ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಾಹುಲ್ ದ್ರಾವಿಡ್ ಹುಟ್ಟುಹಬ್ಬ ಆಚರಿಸಿದ ಟೀಂ ಇಂಡಿಯಾ: ಶುಭಾಶಯಗಳ ಮಹಾಪೂರ

Team India Players Celebrate Head Coach Rahul Dravid Birthday

ಭಾರತ ತಂಡದ ಮುಖ್ಯ ಕೋಚ್, ಕನ್ನಡಿಗ ರಾಹುಲ್ ದ್ರಾವಿಡ್ ಅವರಿಗೆ 50ನೇ ಜನ್ಮದಿನದ ಸಂಭ್ರಮ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯಕ್ಕಾಗಿ ಕೋಲ್ಕತ್ತಾಗೆ ತಲುಪಿರುವ ಟೀಂ ಇಂಡಿಯಾ ಆಟಗಾರರು, ಕೋಚ್ ರಾಹುಲ್ ದ್ರಾವಿಡ್ ಜನ್ಮದಿನವನ್ನು ಆಚರಿಸಿದೆ.

ಭಾರತದ ದಿಗ್ಗಜ ಬ್ಯಾಟರ್, ದಿ ಗ್ರೇಟ್ ವಾಲ್ ಎಂದೇ ಹೆಸರಾದ ದ್ರಾವಿಡ್‌ಗೆ ಮಾಜಿ ಕ್ರಿಕೆಟಿಗರು, ಹಾಲಿ ಕ್ರಿಕೆಟಿಗರು ಸೇರಿದಂತೆ ಲಕ್ಷಾಂತರ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಟೀಂ ಇಂಡಿಯಾ ಆಟಗಾರರು ರಾಹುಲ್‌ ದ್ರಾವಿಡ್‌ರ ಜನ್ಮದಿನವನ್ನು ಆಚರಿಸಿದ್ದು, ಶುಭಾಶಯಗಳನ್ನು ಕೋರಿದ್ದಾರೆ.

IND vs SL: ದಸುನ್ ಶನಕ ರನೌಟ್ ಮನವಿ ಹಿಂಪಡೆದ ರೋಹಿತ್ ಶರ್ಮಾ ಬಗ್ಗೆ ಜಯಸೂರ್ಯ ಮೆಚ್ಚುಗೆIND vs SL: ದಸುನ್ ಶನಕ ರನೌಟ್ ಮನವಿ ಹಿಂಪಡೆದ ರೋಹಿತ್ ಶರ್ಮಾ ಬಗ್ಗೆ ಜಯಸೂರ್ಯ ಮೆಚ್ಚುಗೆ

164 ಟೆಸ್ಟ್, 344 ಏಕದಿನ ಮತ್ತು ಒಂದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ದ್ರಾವಿಡ್ ತನ್ನದೇ ಛಾಪು ಮೂಡಿಸಿರುವ ಆಟಗಾರ. ಕ್ರಿಕೆಟ್‌ ಪುಸ್ತಕದ ಸಾಂಪ್ರದಾಯಿಕ ಹೊಡೆತಗಳನ್ನು ಆಡುವುದರಲ್ಲಿ ದ್ರಾವಿಡ್‌ಗೆ ಅವರೇ ಸಾಟಿ.

340 ಏಕದಿನ ಪಂದ್ಯಗಳಿಂದ 39.15 ಸರಾಸರಿಯಲ್ಲಿ 10,768 ರನ್‌ಗಳನ್ನು ಗಳಿಸಿದ್ದಾರೆ. ಭಾರತ ತಂಡದ ಆಟಗಾರರಲ್ಲಿ ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಸೌರವ್ ಗಂಗೂಲಿ (11,221), ವಿರಾಟ್ ಕೊಹ್ಲಿ (12,169) ಮತ್ತು ಸಚಿನ್ ತೆಂಡೂಲ್ಕರ್ (18,426) ಮೊದಲ ಮೂರು ಸ್ಥಾನದಲ್ಲಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅಪ್ರತಿಮ ಸಾಧನೆ

164 ಟೆಸ್ಟ್ ಪಂದ್ಯಗಳಲ್ಲಿ 52.63 ಸರಾಸರಿಯೊಂದಿಗೆ 13,265 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 200 ಟೆಸ್ಟ್ ಪಂದ್ಯಗಳಿಂದ 15,921 ರನ್ ಗಳಿಸಿರುವ ಸಚಿನ್ ತೆಂಡೂಲ್ಕರ್ ಮೊದಲನೇ ಸ್ಥಾನದಲ್ಲಿದ್ದಾರೆ. ದ್ರಾವಿಡ್ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ 336 ಕ್ಯಾಚ್‌ಗಳನ್ನು ಹಿಡಿದಿದ್ದಾರೆ. ಇದರಲ್ಲಿ 210 ಕ್ಯಾಚ್‌ಗಳು ಟೆಸ್ಟ್ ಮಾದರಿಯಲ್ಲಿ ಬಂದಿವೆ.

ಎಲ್ಲಾ ಮಾದರಿಯಲ್ಲಿ ರಾಹುಲ್ ದ್ರಾವಿಡ್ ಒಟ್ಟು 509 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, ಒಟ್ಟು 24,208 ರನ್ ಗಳಿಸಿದ್ದಾರೆ. ಒಟ್ಟಾರೆ 48 ಶತಕಗಳನ್ನು ಬಾರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತಾಳ್ಮೆಯ ಆಟಕ್ಕೆ ಹೆಸರಾಗಿದ್ದ ದ್ರಾವಿಡ್, ವಾಲ್ ಎಂದೇ ಹೆಸರು ಪಡೆದಿದ್ದಾರೆ.

ರಾಜಸ್ಥಾನ್ ರಾಯಲ್ಸ್ (ಆರ್‌ಆರ್), ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್), ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸೇರಿದಂತೆ ವಿವಿಧ ಐಪಿಎಲ್ ಫ್ರಾಂಚೈಸಿಗಳು ಅವರಿಗೆ ಶುಭಾಶಯ ಕೋರಿವೆ. ಮಾತ್ರವಲ್ಲದೆ, ಬಿಸಿಸಿಐ, ಟೀಂ ಇಂಡಿಯಾ ಆಟಗಾರರು ಕೂಡ ವಾಲ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿವೆ.

Story first published: Wednesday, January 11, 2023, 22:44 [IST]
Other articles published on Jan 11, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X