ಅಂಡರ್-19 ವಿಶ್ವಕಪ್: ಚರಿತ್ರೆ ಬರೆಯಲು ಸಿದ್ಧರಾಗಿದ್ದಾರೆ ಟೀಮ್ ಇಂಡಿಯಾ ಕಿರಿಯರು

ಅಂಡರ್ 19ವಿಶ್ವಕಪ್ ಕ್ರಿಕೆಟ್‌ನಲ್ಲಿ ಇಂದು ಫೈನಲ್ ಪಂದ್ಯ ನಡೆಯಲಿದೆ. ನಾಲ್ಕು ಬಾರಿಯ ಚಾಂಪಿಯನ್ ಟೀಮ್ ಇಂಡಿಯಾ ಮತ್ತು ಮೊದಲ ಬಾರಿಗೆ ಅಂಡರ್-19 ವಿಶ್ವಕಪ್‌ನಲ್ಲಿ ಫೈನಲ್ ಹಂತಕ್ಕೇರಿರುವ ಬಾಂಗ್ಲಾದೇಶ ತಂಡ ಈ ಬಾರಿಯ ಚಾಂಪಿಯನ್ ಪಟ್ಟಕ್ಕೇರಲು ಹಣಾಹಣಿ ನಡೆಸಲಿದೆ.
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಈ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಕಿರಿಯರು ಎಲ್ಲಾ ಪಂದ್ಯಗಳಲ್ಲಿ ಗೆದ್ದು ಬಲಿಷ್ಠ ತಂಡವಾಗಿ ಫೈನಲ್ ಹಂತಕ್ಕೇರಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಸಹಜವಾಗಿ ಟೀಮ್ ಇಂಡಿಯಾ ಮೇಲೆ ಗೆಲುವಿನ ನಿರೀಕ್ಷೆ ಹೆಚ್ಚಾಗಿದೆ.
ಟೀಮ್ ಇಂಡಿಯಾ ಅಂಡರ್-19 ತಂಡದಲ್ಲಿ ಭಾರತೀಯ ಕಿರಿಯರು ಅದ್ಭುತವಾಗಿ ಪ್ರದರ್ಶನ ನೀಡುತ್ತಿದ್ದಾರೆ. ಬಾಂಗ್ಲಾದೇಶ ಕಿರಿಯರ ತಂಡವೂ ಟೀಮ್ ಇಂಡಿಯಾ ವಿರುದ್ಧ ಗೆಲುವು ಸಾಧಿಸಲು ಪರಿಶ್ರಮ ಪಡಲಿದೆ.

ಪಾಕಿಸ್ತಾನ ಮಣಿಸಿ ಫೈನಲ್‌ಗೇರಿದ ಬಾರತ:
ಅಂಡರ್19 ವಿಶ್ವಕಪ್ ಕ್ರಿಕೆಟ್‌ನ ಸೆಮಿ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಕಿರಿಯರು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಒಂದೂ ವಿಕೆಟ್ ಕಳೆದುಕೊಳ್ಳದೆ ಪಾಕಿಸ್ತಾನ ತಂಡವನ್ನು ಮಣಿಸಿತು.

ಒಂದೂ ಪಂದ್ಯ ಸೋಲದೆ ಫೈನಲ್‌ಗೆ ಲಗ್ಗೆ:
ಟೀಮ್ ಇಂಡಿಯಾ ಕಿರಿಯರು ಆಡಿದ ಎಲ್ಲಾ ಪಂದ್ಯಗಳಲ್ಲೂ ಗೆಲುವನ್ನು ಸಾಧಿಸಿದ್ದಾರೆ. ಈ ಮೂಲಕ ಅಜೇಯವಾಗಿಯೇ ಫೈನಲ್ ಪ್ರವೇಶವನ್ನು ಮಾಡಿದ ತಂಡವಾಗಿದೆ ಟೀಮ್ ಇಂಡಿಯಾ. ಇಂದಿನ ಫೈನಲ್ ಪಂದ್ಯವನ್ನು ಗೆಲ್ಲಲು ಸಿದ್ಧವಾಗಿದೆ.

ನ್ಯೂಜಿಲೆಂಡ್ ಮಣಿಸಿದ ಬಾಂಗ್ಲಾ:
ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ತಂಡ ನ್ಯೂಜಿಲೆಂಡ್ ತಂಡ ಎದುರಾಳಿಯಾಗಿತ್ತು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಬಾಂಗ್ಲಾದೇಶ ಕಿರಿಯರು ಆರು ವಿಕೆಟ್‌ಗಳಿಂದ ಮಣಿಸುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಅಂಡರ್ 19 ವಿಸ್ವಕಪ್‌ನಲ್ಲಿ ಚಿಚ್ಚಕ ಬಾರಿಗೆ ಫೈನಲ್ ಪ್ರವೇಶ ಪಡೆದುಕೊಂಡಿತು.

ದಾಖಲೆಯ ಬಾರಿಗೆ ಫೈನಲ್:
ಟೀಮ್ ಇಂಡಿಯಾ ಕಿರಿಯರ ತಂಡ ಈ ಬಾರಿ ಫೈನಲ್ ಪ್ರವೇಶವನ್ನು ಮಾಡಿರುವುದು 7ನೇ ಬಾರಿ. ಇದು ಯಾವ ತಂಡವೂ ಮಾಡಲಾಗದ ಸಾಧನೆಯಾಗಿದೆ. ಈವರೆಗೆ ನಾಲ್ಕು ಬಾರಿ ವಿಶ್ವಕಪ್ ಮುಡಿಗೇರಿಸಿರುವ ಟೀಮ್ ಇಂಡಿಯಾ 5ನೇ ಬಾರಿಗೆ ಚಾಂಪಿಯನ್ ಆಗಲು ವೇದಿಕೆ ಸಿದ್ಧವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications