡಕ್ಕೆ ಮನೆ ಹಾದಿಯನ್ನು ತೋರಿಸಿದರೆ ನಂತರ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದು ಬೀಗಿದೆ. ಈ ಮೂಲಕ ಮೊಟ್ಟ ಮೊದಲ ಬಾರಿಗೆ ಆಸ್ಟ್ರೇಲಿಯಾ ಟಿ20 ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಿದೆ.

ಟಿ20 ಇತಿಹಾಸದಲ್ಲಿ ಆಸಿಸ್ ತಂಡದ್ದು ಸಾಧಾರಣ ಸಾಧನೆ

ಟಿ20 ಇತಿಹಾಸದಲ್ಲಿ ಆಸಿಸ್ ತಂಡದ್ದು ಸಾಧಾರಣ ಸಾಧನೆ

ಸರಿ ಸುಮಾರು ಎರಡು ದಶಕಗಳ ಟಿ20 ಕ್ರಿಕೆಟ್‌ನ ಇತಿಹಾಸದಲ್ಲಿ ಆಸ್ಟ್ರೇಲಿಯಾ ತಂಡ ಉಳಿದ ಮಾದರಿಯಲ್ಲಿ ಸಾಧಿಸಿದ ಯಶಸ್ಸಿಗೆ ಹೋಲಿಸಿದರೆ ಚುಟುಕು ಮಾದರಿಯಲ್ಲಿ ಕಳಪೆ ಪ್ರದರ್ಶನವನ್ನೇ ನೀಡಿಕೊಂಡು ಬಂದಿತ್ತು. ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನ ಉತ್ತುಂಗದಲ್ಲಿದ್ದಾಗಲೂ ಟಿ20 ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ದೊಡ್ಡ ಸಾಧನೆ ಮಾಡುವಲ್ಲಿ ವಿಫಲವಾಗಿತ್ತು. 2010ರ ಟಿ20 ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆಗಿದ್ದು ಆಸ್ಟ್ರೇಲಿಯಾ ತಂಡದ ಈ ಹಿಂದಿನ ದೊಡ್ಡ ಸಾಧನೆಯಾಗಿತ್ತು. ಆದರೆ 2021ರ ಆವೃತ್ತಿಯಲ್ಲಿ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಚುಟುಕು ಕ್ರಿಕೆಟ್‌ನಲ್ಲಿ ದೊಡ್ಡ ಮೈಲಿಗಲ್ಲೊಂದನ್ನು ನೆಟ್ಟಿದೆ ಆಸ್ಟ್ರೇಲಿಯಾ,

Story first published: Monday, November 15, 2021, 0:45 [IST]
Other articles published on Nov 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X