ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ, ರೋಹಿತ್ ಇಲ್ಲದಿದ್ದರೂ ಭಾರತ ತಂಡ ಬಲಿಷ್ಠವಾಗಿದೆ ಎಂದ ದಕ್ಷಿಣ ಆಫ್ರಿಕಾ ನಾಯಕ

Temba Bavuma said India’s fighting spirit will be there despite senior players absence

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟಿ20 ಸರಣಿಗೆ ದಿನಗಣನೆ ಆರಂಭವಾಗಿದ್ದು ಐದು ಪಂದ್ಯಗಳ ಟಿ20 ಸರಣಿ ಜೂನ್ 9ರಿಂದ ಆರಂಭವಾಗಲಿದೆ. ಈ ಹಿನ್ನಲೆಯಲ್ಲಿ ದಕ್ಷಿಣ ಆಪ್ರಿಕಾ ಕ್ರಿಕೆಟ್ ತಂಡ ಈಗಾಗಲೇ ಭಾರತಕ್ಕೆ ಆಗಮಿಸಿದ್ದು ಅಭ್ಯಾಸ ಆರಂಭಿಸಿದೆ. ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಟೆಂಬಾ ಬವುಮಾ ಭಾರತ ತಂಡ ಪ್ರಮುಖ ಆಟಗಾರರ ಅಲಭ್ಯತೆಯಲ್ಲಿಯೂ ಆತ್ಮವಿಶ್ವಾಸದಿಂದ ಕೂಡಿದೆ ಎಂದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಆಡುತ್ತಿದೆ. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬೂಮ್ರಾ ಈ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಹೀಗಾಗಿ ಭಾರತ ತಂಡದ ನಾಯಕತ್ವ ಕೆಎಲ್ ರಾಹುಲ್ ಹೆಗಲೇರಿದೆ.

IPL 2022: ದಿನೇಶ್ ಕಾರ್ತಿಕ್ ಗ್ರೇಟ್ ಫಿನಿಶರ್ ಆಗಿ ವಿಕಸನಗೊಂಡಿದ್ದಾರೆ; ಆರ್‌ಸಿಬಿ ವೇಗಿ ಪ್ರಶಂಸೆIPL 2022: ದಿನೇಶ್ ಕಾರ್ತಿಕ್ ಗ್ರೇಟ್ ಫಿನಿಶರ್ ಆಗಿ ವಿಕಸನಗೊಂಡಿದ್ದಾರೆ; ಆರ್‌ಸಿಬಿ ವೇಗಿ ಪ್ರಶಂಸೆ

ಇನ್ನು ದಕ್ಷಿಣ ಆಫ್ರಿಕಾ ತಂಡ ಸಂಪೂರ್ಣ ಸಾಮರ್ಥ್ಯದೊಂದುಗೆ ಭಾರತಕ್ಕೆ ಬಂದಿಳಿದಿದೆ. ಅದರಲ್ಲೂ ಐಪಿಎಲ್‌ನಲ್ಲಿ ಆಡಿ ಅದ್ಭುತ ಪ್ರದರ್ಶನ ನೀಡಿರುವ ಆಟಗಾರರ ಈ ತಂಡದ ಪ್ರಮುಖ ಆಟಗಾರರಾಗಿದ್ದಯ ಭಾರತ ತಂಡಕ್ಕೆ ಕಠಿಣ ಸವಾಲಾಗುವುದರಲ್ಲಿ ಅನುಮಾನವಿಲ್ಲ. ಕ್ವಿಂಟನ್ ಡಿಕಾಕ್, ಡೇವಿಡ್ ಮಿಲ್ಲರ್, ಕಗಿಸೋ ರಬಾಡಾ ಮತ್ತು ಅನ್ರಿಕ್ ನಾರ್ಕಿಯಾ ಐಪಿಎಲ್‌ನಲ್ಲಿ ತಮ್ಮ ತಂಡಗಳ ಪರವಾಗಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ. ಈ ಫಾರ್ಮ್‌ಅನ್ನು ರಾಷ್ಟ್ರೀಯ ತಂಡದ ಪರವಾಗಿಯೂ ಮುಂದುವರಿಸುವ ಆತ್ಮವಿಶ್ವಾಸದಲ್ಲಿದ್ದಾರೆ ಈ ಆಟಗಾರರು.

ಎರಡನೇ ದರ್ಜೆಯ ತಂಡ ಎಂದುನಾವು ಪರಿಗಣಿಸಲ್ಲ: ಇನ್ನು ಪ್ರಮುಖ ಆಟಗಾರರ ಅಲಭ್ಯತೆಯಲ್ಲಿ ಭಾರತ ತಂಡವನ್ನು ಎರಡನೇ ದರ್ಜೆಯ ತಂಎ ಎಂದು ಪರಿಗಣಿಸುವುದಿಲ್ಲ ಎಂದು ದಕ್ಷಿಣ ಆಫ್ರಿಕಾ ತಮಡದ ನಾಯಕ ಬವುಮಾ ಹೇಳಿದ್ದಾರೆ. "ಖಂಡಿತಾ ಇದು ಹೊಸ ರೂಪದ ಭಾರತೀಯ ತಂಡ. ಈ ತಂಡದಲ್ಲಿರುವ ಬಹಳಷ್ಟು ಆಟಗಾರರು ಐಪಿಎಲ್‌ನಲ್ಲಿ ಸಿಕ್ಕ ಅವಕಾಶದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ನಾವು ಒಂದು ತಂಡವಾಗಿ ಎದುರಾಳಿಯಲ್ಲಿ ಯಾವುದೇ ಭಿನ್ನತೆಯನ್ನು ಕಾಣುವುದಿಲ್ಲ" ಎಂದಿದ್ದಾರೆ ಟೆಂಬಾ ಬವುಮಾ.

ದಾಖಲೆ ಬರೆಯಲು ಸಜ್ಜಾದ ಭಾರತ ಭಾರತ ಸತತ 12 ಟಿ20 ಪಂದ್ಯಗಳ್ನು ಗೆದ್ದುಕೊಂಡಿದ್ದು ವಿಶ್ವದಾಖಲೆ ಬರೆಯಲು ಸಜ್ಜಾಗಿದೆ. ಆದರೆ ಈ ದಾಖಲೆಗೆ ಅಡ್ಡಿಯಾಗಲು ಟೆಂಬಾ ಬವುಮಾ ಪಡೆ ಸಿದ್ಧವಾಗಿದೆ. ಭಾರತ ಈ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ವಿಶ್ವದಾಖಲೆಯನ್ನು ಬರೆಯಲಿದೆ.

1993ರ ಈ ದಿನ: ಶೇನ್ ವಾರ್ನ್ ಎಸೆದಿದ್ದ 'ಬಾಲ್ ಆಫ್ ದಿ ಸೆಂಚುರಿ' ಮೆಲುಕು ಹಾಕಿದ ಐಸಿಸಿ1993ರ ಈ ದಿನ: ಶೇನ್ ವಾರ್ನ್ ಎಸೆದಿದ್ದ 'ಬಾಲ್ ಆಫ್ ದಿ ಸೆಂಚುರಿ' ಮೆಲುಕು ಹಾಕಿದ ಐಸಿಸಿ

ಸರಣಿಯ ಮಾಹಿತಿ: ಇನ್ನು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಈ ಸರಣಿ ಜೂನ್ 9ರಿಂದ ಆರಂಭವಾಗಲಿದೆ. ಐದು ಪಂದ್ಯಗಳ ಟಿ20 ಸರಣಿ ಇದಾಗಿದ್ದು ಐದು ಭಿನ್ನ ತಾಣಗಳಲ್ಲಿ ಈ ಸರಣಿ ಆಯೋಜನೆಯಾಗಲಿದೆ. ಮೊದಲ ಪಂದ್ಯ ಜೂನ್ 9ರಂದು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದರೆ ಎರಡನೇ ಪಂದ್ಯ ಜೂನ್ 12ರಂದು ಕಟಕ್‌ನಲ್ಲಿ ನಡೆಯಲಿದೆ. ಮೂರನೇ ಪಂದ್ಯ ಜೂನ್ 14ರಂದು ವಿಶಾಖಪಟ್ಟಣಂನಲ್ಲಿ ಆಯೋಜನೆಯಾಗಲಿದೆ. ನಾಲ್ಕನೇ ಪಂದ್ಯ ಜೂನ್ 17ರಂದು ರಾಜ್‌ಕೋಟ್‌ನಲ್ಲಿ ಆಯೋಜನೆಯಾದರೆ ಅಂತಿಮ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯವಹಿಸಲಿದೆ. ಈ ಪಂದ್ಯ ಜೂನ್ 19ರಂದು ನಡೆಯಲಿದೆ.

ಟಿ20 ಸರಣಿಗೆ ಭಾರತ ಸ್ಕ್ವಾಡ್: ಕೆಎಲ್ ರಾಹುಲ್ (ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪ ನಾಯಕ) (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜುವೇಂದ್ರ ಚಾಹಲ್, ಕುಲ್‌ದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್ , ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್

ದಕ್ಷಿಣ ಆಫ್ರಿಕಾ ಟಿ20 ಬಳಗ ಹೀಗಿದೆ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಕ್ ನಾರ್ಕಿಯಾ, ವಾಯ್ನೆ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡಾ, ಟಬ್ರೈಜ್ ಶಮ್ಸಿ, ಸ್ಟೀಸ್ಟನ್ ಸ್ಟಬ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಮಾರ್ಕೊ ಜಾನ್ಸೆನ್

Story first published: Saturday, June 4, 2022, 23:01 [IST]
Other articles published on Jun 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X