ಭಾರತ vs ಶ್ರೀಲಂಕಾ: ಅಂತಾರಾಷ್ಟ್ರೀಯ ಟಿಟ್ವೆಂಟಿಗೆ ಪದಾರ್ಪಣೆ ಮಾಡ್ತಾರಾ ವರುಣ್ ಚಕ್ರವರ್ತಿ?

ಭಾರತದ ಯುವ ಆಟಗಾರರಿಗೆ ಅಂತಾರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲು ಸಿಗುತ್ತಿರುವಷ್ಟು ಅವಕಾಶ ಬೇರೆ ಯಾವುದೇ ದೇಶದ ಯುವ ಆಟಗಾರರಿಗೂ ಸಿಗುತ್ತಿಲ್ಲ ಎಂದೇ ಹೇಳಬಹುದು. ಒಂದೇ ಸಮಯದಲ್ಲಿ 2 ಅಂತಾರಾಷ್ಟ್ರೀಯ ತಂಡಗಳನ್ನು ಬೇರೆ ದೇಶಗಳಿಗೆ ಪ್ರವಾಸಕ್ಕೆ ಕಳುಹಿಸುವಷ್ಟು ಅಂತಾರಾಷ್ಟ್ರೀಯ ಕ್ರಿಕೆಟಿಗರು ಭಾರತದಲ್ಲಿದ್ದಾರೆ.

ಶ್ರೀಲಂಕಾ ವಿರುದ್ಧ ಕೆಟ್ಟ ಪ್ರದರ್ಶನ ನೀಡಿದ ಇಬ್ಬರು ಆಟಗಾರರನ್ನು ಹೆಸರಿಸಿದ ವಿರೇಂದ್ರ ಸೆಹ್ವಾಗ್ಶ್ರೀಲಂಕಾ ವಿರುದ್ಧ ಕೆಟ್ಟ ಪ್ರದರ್ಶನ ನೀಡಿದ ಇಬ್ಬರು ಆಟಗಾರರನ್ನು ಹೆಸರಿಸಿದ ವಿರೇಂದ್ರ ಸೆಹ್ವಾಗ್

ಹೀಗೆ ಎರಡೆರಡು ಅಂತಾರಾಷ್ಟ್ರೀಯ ತಂಡಗಳನ್ನು ಕಟ್ಟಿದರೂ ಸಹ ಇನ್ನೂ ಅನೇಕ ಯುವ ಪ್ರತಿಭೆಗಳಿಗೆ ತಂಡದಲ್ಲಿ ಅವಕಾಶ ನೀಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಶ್ರೀಲಂಕಾ ಪ್ರವಾಸ ಕೈಗೊಂಡಿರುವ ವರುಣ್ ಚಕ್ರವರ್ತಿಗೆ ಏಕದಿನ ಸರಣಿಯ 3 ಪಂದ್ಯಗಳಲ್ಲಿ ಯಾವುದೇ ಪಂದ್ಯದಲ್ಲಿಯೂ ಸಹ ಆಡುವ ಅವಕಾಶ ಸಿಗಲೇ ಇಲ್ಲ. ಲಂಕಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಐವರು ಯುವ ಆಟಗಾರರಿಗೆ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡುವ ಅವಕಾಶವನ್ನು ನೀಡಲಾಯಿತು. ಈ ಪಂದ್ಯದ ನಂತರ ವರುಣ್ ಚಕ್ರವರ್ತಿಗೆ ಅವಕಾಶ ನೀಡದಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಬೇಸರ ವ್ಯಕ್ತಪಡಿಸಿದರು.

'ಮೂರ್ಖರಿಗೆ ತಲೆಕೆಡಿಸಿಕೊಳ್ಳಬೇಡಿ'; ಭಾರತದ ವಿರುದ್ಧ ಸರಣಿ ಸೋತ ನಂತರ ಕಿಡಿಕಾರಿದ ಶ್ರೀಲಂಕಾ ಕೋಚ್!'ಮೂರ್ಖರಿಗೆ ತಲೆಕೆಡಿಸಿಕೊಳ್ಳಬೇಡಿ'; ಭಾರತದ ವಿರುದ್ಧ ಸರಣಿ ಸೋತ ನಂತರ ಕಿಡಿಕಾರಿದ ಶ್ರೀಲಂಕಾ ಕೋಚ್!

ಹೀಗೆ ಏಕದಿನ ಸರಣಿಯಲ್ಲಿ ಅವಕಾಶ ಸಿಗದೇ ಬೆಂಚ್ ಕಾದಿರುವ ವರುಣ್ ಚಕ್ರವರ್ತಿಗೆ ಮುಂಬರುವ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಆಡುವ ಅವಕಾಶವನ್ನು ನೀಡುತ್ತಾರಾ ಎಂಬ ಚರ್ಚೆಗಳು ಜೋರಾಗಿವೆ. ವರುಣ್ ಚಕ್ರವರ್ತಿ ಜತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಐಪಿಎಲ್ ಟೂರ್ನಿಗಳಲ್ಲಿ ಮಿಂಚಿರುವ ದೇವದತ್ ಪಡಿಕ್ಕಲ್ ಅವರಿಗೂ ಟಿ ಟ್ವೆಂಟಿ ಸರಣಿಯಲ್ಲಿ ಅವಕಾಶ ಸಿಗಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ.

For Quick Alerts
ALLOW NOTIFICATIONS
For Daily Alerts
Story first published: Saturday, July 24, 2021, 20:00 [IST]
Other articles published on Jul 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X