Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

3 ಶ್ರೀಲಂಕಾ ಆಟಗಾರರ ವಿರುದ್ಧ ಐಸಿಸಿಯಿಂದ ಮ್ಯಾಚ್‌ ಫಿಕ್ಸಿಂಗ್ ತನಿಖೆ

Three cricketers under ICC investigation for match-fixing

ಕೊಲಂಬೊ, ಜೂನ್ 4: ಮ್ಯಾಚ್ ಫಿಕ್ಸಿಂಗ್ ಆರೋಪದಡಿಯಲ್ಲಿ ಶ್ರೀಲಂಕಾದ ಮೂವರು ಆಟಗಾರರು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ನಿಂದ ತನಿಖೆಗೆ ಒಳಪಡಲಿದ್ದಾರೆ ಎಂದು ಶ್ರೀಲಂಕಾದ ಕ್ರೀಡಾ ಸಚಿವ ದಲ್ಲಾಸ್ ಅಲಹಪೆರುಮಾ ಬುಧವಾರ (ಜೂನ್ 3) ಹೇಳಿದ್ದಾರೆ.

ಆದರೆ ಅಲಹಪೆರುಮಾ, ತನಿಖೆಗೆ ಒಳಗಾಗಲಿರುವ ಆಟಗಾರರು ಈಗಿರುವ ಸಕ್ರಿಯ ಆಟಗಾರರೋ ಅಥವಾ ಮಾಜಿ ಆಟಗಾರರೋ ಅನ್ನೋದನ್ನು ತಿಳಿಸಿಲ್ಲ. ಕ್ರೀಡೆಯಲ್ಲಿ ಶಿಸ್ತು ಮತ್ತು ಉತ್ತಮ ನಡೆ ಕಡಿಮೆಯಾಗುತ್ತಿರುವುದನ್ನು ನೋಡಲು ನಮಗೆ ವಿಷಾದವಾಗುತ್ತಿದೆ,' ಎಂದವರು ತಿಳಿಸಿದ್ದಾರೆ.

ಐಸಿಸಿ ತನಿಖೆಯಲ್ಲಿ ಪ್ರಸ್ತುತ ಯಾವುದೇ ಆಟಗಾರರು ಭಾಗಿಯಾಗಿಲ್ಲ ಎಂದು ಶ್ರೀಲಂಕಾ ಕ್ರಿಕೆಟ್ ಮಾಹಿತಿ ನೀಡಿದೆ. 'ಗೌರವಾನ್ವಿತ ಸಚಿವರು ಐಸಿಸಿ ಭ್ರಷ್ಟಾಚಾರ ನಿಗ್ರಹ ಘಟಕವು ಮೂವರು ಶ್ರೀಲಂಕಾ ಆಟಗಾರರ ವಿರುದ್ಧ ತನಿಖೆ ಆರಂಭಿಸುವ ಬಗ್ಗೆ ಪ್ರಸ್ತಾಪಿಸಿದ್ದು ಪ್ರಸ್ತುತ ಇರುವ ರಾಷ್ಟ್ರೀಯ ಆಟಗಾರನ್ನುದ್ದೇಶಿಸಿ ಅಲ್ಲ ಎಂದು ಎಸ್‌ಎಲ್‌ಸಿ ಬಲವಾಗಿ ನಂಬಿದೆ,' ಎಂದು ಎಸ್‌ಎಲ್‌ಸಿ ಹೇಳಿಕೆಯಲ್ಲಿ ತಿಳಿಸಿದೆ.

ಡ್ರಗ್ ಆರೋಪದಲ್ಲಿ ಸಿಕ್ಕಿಬಿದ್ದಿರುವ ವೇಗಿ ಶೆಹನ್ ಮಧುಶಂಕಾ ಬಗ್ಗೆ ಮಾತನಾಡಿರುವ ಅಲಹಪೆರುಮಾ, 'ಇದು ತುಂಬಾ ಬೇಸರದ ಸಂಗತಿ. ದೇಶ ಆತನ ಮೇಲೆ ಅಪಾರ ಭರವಸೆಯನ್ನಿಟ್ಟಿತ್ತು,' ಎಂದಿದ್ದಾರೆ. ಮಧುಶಂಕಾ ಅವರ ಜೊತೆಗಿನ ಒಪ್ಪಂದವನ್ನು ಎಸ್‌ಎಲ್‌ಸಿ ರದ್ದುಗೊಳಿಸಿದೆ.

Story first published: Thursday, June 4, 2020, 16:16 [IST]
Other articles published on Jun 4, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+