
ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್
ಪ್ರಸ್ತುತ ಆರ್‌ಸಿಬಿ ತಂಡದ ನಾಯಕನಾಗಿರುವ ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿಸ್ ಇದಕ್ಕೂ ಮುನ್ನ ಸುದೀರ್ಘ ಕಾಲ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಭಾಗವಾಗಿದ್ದರು. ಆದರೆ 2022ರ ಆವೃತ್ತಿಯ ಬಳಿಕ ಫಾಫ್ ಸಿಎಸ್‌ಗೆ ತಂಡದಿಂದ ಹೊರಬಿದ್ದು ಆರ್‌ಸಿಬಿ ತಂಡದ ಭಾಗವಾಗಿದ್ದು ತಂಡದ ನಾಯಕತ್ವ ಕೂಡ ವಹಿಸಿಕೊಂಡಿದ್ದಾರೆ. ಆದರೆ ಎಸ್‌ಎ20 ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕತ್ವದ ಜೋಹನ್ಸ್‌ಬರ್ಗ್ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ ಫಾಫ್. ಹೀಗಾಗಿ ಮತ್ತೊಮ್ಮೆ ಹಳದಿ ಜರ್ಸಿಯಲ್ಲಿ ಫಾಫ್ ಕಾಣಿಸಕೊಳ್ಳಲಿದ್ದು ತಂಡವನ್ನು ಮುನ್ನಡೆಸುವ ಹೊಣೆಗಾರಿಗೆ ಕೂಡ ಫಾಫ್ ಮೇಲಿದೆ.

ಆರ್‌ಸಿಬಿಗೆ ಸೇರ್ಪಡೆಯಾದ ಹೊಸ ಆಟಗಾರ ವಿಲ್ ಜಾಕ್ಸ್
ಬ್ಯಾಟಿಂಗ್ ಆಲ್‌ರೌಂಡರ್ ವಿಲ್ ಜಾಕ್ಸ್ ಇತ್ತೀಚೆಗಷ್ಟೇ ನಡೆದ ಮಿನಿ ಹರಾಜಿನಲ್ಲಿ ಆರ್‌ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ. ಈ ಆಲ್‌ರೌಂಡರ್ ಆಟಗಾರ SA20 ಲೀಗ್‌ನಲ್ಲಿ ಕೂಡ ಒಪ್ಪಂದವನ್ನು ಹೊಂದಿದ್ದಾರೆ. ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ಪರವಾಗಿ ಜಾಕ್ಸ್ ಆಡಲಿದ್ದು ಕುತೂಹಲ ಮೂಡಿಸಿದೆ. ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಮಾಲೀಕರಾಗಿರುವ ಜಿಎಂಆರ್ ಸ್ಪೋರ್ಟ್ಸ ಈ ಫ್ರಾಂಚೈಸಿಯ ಮಾಲೀಕರೂ ಹೌದು.

ಇಂಗ್ಲೆಂಡ್ ವೇಗಿ ರೀಸ್ ಟೋಪ್ಲೆ
ಆರ್‌ಸಿಬಿ ತಂಡದ ಮತ್ತೋರ್ವ ಹೊಸ ಆಟಗಾರ ರೀಸ್ ಟೋಪ್ಲೆ ಕೂಡ SA20 ಲೀಗ್‌ನ ಚೊಚ್ಚಲ ಆವೃತ್ತಿಯಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇಂಗ್ಲೆಂಡ್‌ನ ಈ ಎಡಗೈ ವೇಗದ ಬೌಲರ್ ಡರ್ಬನ್ಸ್ ಸೂಪರ್ ಜೈಂಟ್ಸ್ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ. ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕರಾಗಿರುವ ಗೋಯೆಂಕಾ ಗ್ರೂಪ್ ಈ ಫ್ರಾಂಚೈಸಿಯ ಮಾಲೀಕರಾಗಿದ್ದಾರೆ.


Click it and Unblock the Notifications
