2ನೇ ಟಿ20: ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 6 ವಿಕೆಟ್ ಗಳ ಜಯ

Posted By:
T20i tri-series : India beat Bangladesh by 6 wickets Match report

ಕೊಲಂಬೋ, ಮಾರ್ಚ್ 08: ನಿದಹಾಸ್ ಮೂರು ರಾಷ್ಟ್ರಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 6 ವಿಕೆಟ್ ಗಳ ಜಯ ದಾಖಲಿಸಿದೆ.

ಗೆಲ್ಲಲು ಬೇಕಾದ 139ರನ್ ಚೇಸ್ ಮಾಡಿದ ಭಾರತಕ್ಕೆ ಆರಂಭಿಕ ಆಟಗಾರ ಶಿಖರ್ ಧವನ್ ಅವರ ಅರ್ಧ ಶತಕ ನೆರವಿಗೆ ಬಂದಿತು. 18.4 ಓವರ್ ಗಳಲ್ಲಿ 140/4 ಸ್ಕೋರ್ ಮಾಡಿ ಸುಲಭ ಜಯ ದಾಖಲಿಸಿತು.

ಸ್ಕೋರ್ ಕಾರ್ಡ್

ಭಾರತದ ರನ್ ಚೇಸ್ : ರೋಹಿತ್ ಶರ್ಮ 17 ರನ್ ಗಳಿಸಿ ಪೆವಿಲಿಯನ್ ಸೇರಿದರೆ, ಶಿಖರ್ ಧವನ್ 43 ಎಸೆತಗಳಲ್ಲಿ 55ರನ್ (5 ಬೌಂಡರಿ, 2ಸಿಕ್ಸರ್) ಗಳಿಸಿ ಇನ್ನಿಂಗ್ಸ್ ಕಟ್ಟಿದರು. ಸುರೇಶ್ ರೈನಾ 27 ಎಸೆತಗಳಲ್ಲಿ 28ರನ್, ಮನೀಶ್ ಪಾಂಡೆ 19ಎಸೆತಗಳಲ್ಲಿ 27ರನ್ ಗಳಿಸಿ ಗೆಲುವಿನ ದಡ ಮುಟ್ಟಿಸಿದರು.

ಮುಂಬಡ್ತಿ ಪಡೆದು ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ರಿಷಬ್ ಪಂತ್ 7 ರನ್ ಮಾತ್ರ ಗಳಿಸಿ ಔಟಾಗಿ ನಿರಾಶೆ ಮೂಡಿಸಿದರು.

ನಿದಹಾಸ್ ಟಿ20 ಸರಣಿ ವೇಳಾಪಟ್ಟಿ

ಬಾಂಗ್ಲಾ ಇನ್ನಿಂಗ್ಸ್ : ತಮಿಮ್ ಇಕ್ಬಾಲ್ 15, ಸೌಮ್ಯ ಸರ್ಕಾರ್ 14, ಉತ್ತಮ ಆರಂಭ ಪಡೆದರೂ ವಿಕೆಟ್ ಚೆಲ್ಲಿದರು. ಲಿಟೋನ್ ದಾಸ್ 34 , ಸಬ್ಬೀರ್ ರಹ್ಮಾನ್ 30ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಜಯದೇವ್ ಉನದ್ಕತ್ ವೈಯಕ್ತಿಕ ಅತ್ಯುತ್ತಮ ಪ್ರದರ್ಶನ ನೀಡಿ 38ರನ್ನಿತ್ತು 3 ವಿಕೆಟ್ ಗಳಿಸಿದರು. ವಿಜಯ್ ಶಂಕರ್ 32ರನ್ನಿತ್ತು2 ಹಾಗೂ ಯಜುವೇಂದ್ರ ಚಾಹಲ್ 19ರನ್ನಿತ್ತು 1 ವಿಕೆಟ್ ಗಳಿಸಿದರು.

Story first published: Thursday, March 8, 2018, 22:58 [IST]
Other articles published on Mar 8, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ