ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಟೆಸ್ಟ್ ಕ್ರಿಕೆಟ್ ಸರ್ವಸ್ವ: ಕೆವಿನ್ ಪೀಟರ್ಸನ್

ಬೆಂಗಳೂರು, ಆಗಸ್ಟ್ 19: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ವಿಶೇಷ ಕಾರಣಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್‌ನ ಮೇಲೆ ಹೊಂದಿರುವ ಬದ್ಧತೆ ಸುದೀರ್ಘ ಮಾದರಿಯ ಕ್ರಿಕೆಟ್‌ ಮತ್ತಷ್ಟು ಹೆಚ್ಚಿನ ವಿಸ್ತರಣೆಯನ್ನು ಪಡೆಯಲು ಸಹಕಾರಿಯಾಗಿದೆ ಎಂದು ಪೀಟರ್ಸನ್ ಹೇಳಿದ್ದಾರೆ. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನ ಮೇಲೆ ತುಂಬಾ ಒಲವನ್ನು ಹೊಂದಿದ್ದಾರೆ. ರೆಡ್ ಬಾಲ್ ಕ್ರಕೆಟ್‌ನ ಮೇಲೆ ವಿಶ್ವ ಕ್ರಿಕೆಟ್‌ನ ಸೂಪರ್‌ಸ್ಟಾರ್‌ ಒಬ್ಬರು ಈ ಪ್ರಮಾಣದ ಉತ್ಸುಕತೆಯನ್ನು ಹೊಂದಿರುವುದನ್ನು ನೋಡಿದಾಗ ಸಂತಸವಾಗುತ್ತದೆ ಎಂದು ಕೆವಿನ್ ಪೀಟರ್ಸನ್ ಹೇಳಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಕೆವಿನ್ ಪೀಟರ್ಸನ್ ಭಾರತೀಯ ನಾಯಕ ವಿರಾಟ್ ಕೊಹ್ಲಿಯ ಹೀರೋಗಳೆಂದರೆ ರಾಹುಲ್ ದ್ರಾವಿಡ್ ಹಾಗೂ ಸಚಿನ್ ತೆಂಡೂಲ್ಕರ್. ಇವರು ಟೆಸ್ಟ್ ಕ್ರಿಕೆಟ್‌ನ ದಂತಕತೆಗಳು. ಅವರ ಹೆಜ್ಜೆ ಗುರುತುಗಳನ್ನು ಹಿಂಬಾಲಿಸಲು ಕೊಹ್ಲಿ ತಮ್ಮ ಎಲ್ಲಾ ಪರಿಶ್ರಮವನ್ನು ಹಾಕುತ್ತಿದ್ದಾರೆ ಎಂದಿದ್ದಾರೆ ಇಂಗ್ಲೆಂಡ್ ತಂಡದ ಮಾಜಿ ನಾಯಕ.

ಟಿಟ್ವೆಂಟಿ ವಿಶ್ವಕಪ್‌: 15 ಆಟಗಾರರ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಸ್ಥಾನ ಪಡೆದ ಬಲಿಷ್ಠ ಆಟಗಾರಟಿಟ್ವೆಂಟಿ ವಿಶ್ವಕಪ್‌: 15 ಆಟಗಾರರ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಸ್ಥಾನ ಪಡೆದ ಬಲಿಷ್ಠ ಆಟಗಾರ

ವಿರಾಟ್ ಕೊಹ್ಲಿಗೆ ಟೆಸ್ಟ್ ಕ್ರಿಕೆಟ್‌ ಸರ್ವಸ್ವ: ಇನ್ನು ಮುಂದುವರಿದು ಮಾತನಾಡಿದ ಕೆವಿನ್ ಪೀಟರ್ಸನ್ ವಿರಾಟ್ ಕೊಹ್ಲಿಗೆ ಟೆಸ್ಟ್ ಕ್ರಿಕೆಟ್ ಅಂದರೆ ಸರ್ವಸ್ವ ಎಂದಿದ್ದಾರೆ. ಟೆಸ್ಟ್ ಪಂದ್ಯವನ್ನು ಆಡುವಾಗ ಅವರು ಹೊಂದಿರುವ ಉತ್ಸಾಹ, ಆಟದ ಮೇಲೆ ಅವರು ಹೊಂದಿರುವ ತೀವ್ರತೆ, ತನ್ನ ತಂಡವನ್ನು ಒಗ್ಗೂಡಿಸುವ ರೀತಿ ಈ ಎಲ್ಲವೂ ಕೂಡ ಟೆಸ್ಟ್ ಕ್ರಿಕೆಟ್‌ನ ಮೇಲೆ ಆತ ಹೊಂದಿರುವ ಭಾವನೆಯನ್ನು ವ್ಯಕ್ತಪಡಿಸುತ್ತದೆ ಎಂದು ಕೆವಿನ್ ಪೀಟರ್ಸನ್ ಹೇಳಿದ್ದಾರೆ.

ಟಿ20 ಕ್ರಿಕೆಟ್‌ಗೆ ನೀಡುವ ಮಹತ್ವ ಟೆಸ್ಟ್‌ಗೂ ಅಗತ್ಯ: ಇನ್ನು ಇದೇ ಸಂದರ್ಭದಲ್ಲಿ ಕೆವಿನ್ ಪೀಟರ್ಸನ್ ವಿಶ್ವ ಕ್ರಿಕೆಟ್‌ನಲ್ಲಿ ದಿಗ್ಗಜ ಆಟಗಾರನೆನಿಸಿಕೊಳ್ಳಬೇಕಾದರೆ ಟಿ20 ಕ್ರಿಕೆಟ್‌ಗೆ ನೀಡಿದಷ್ಟೇ ಮಹತ್ವವನ್ನು ಟೆಸ್ಟ್ ಕ್ರಿಕೆಟ್‌ಗೂ ನೀಡಬೇಕಾಗುತ್ತದೆ ಎಂಬುದು ವಿರಾಟ್ ಕೊಹ್ಲಿಗೆ ತಿಳಿದಿದೆ. ಹಾಗಾಗಿಯೇ ಕೊಹ್ಲಿ ಈ ಸುದೀರ್ಘ ಮಾದರಿಯ ಕ್ರಕೆಟ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಟೆಸ್ಟ್ ಕ್ರಿಕೆಟ್‌ ಸಾಧ್ಯವಿರುವ ಎಲ್ಲಾ ಪ್ರೀತಿಯನ್ನು ಪಡೆಯಲು ಬಯಸುತ್ತಿರುವಾಗ ವಿಶ್ವ ಕ್ರಿಕೆಟ್‌ನ ಸೂಪರ್‌ಸ್ಟಾರ್ ಓರ್ವ ಈ ಪ್ರಮಾಣದ ಉತ್ಸುಕತೆಯನ್ನು ಸುದೀರ್ಘ ಮಾದರಿಯ ಕ್ರಿಕೆಟ್‌ನ ಮೇಲೆ ಹೊಂದಿರುವುದನ್ನು ನೋಡಲು ಹರ್ಷವಾಗುತ್ತದೆ ಎಂದು ಕೆವಿನ್ ಪೀಟರ್ಸನ್ ಹೇಳಿಕೊಂಡಿದ್ದಾರೆ.

ಕೊಹ್ಲಿಯ ಬದ್ಧತೆಗೆ ಪೀಟರ್ಸನ್ ಮೆಚ್ಚುಗೆ: "ವಿರಾಟ್ ಕೊಹ್ಲಿ ತನ್ನ ತಂಡ ಎಲ್ಲಾ ಪರಿಸ್ಥಿತಿಯಲ್ಲಿಯೂ ಉತ್ತಮ ಪ್ರದರ್ಶನ ನೀಡುವುದನ್ನು ಗೌರವಿಸುತ್ತಾರೆ. ಅದೇ ಕಾರಣದಿಂದಾಗಿ ಅವರು ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಗೆಲುವು ಸಾಧಿಸುವುದನ್ನು ವೀಕ್ಷಿಸಿದರು. ನಂತರ ಲಾರ್ಡ್ಸ್ ಮೈದಾನದಲ್ಲಿ ಗೆಲುವು ಸಾಧಿಸುವ ಮೂಲಕ ಸಂತೃಪ್ತಿಯನ್ನು ಅನುಭವಿಸಿದ್ದಾರೆ" ಎಂದು ಕೆವಿನ್ ಪೀಟರ್ಸನ್ ಟೀಮ್ ಇಂಡಿಯಾ ನಾಯಕ ಟೆಸ್ಟ್ ಕ್ರಿಕೆಟ್‌ನ ಮೇಲೆ ಹೊಂದಿರುವ ಅಪಾರವಾದ ಪ್ರೀತಿ ಹಾಗೂ ಬದ್ಧತೆಯನ್ನು ಕೊಂಡಾಡಿದ್ದಾರೆ.

ಲಾರ್ಡ್ಸ್‌ನಲ್ಲಿ ಭಾರತದ ಗೆಲುವಿಗೆ ಪೀಟರ್ಸನ್ ಮೆಚ್ಚುಗೆ: ಇನ್ನು ಇದೇ ಸಂದರ್ಭದಲ್ಲಿ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಟೀಮ್ ಇಂಡಿಯಾ ಸಾಧಿಸಿದ ಗೆಲುವಿಗೆ ಅವರು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. "ಉಪಖಂಡದ ತಂಡವೊಂದು ಇಂಗ್ಲೆಂಡ್‌ಗೆ ಬಂದು ಜಯಸಾಧಿಸುವುದು ಸುಲಭದ ಮಾತಲ್ಲ. ಆದರೆ ಈ ಸರಣಿಯ ಮೊದಲ ಪಂದ್ಯವಾಗಿದ್ದ ಟ್ರೆಂಟ್‌ಬ್ರಿಡ್ಜ್‌ ಟೆಸ್ಟ್ ಪಂದ್ಯ ಮಳೆಗೆ ಡ್ರಾ ಫಲಿತಾಂಶ ಪಡೆಯದಿದ್ದರೆ ಈಗ ಭಾರತ 2-0 ಅಂತರದಿಂದ ಮುನ್ನಡೆಯಲ್ಲಿರುತ್ತಿತ್ತು. ಕೊನೆಯ ದಿನದಾಟದಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್‌ನಲ್ಲಿ ನೀಡಿದ ಪ್ರದರ್ಶನ ತೀವ್ರತೆ ಹಾಗೂ ಗುಣಮಟ್ಟ ಅದ್ಭುತವಾಗಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ ನಂಬರ್ ಬ್ರ್ಯಾಂಡ್ ಆಗಿರುವ ಭಾರತ ಈ ಮಾದರಿಯ ಬಗ್ಗೆ ಅತ್ಯುನ್ನತವಾದ ಉತ್ಸಾಹ ಹಾಗೂ ಬದ್ಧತೆಯನ್ನು ಹೊಂದಿರುವುದು ನಿಜಕ್ಕೂ ಆಶ್ಚರ್ಯವಾಗುತ್ತದೆ. ಇದೆಲ್ಲವೂ ಕೂಟ ಟೆಸ್ಟ್ ಕ್ರಿಕೆಟ್‌ನ ದೃಷ್ಟಿಯಿಂದ ಅತ್ಯುತ್ತಮವಾದ ಸಂಗತಿಯಾಗಿದೆ" ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕನೂ ಆಗಿರುವ ಕೆವಿನ್ ಪೀಟರ್ಸನ್ ಹೇಳಿಕೆ ನೀಡಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳು ಅಂತ್ಯವಾಗಿದ್ದು ಭಾರತ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆಯಲ್ಲಿದೆ. ಮೂರನೇ ಪಂದ್ಯ ಲೀಡ್ಸ್‌ನ ಹೆಡಿಂಗ್ಲೇ ಮೈದಾನದಲ್ಲಿ ಆಗಸ್ಟ್ 25ರಿಂದ ಆರಂಭವಾಗಲಿದೆ. ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ಜಿದ್ದಾಜಿದ್ದಿನ ಪ್ರದರ್ಶನ ನೀಡಲು ಉತ್ಸುಕವಾಗಿದ್ದು ಹೆಚ್ಚಿನ ಕಾಲಾವಕಾಶವನ್ನು ಹೊಂದಿರುವುದು ಎರಡೂ ತಂಡಕ್ಕೂ ಅನುಕೂಲವಾಗಿದೆ. ಆರಂಭಿಕ ಎರಡು ಪಂದ್ಯಗಳಲ್ಲಿಯೂ ಅದ್ಭುತವಾದ ಪ್ರದರ್ಶನ ನೀಡಿರುವ ವಿರಾಟ್ ಕೊಹ್ಲಿ ಪಡೆ ಮೂರನೇ ಪಂದ್ಯದಲ್ಲಿ ಹೆಚ್ಚಿನ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆಯಿದೆ. ಆದರೆ ಸ್ಪಿನ್ನರ್ ರವೀಂದ್ರ ಜಡೇಜಾ ಸ್ಥಾನದಲ್ಲಿ ಆರ್ ಅಶ್ವಿನ್‌ಗೆ ಅವಕಾಶ ನೀಡಿದರೆ ಆಶ್ಚರ್ಯವಿಲ್ಲ. ಅನುಭವಿ ಆರ್ ಅಶ್ವಿನ್ ಈ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ಬೆಂಚ್ ಕಾದಿದ್ದರು. ರವೀಂದ್ರ ಜಡೇಜಾ ಆಡುವ ಬಳಗದಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು.

ಇನ್ನು ಮೂರನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡದ 15 ಸದಸ್ಯರ ತಂಡವನ್ನು ಬುಧವಾರ ಪ್ರಕಟಿಸಲಾಗಿದೆ. ಕೆಲ ಮಹತ್ವದ ಬದಲಾವಣೊಯೊಂದಿಗೆ ಈ ತಂಡ ಪ್ರಕಟವಾಗಿದೆ. ಮೊದಲ ಎರಡು ಪಂದ್ಯಗಳಲ್ಲಿಯೂ ಕಳಪೆ ಪ್ರದರ್ಶನ ನೀಡಿದ ಡಾಮ್ ಸಿಬ್ಲಿ ಹಾಗೂ ಜಾಕ್ ಕ್ರಾವ್ಲೆ ಈ ತಂಡದಿಂದ ಹೊರ ಬಿದ್ದಿದ್ದಾರೆ.

3ನೇ ಟೆಸ್ಟ್‌ ಪಂದ್ಯಕ್ಕೆ ಆಯ್ಕೆಯಾಗಿರುವ ಇಂಗ್ಲೆಂಡ್ ತಂಡ ಹೀಗಿದೆ: ಜೋ ರೂಟ್ (ನಾಯಕ), ಮೊಯೀನ್ ಅಲಿ, ಜೇಮ್ಸ್ ಆಂಡರ್ಸನ್, ಜಾನಿ ಬೈರ್‌ಸ್ಟೊವ್, ರೋರಿ ಬರ್ನ್ಸ್, ಜೋಸ್ ಬಟ್ಲರ್, ಸ್ಯಾಮ್ ಕುರನ್, ಹಸೀಬ್ ಹಮೀದ್, ಡಾನ್ ಲಾರೆನ್ಸ್, ಸಾಕಿಬ್ ಮಹಮೂದ್, ಡೇವಿಡ್ ಮಲನ್, ಕ್ರೇಗ್ ಓವರ್‌ಟನ್, ಓಲ್ಲಿ ಪೋಪ್, ಒಲ್ಲಿ ರಾಬಿನ್ಸನ್, ಮಾರ್ಕ್ ವುಡ್

For Quick Alerts
ALLOW NOTIFICATIONS
For Daily Alerts
Story first published: Thursday, August 19, 2021, 14:25 [IST]
Other articles published on Aug 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X