ಆಯ್ಕೆಗಾರ ಚೇತನ್ ಶರ್ಮಾ ಅವಧಿಯಲ್ಲಿ ಅವಕಾಶವಂಚಿತರಾದ ಮೂವರು ಪ್ರತಿಭಾವಂತ ಕ್ರಿಕೆಟಿಗರು ಇವರು

ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಸೆಮಿಫೈನಲ್‌ನಲ್ಲಿ ಸೋಲನುಭವಿಸಿದ ನಂತರ, ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್‌ ಶರ್ಮಾ ಸೇರಿದಂತೆ ಆಯ್ಕೆ ಸಮಿತಿಯನ್ನು ವಜಾ ಗೊಳಿಸಿದೆ. ಟಿ20 ವಿಶ್ವಕಪ್ 2024ಕ್ಕೆ ತಂಡವನ್ನು ಸಜ್ಜುಗೊಳಿಸಲು ಬಿಸಿಸಿಐ ಹಲವು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.

ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ತೆಗೆದುಕೊಂಡ ಹಲವು ನಿರ್ಧಾರಗಳ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಪ್ರಮುಖ ಟೂರ್ನಿಗಳಿಗೆ ತಂಡವನ್ನು ಆಯ್ಕೆ ಮಾಡುವ ವೇಳೆ ಅವರ ಪ್ರದರ್ಶನವನ್ನು ಪಕ್ಕಕ್ಕಿಟ್ಟು, ಅನುಭವಕ್ಕೆ ಮಾತ್ರ ಬೆಲೆ ಕೊಡಲಾಯಿತು. ಕೆಲವು ಮಹತ್ವದ ಪಂದ್ಯಗಳಲ್ಲಿ ಅನುಭವಿಗಳನ್ನು ಬಿಟ್ಟು, ಹೊಸಬರಿಗೆ ಮಣೆ ಹಾಕಲಾಯಿತು. ಪದೇ ಪದೇ ತಂಡದಲ್ಲಿ ಬದಲಾವಣೆ ಮಾಡುವುದು ಹೀಗೆ ಹಲವು ಎಡವಟ್ಟುಗಳ ಬಗ್ಗೆ ಮಾಜಿ ಕ್ರಿಕೆಟಿಗರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು.

Ind vs Nz 2nd T20I: ಓಪನರ್‌ ಆಗಿ ಮತ್ತೆ ಎಡವಿದ ರಿಷಭ್ ಪಂತ್, ಕೊಟ್ಟ ಅವಕಾಶ ಕೈ ಚೆಲ್ಲಿದ ಬ್ಯಾಟರ್Ind vs Nz 2nd T20I: ಓಪನರ್‌ ಆಗಿ ಮತ್ತೆ ಎಡವಿದ ರಿಷಭ್ ಪಂತ್, ಕೊಟ್ಟ ಅವಕಾಶ ಕೈ ಚೆಲ್ಲಿದ ಬ್ಯಾಟರ್

ಒಂದು ವರ್ಷದ ಅವಧಿಯಲ್ಲಿ ಭಾರತ ಮೂರು ಪ್ರಮುಖ ಪಂದ್ಯಾವಳಿಗಳಲ್ಲಿ ಸೋಲನುಭವಿಸಿದೆ. 2021ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿದ್ದ ಟೀಂ ಇಂಡಿಯಾ, ಏಷ್ಯಾಕಪ್‌ನಲ್ಲಿ ಕೂಡ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ನಂತರ ಭಾರಿ ನಿರೀಕ್ಷೆ ಹೊಂದಿದ್ದ 2022ರ ಟಿ20 ವಿಶ್ವಕಪ್‌ನಲ್ಲಿ ಕೂಡ ಸೆಮಿಫೈನಲ್‌ನಲ್ಲಿ ಸೋಲನುಭವಿಸಿತು.

ಚೇತನ್ ಶರ್ಮಾ ನೇತೃತ್ವದ ಆಯ್ಕೆದಾರರ ಸಮಿತಿ ಮಾಡಿದ ಎಡವಟ್ಟುಗಳಿಂದ ಹಲವು ಅವಕಾಶಗಳನ್ನು ಕಳೆದುಕೊಂಡ ಮೂವರು ಪ್ರತಿಭಾವಂತ ಕ್ರಿಕೆಟಿಗರು ಇವರು.

ಉತ್ತಮ ಪ್ರದರ್ಶನ ನೀಡಿದರೂ ಪೃಥ್ವಿ ಶಾ ಕಡೆಗಣನೆ

ಉತ್ತಮ ಪ್ರದರ್ಶನ ನೀಡಿದರೂ ಪೃಥ್ವಿ ಶಾ ಕಡೆಗಣನೆ

ಪೃಥ್ವಿ ಶಾ ಅತ್ಯಂತ ಉತ್ತಮ ಬ್ಯಾಟರ್, ಅದರಲ್ಲೂ ಕೂಡ ಸ್ಫೋಟಕ ಆರಂಭಿಕ ಆಟಗಾರ. ದೇಶೀಯ ಕ್ರಿಕೆಟ್‌ನಲ್ಲಿ ಮತ್ತು ಐಪಿಎಲ್‌ನಲ್ಲಿ ಕೂಡ ಅವರು ಆರಂಭಿಕರಾಗಿ ಹಲವು ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದಾರೆ.

2021ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅತ್ಯುತ್ತಮ ಆರಂಭ ಪಡೆಯಲು ಪೃಥ್ವಿ ಶಾ ಕಾರಣವಾಗಿದ್ದರು. ಪ್ರತಿಭೆ ಇದ್ದರೂ ಕೂಡ ಅವರು ಇಂದಿಗೂ ಭಾರತ ಟಿ20 ತಂಡಕ್ಕೆ ಆಯ್ಕೆಯಾಗಿಲ್ಲ. ಐರ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಪ್ರವಾಸಕ್ಕಾಗಿ ಭಾರತ ಎರಡು ತಂಡಗಳನ್ನು ಮಾಡಿದರೂ ಕೂಡ ಪೃಥ್ವಿ ಶಾ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು.

ಆಯ್ಕೆದಾರರು ಪೃಥ್ವಿ ಶಾ ಜೊತೆ ಚರ್ಚೆ ನಡೆಸುತ್ತಿದ್ದಾರೆ ಎಂದು ಚೇತನ್ ಶರ್ಮಾ ತಮ್ಮ ಕೊನೆಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಆದರೂ ಕೂಡ, ನ್ಯೂಜಿಲೆಂಡ್ ವಿರುದ್ಧದ ಪ್ರವಾಸದಲ್ಲಿ ಅವರು ಸ್ಥಾನ ಪಡೆಯಲಿಲ್ಲ. ವಿಶ್ವಕಪ್‌ನಲ್ಲಿ ಭಾರತ ತಂಡದ ಆರಂಭಿಕರು ಉತ್ತಮ ಪ್ರದರ್ಶನ ನೀಡಲಿಲ್ಲ. ಆದಾಗ್ಯೂ, ಪೃಥ್ವಿ ಶಾರನ್ನು ನ್ಯೂಜಿಲೆಂಡ್ ಪ್ರವಾಸಕ್ಕೆ ಪರಿಗಣಿಸಲಿಲ್ಲ.

FIFA World cup 2022: ಮೊಟ್ಟ ಮೊದಲ ಬಾರಿಗೆ ಜಾಹೀರಾತಿನಲ್ಲಿ ಒಟ್ಟಾಗಿ ಕಾಣಿಸಿಕೊಂಡ ಮೆಸ್ಸಿ-ರೊನಾಲ್ಡೊ!

ಅವಕಾಶ ಪಡೆಯದ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್

ಅವಕಾಶ ಪಡೆಯದ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್

2020ರಲ್ಲಿ ನಡೆದ ಅಂಡರ್-19 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. 2021ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಯಿತು. ಅಲ್ಲಿ ಕೂಡ ರವಿ ಬಿಷ್ಣೋಯ್ ಉತ್ತಮ ಪ್ರದರ್ಶನ ನೀಡಿದ್ದರು.

ಏಷ್ಯಾಕಪ್‌ಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ರವಿ ಬಿಷ್ಣೋಯ್ ಪಾಕಿಸ್ತಾನದ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದರು. ಯುಜುವೇಂದ್ರ ಚಹಾಲ್ ಬದಲಿಗೆ ಅಂದು ಆಡುವ ಬಳಗದಲ್ಲಿ ಅವಕಾಶ ಪಡೆದಿದ್ದರು.

ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ರವಿ ಬಿಷ್ಣೋಯ್ ಟಿ20 ವಿಶ್ವಕಪ್‌ನ ಮುಖ್ಯ ತಂಡಕ್ಕೆ ಆಯ್ಕೆಯಾಗಲಿಲ್ಲ. ಅವರ ಬದಲಾಗಿ, ಅನುಭವಿ ಎಂದು ರವಿಚಂದ್ರನ್‌ ಅಶ್ವಿನ್‌ರನ್ನು ಆಯ್ಕೆ ಮಾಡಲಾಯಿತು. ಅದಾದ ನಂತರ, ಚೇತನ್ ಶರ್ಮಾ ಭಾರತ ತಂಡದ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶದ ಪ್ರವಾಸಗಳಿಗೆ ಆಯ್ಕೆ ಮಾಡಿದ ತಂಡದಲ್ಲೂ ಕೂಡ ಅವರಿಗೆ ಅವಕಾಶ ನೀಡಿಲ್ಲ.

ಚಹಾಲ್‌ಗೂ ಸಿಗದ ಅವಕಾಶ

ಚಹಾಲ್‌ಗೂ ಸಿಗದ ಅವಕಾಶ

ಚೇತನ್ ಶರ್ಮಾ ಮತ್ತು ತಂಡದ ಅನಿಶ್ಚಿತ ನಿರ್ಧಾರಗಳಿಂದ ಹೆಚ್ಚು ಅವಕಾಶ ಕಳೆದುಕೊಂಡಿದ್ದು ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಾಲ್. ಟಿ20 ವಿಶ್ವಕಪ್‌ 2021ರ ಆರಂಭಕ್ಕೆ ಮುನ್ನ ಯುಎಇಯಲ್ಲಿ ನಡೆದ ಐಪಿಎಲ್‌ 2021ರ ದ್ವಿತೀಯಾರ್ಧದಲ್ಲಿ ಚಹಾಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಿದ್ದರು.

ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಚಹಾಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ನೀಡಿದ ಪ್ರದರ್ಶನದ ಆಧಾರದ ಮೇಲೆ ಅವರು ಭಾರತ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುತ್ತಾರೆ ಎಂದು ನಂಬಲಾಗಿತ್ತು.

ಆದರೆ ಚೇತನ್ ಶರ್ಮಾ ನೇತೃತ್ವದ ಆಯ್ಕೆದಾರರು ಮಾತ್ರ ರಾಹುಲ್ ಚಹಾರ್ ಅವರನ್ನು ಆಯ್ಕೆ ಮಾಡಿದರು. ಚಹಾರ್ ಗಾಳಿಯ ಮೂಲಕ ವೇಗವಾಗಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದು, ಯುಎಇ ಪರಿಸ್ಥಿತಿಗಳಲ್ಲಿ ಹೆಚ್ಚು ಪರಿಣಾಮ ಬೀರಲಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡಿದ್ದರು. ಆ ವಿಶ್ವಕಪ್‌ನಲ್ಲಿ ಭಾರತ ತಂಡ ಸೆಮಿಫೈನಲ್‌ ಕೂಡ ತಲುಪದೆ ಟೂರ್ನಿಯಿಂದ ಹೊರಬಿದ್ದಿತು.

For Quick Alerts
ALLOW NOTIFICATIONS
For Daily Alerts
Story first published: Monday, November 21, 2022, 4:40 [IST]
Other articles published on Nov 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X