ಒಂದು ಬಾರಿ ಸೋತರೆ ಪೆನ್ ಹಾಗೂ ಪಿಸ್ತೂಲ್‌ಗಳು ಹೊರಬರುತ್ತವೆ: ಟೀಕೆಗಳ ಬಗ್ಗೆ ರವಿ ಶಾಸ್ತ್ರಿ ಪ್ರತಿಕ್ರಿಯೆ

ನಾಲ್ಕು ವರ್ಷಗಳ ಕಾಲ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿದ್ದ ರವಿ ಶಾಸ್ತ್ರಿ ಅವರ ಅವಧಿ ಅಂತ್ಯವಾಗಿದೆ. ಟಿ20 ವಿಶ್ವಕಪ್ ಅಂತ್ಯವಾಗುತ್ತಿದ್ದಂತೆಯೇ ರವಿ ಶಾಸ್ತ್ರಿ ಅವರ ಕೋಚ್ ಹಿದ್ದೆಯ ಅವಧಿ ಅಂತ್ಯವಾಗಿದ್ದು ಈಗ ಆ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಕೋಚ್ ಆಗಿದ್ದ ಅವಧಿಯಲ್ಲಿ ಸ್ವತಃ ರವಿ ಶಾಸ್ತ್ರಿ ಹಾಗೂ ತಂಡ ಎದುರಿಸಿದ ಕೆಲ ಟೀಕೆಗಳ ಬಗ್ಗೆ ಮಾತನಾಡಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ಟೀಮ್ ಇಂಡಿಯಾ ಅತಿ ಹೆಚ್ಚು ಗೆಲುವು ಸಾಧಿಸಿದ್ದರೂ ಕಟು ಟೀಕೆಗಳನ್ನು ಎದುರಿಸಿದ ಬಗ್ಗೆ ಮಾತನಾಡಿದ್ದಾರೆ.

2017ರಲ್ಲಿ ರವಿ ಶಾಸ್ತ್ರಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಆಯ್ಕೆಯಾದರು. 2019ರ ವಿಶ್ವಕಪ್ ಬಳಿಕ ಅವರ ಕಾರ್ಯಾವಧಿ ಮತ್ತೆರಡು ವರ್ಷಗಳಿಗೆ ಮುಂದುವರಿಸಲಾಯಿತು. ಹೀಗಾಗಿ ಈ ವರ್ಷದ ಟಿ20 ವಿಶ್ವಕಪ್ ವರೆಗೆ ರವಿ ಶಾಸ್ತ್ರಿ ಕೋಚ್ ಆಗಿ ಮುಂದಿವರಿದಿದ್ದಾರೆ. ರವಿ ಶಾಸ್ತ್ರಿ ಅವರಿಗೆ ಬೌಲಿಂಗ್ ಕೋಚ್ ಆಗಿ ಭರತ್ ಅರುಣ್, ಫಿಲ್ಡಿಂಗ್ ಕೋಚ್ ಆಗಿ ಆರ್ ಶ್ರೀಧರ್ ನೆರವಾಗಿದ್ದರು. ಈ ಇಬ್ಬರು ಕೂಡ ತಮ್ಮ ಹುದ್ದೆಯಲ್ಲಿ ಮುಂದುವರಿಯದಿರಲು ನಿರ್ಧರಿಸಿದ್ದು ನೂತನ ಬೌಲಿಂಗ್ ಕೋಚ್ ಹಾಗೂ ಫಿಲ್ಡಿಂಗ್ ಕೋಚ್ ಇನ್ನಷ್ಟೇ ಟೀಮ್ ಇಂಡಿಯಾಗೆ ನೇಮಕವಾಗಬೇಕಿದೆ.

2 ದಿನಗಳ ಹಿಂದಷ್ಟೇ ICUನಲ್ಲಿದ್ದ ರಿಜ್ವಾನ್ ಆಸ್ಟ್ರೇಲಿಯಾ ವಿರುದ್ಧ ಅಬ್ಬರ: ನಿಜವಾದ ಹೀರೋ ಎಂದ ಅಕ್ತರ್2 ದಿನಗಳ ಹಿಂದಷ್ಟೇ ICUನಲ್ಲಿದ್ದ ರಿಜ್ವಾನ್ ಆಸ್ಟ್ರೇಲಿಯಾ ವಿರುದ್ಧ ಅಬ್ಬರ: ನಿಜವಾದ ಹೀರೋ ಎಂದ ಅಕ್ತರ್

ಈಗ ನನಗೆ ಸಮಯ ಬಂದಿದೆ: ಕೋಚ್ ಆಗಿದ್ದ ಅವಧಿಯಲ್ಲಿ ಟೀಕೆಗೆ ಒಳಗಾಗಿದ್ದ ಬಗ್ಗೆ ಮಾತನಾಡಿದ ರವಿ ಶಾಸ್ತ್ರಿ ಏಳು ವರ್ಷಗಳ ಅವಧಿಯಲ್ಲಿ ಸಾಕಷ್ಟು ಜನರು ನನ್ನ ಬಗ್ಗೆ ನಿರ್ಣಯಗಳನ್ನು ನೀಡಿದ್ದಾರೆ. ಈಗ ತಾನು ಆ ಜಡ್ಜ್‌ನ ಸ್ಥಾನದಲ್ಲಿ ಕುಳಿತು ಅವರನ್ನು ಜಡ್ಜ್ ಮಾಡುತ್ತೇನೆ ಎಂದಿದ್ದಾರೆ ರವಿ ಶಾಸ್ತ್ರಿ. "ನಾನು ನನ್ನ ಜೀವನದ 7 ವರ್ಗಳ ಅವಧಿಯ ಸಾರ್ವಜನಿಕ ಜೀವನದಲ್ಲಿ ಸಾಕಷ್ಟು ಬಾರಿ ಮಿಮರ್ಶಿಸಲ್ಪಟ್ಟಿದ್ದೇನೆ. ಈಗ ನನಗೆ ಸಮಯ ಬಂದಿದೆ. ಈಗ ನಾನು ಆ ಜಡ್ಜ್‌ಗಳ ಸೀಟ್‌ನಲ್ಲಿ ಕುಳಿತುಕೊಂಡು ಅವರ ವಿಮರ್ಶೆ ಮಾಡುತ್ತೇನೆ" ಎಂದು ರವಿ ಶಾಸ್ತ್ರಿ ಎದಿರೇಟು ನೀಡಿದ್ದಾರೆ.

ಟೀಕೆಗಳನ್ನು ಎದುರಿಸಿ ಮುನ್ನಡೆಯಬೇಕು: ಇನ್ನು ಭಾರತದಂತಾ ದೇಶದಲ್ಲಿ ಕ್ರಿಕೆಟ್‌ಅನ್ನು ಅತಿ ಹೆಚ್ಚು ಇಷ್ಟ ಪಡುವ ಕಾರಣದಿಂದಾಗಿ ಸೋಲಕು ಕಂಡ ಸಂದರ್ಭದಲ್ಲಿ ಟೀಕೆಗಳು ಸಾಮಾನ್ಯ ಎಂದಿದ್ದಾರೆ ರವಿ ಶಾಸ್ತ್ರಿ. ಆದರೆ ಕೆಲ ಸಂದರ್ಭಗಳಲ್ಲಿ ಈ ಟೀಕೆಗಳು ಅತ್ಯಂತ ಕಟುವಾಗಿರುತ್ತದೆ. ಇದು ತಂಡಕ್ಕೆ ತುಂಬಾ ಹಿನ್ನಡೆಯುಂಟು ಮಾಡುತ್ತದೆ. ಆದರೆ ಅನಿವಾರ್ಯವಾಗಿ ಅವುಗಳನ್ನು ಬಿಟ್ಟು ಮುಂದುವರಿಯಬೇಕಾಗುತ್ತದೆ ಎಂದಿದ್ದಾರೆ ರವಿ ಶಾಸ್ತ್ರಿ.

ವಿಶ್ವಕಪ್ ಫೈನಲ್‌ಗೂ ಮುನ್ನ ನ್ಯೂಜಿಲೆಂಡ್‌ಗೆ ಆಘಾತ: ಪ್ರಮುಖ ಆಟಗಾರ ತಂಡದಿಂದ ಔಟ್ವಿಶ್ವಕಪ್ ಫೈನಲ್‌ಗೂ ಮುನ್ನ ನ್ಯೂಜಿಲೆಂಡ್‌ಗೆ ಆಘಾತ: ಪ್ರಮುಖ ಆಟಗಾರ ತಂಡದಿಂದ ಔಟ್

"ಭಾರತದಲ್ಲಿ ಕ್ರಿಕೆಟ್ ಎಂಬುದು ಒಂದು ಧರ್ಮ. ನೀವು ಐದು ಪಂದ್ಯಗಳನ್ನು ಗೆಲ್ಲುತ್ತೀರಿ. ಆದರೆ ಯಾವಾಗ ನೀವು ಒಂದು ಸೋಲು ಕಾಣುತ್ತೀರೋ ಆಗ ಪಿಸ್ತೂಲ್ ಹಾಗೂ ಪೆನ್‌ಗಳು ಹೊರಬರುತ್ತವೆ. ಕೆಲವೊಮ್ಮೆ ಅದು ತುಂಬಾ ಭೀಕರವಾಗಿರುತ್ತದೆ. ಅವುಗಳನ್ನು ನೀವು ಸ್ವೀಕರಿಸಲೇಬೇಕು. ನಾವು ಸಾಕಷ್ಟು ಗೆಲುವು ಸಾಧಿಸಿರುತ್ತೇಬೆ ಆದರೆ ಜನರು ನಾವು ಸೋಲುವುದನ್ನು ಇಷ್ಟಪಡುವುದಿಲ್ಲ. ಕೋಚ್ ಆದವನ ಕರ್ತವ್ಯ ನಿಗ್ಗಿ ಬರುವ ಬುಲೆಟ್‌ಗಳನ್ನು ಸ್ವೀಕರಿಸುವುದು. ಈ ಎಲ್ಲಾ ಸವಾಲುಗಳನ್ನು ನೀವು ಮೆಟ್ಟಿ ನಿಲ್ಲಬೇಕು. ಈ ಟೀಕೆಗಳ ಕಾರಣಕ್ಕೆ ನೀವು ಕುಸಿದು ಹೋಗಬಾರದು. ಈ ಎಲ್ಲದರ ಮಧ್ಯೆ ತಂಡ ಅತ್ಯುತ್ತಮ ಪ್ರದರ್ಶನ ನೀಡುವುದನ್ನು ಖಚಿತಪಡಿಸಬೇಕು. ಟೀಕೆಗಳನ್ನು ನಿಮ್ಮ ಜೊತೆಗೆ ಸ್ವೀಕರಿಸಿ ಮುಂದಿವರಿಯಬೇಕು" ಎಂದಿದ್ದಾರೆ ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ.

ಟೀಮ್ ಇಂಡಿಯಾ ತನ್ನ ಮುಂದಿನ ಸರಣಿಯನ್ನು ನ್ಯೂಜಿಲೆಂಡ್ ವಿರುದ್ಧ ಆಡಲಿದ್ದು ನವೆಂಬರ್ 17ರಿಂದ ಟಿ20 ಪಂದ್ಯದೊಂದಿಗೆ ಚಾಲನೆ ದೊರೆಯಲಿದೆ. ಮೂರು ಪಂದ್ಯಗಳ ಟಿ20 ಸರಣಿ ಹಾಗೂ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿಯೊಂದಿಗೆ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿ ತಮ್ಮ ಹುದ್ದೆಯನ್ನು ವಹಿಸಿಕೊಳ್ಳಲಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, November 12, 2021, 17:42 [IST]
Other articles published on Nov 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X