ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂದು ಭಾರತ ಆಸ್ಟ್ರೇಲಿಯಾಗಿಂತ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿತ್ತು: ಮಿಚೆಲ್ ಸ್ಟಾರ್ಕ್

This summers certainly a chance to rectify previous mistakes says Starc

2018/19ರ ಸಾಲಿನಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ಆಸ್ಟ್ರೇಲಿಯಾ ತಂಡಕ್ಕೆ ಇದೊಂದು ಅವಕಾಶ ಎಂದು ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಹೇಳಿದ್ದಾರೆ. ಬಾರ್ಡರ್ ಗವಾಸ್ಕರ್ ಸರಣಿಯ ಹಿನ್ನೆಲೆಯಲ್ಲಿ ಮಾತನಾಡಿದ ಸ್ಟಾರ್ಕ್ ಅಂದು ವಿರಾಟ್ ಕೊಹ್ಲಿ ಪಡೆಗೆ ಶರಣಾಗಿದ್ದ ಆಸ್ಟ್ರೇಲಿಯಾ ಈ ಬಾರಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದರು.

2018/19ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಸಾಧನೆ ಮಾಡಿತ್ತು. ಮೊಟ್ಟ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ ಆಸಿಸ್ ತಂಡವನ್ನು ಮಣಿಸುವಲ್ಲಿ ಅದು ಯಶಸ್ವಿಯಾಗಿತ್ತು. ಅಂದು ಭಾರತ ಆಸ್ಟ್ರೇಲಿಯಾ ತಂಡಕ್ಕಿಂತ ಬ್ಯಾಟ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲೂ ಸಾಕಷ್ಟು ಮುಂದಿತ್ತು ಎಂದಿದ್ದಾರೆ.

ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಎಚ್ಚರಿಕೆ ನೀಡಿದ ಹರ್ಭಜನ್ ಸಿಂಗ್ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಎಚ್ಚರಿಕೆ ನೀಡಿದ ಹರ್ಭಜನ್ ಸಿಂಗ್

"ಅಂದು ಭಾರತ ತಂಡ ಬ್ಯಾಟ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲೂ ಸರಣಿಯುದ್ದಕ್ಕೂ ಆಸ್ಟ್ರೇಲಿಯಾಗಿಂತ ಮುಂದಿತ್ತು. ನಾವು ಈ ಸಂಗತಿಯನ್ನು ಮರೆಮಾಚಲು ಖಂಡಿತಾ ಸಾಧ್ಯವಿಲ್ಲ. ಆಟದ ಎಲ್ಲಾ ವಿಚಾರಗಳಲ್ಲೂ ನಾವು ಉತ್ತಮವಾಗಿರಬೇಕಾಗ ಅವಶ್ಯಕತೆಯಿದೆ. ಈ ಬೇಸಿಗೆಯಲ್ಲಿ ಹಿಂದಿನ ಬಾರಿ ಆದ ತಪ್ಪನ್ನು ತಿದ್ದಿಕೊಳ್ಳಲು ಅವಕಾಶವಿದೆ" ಎಂದು ಸ್ಟಾರ್ಕ್ ಅಭಿಪ್ರಾಯಪಟ್ಟಿದ್ದಾರೆ.

ಪಿಂಕ್ ಬಾಲ್ ಟೆಸ್ಟ್ ಕ್ರಿಕೆಟ್ ಹೊಂದಿರುವ ಅಲ್ಪ ಇತಿಹಾಸದಲ್ಲಿ ಆಸ್ಟ್ರೇಲಿಯಾದ ವೇಗಿ ಸ್ಟಾರ್ಕ್ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಪಿಂಕ್ ಬಾಲ್‌ನಲ್ಲಿ 42 ವಿಕೆಟ್ ಪಡೆದು ಸ್ಟಾರ್ಕ್ ಮಿಂಚಿದ್ದಾರೆ. ಸದ್ಯ ಆಸ್ಟ್ರೇಲಿಯಾ ತಂಡವನ್ನು ಸೇರಿಕೊಂಡಿರುವ ಸ್ಟಾರ್ಕ್ ಅಡಿಲೇಡ್ ಟೆಸ್ಟ್‌ಗೆ ಸಿದ್ಧರಾಗುತ್ತಿದ್ದಾರೆ. ಮೊದಲ ಟೆಸ್ಟ್ ಪಂದ್ಯ ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿರಲಿದೆ.

ಕ್ಯಾಚ್‌ ಹಿಡಿಯಲು ಅಡ್ಡಬಂದ ಸಹ ಆಟಗಾರನಿಗೆ ಬಾರಿಸಲು ಮುಂದಾದ ಮುಷ್ಫೀಕರ್ ರಹೀಮ್: ವಿಡಿಯೋಕ್ಯಾಚ್‌ ಹಿಡಿಯಲು ಅಡ್ಡಬಂದ ಸಹ ಆಟಗಾರನಿಗೆ ಬಾರಿಸಲು ಮುಂದಾದ ಮುಷ್ಫೀಕರ್ ರಹೀಮ್: ವಿಡಿಯೋ

ಆಸ್ಟ್ರೇಲಿಯಾ ಹಾಗೂ ಭಾರತ ಎರಡು ತಂಡಗಳು ಕೂಡ ಈಗ ಅಡಿಲೇಡ್ ಅಂಗಳವನ್ನು ತಲುಪಿದ್ದು ಕಠಿಣ ಅಭ್ಯಾಸವನ್ನು ನಡೆಸುತ್ತಿದೆ. ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ಮೂರು ದಿನಗಳ ಎರಡು ಅಭ್ಯಾಸ ಪಂದ್ಯಗಳನ್ನು ಆಡಿಸಲಾಗಿತ್ತು. ಭಾರತ ಎ ಹಾಗೂ ಆಸ್ಟ್ರೇಲಿಯಾ ಎ ತಂಡಗಳ ನಡುವಿನ ಈ ಎರಡು ಅಭ್ಯಾಸ ಪಂದ್ಯಗಳು ಕೂಡ ಡ್ರಾದಲ್ಲಿ ಅಂತ್ಯ ಕಂಡಿದೆ

Story first published: Tuesday, December 15, 2020, 10:06 [IST]
Other articles published on Dec 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X