ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇದೊಂದೆ ನಿಮ್ಮ ಸಾಧನೆಯೆಂದ ಪಾಕ್ ಪತ್ರಕರ್ತನ ಬಾಯ್ಮುಚ್ಚಿದ ವೆಂಟೇಶ್ ಪ್ರಸಾದ್

Former Indian crickter Venkatesh Prasad Reaction goes virul on Only Achievement In His Career

ಐಪಿಎಲ್ ಸಂಭ್ರಮದಲ್ಲಿರುವ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ರಾಹುಲ್ ದ್ರಾವಿಡ್ ಅವರ ಒಂದು ಜಾಹೀರಾತು ಮನಸೂರೆಗೊಳಿಸಿದೆ. 'ಇಂದಿರಾನಗರದ ಗೂಂಡಾ ನಾನು' ಎಂದು ಅಬ್ಬರಿಸಿದ ದ್ರಾವಿಡ್ ಜಾಹೀರಾತಿಗೆ ಸಾಮಾನ್ಯ ಅಭಿಮಾನಿಗಳು ಮಾತ್ರವಲ್ಲ ಕ್ರಿಕೆಟ್, ಸಿನಿಮಾ ತಾರೆಯರು ಕೂಡ ಪ್ರತಿಕ್ರಿಯಿಸುತ್ತಿದ್ದಾರೆ.

ಈ ಮಧ್ಯೆ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಕೂಡ ಇದಕ್ಕೆ ಪೂರಕವಾಗಿ ಟ್ವೀಟ್‌ವೊಂದನ್ನು ಹಾಕಿದ್ದು ಅದಕ್ಕೆ ಪಾಕಿಸ್ತಾನದ ಪತ್ರಕರ್ತನೋರ್ವ ಕೆಣಕುವಂತೆ ಪ್ರತಿಕ್ರಿಯಿಸಿದ್ದರು. ಆದರೆ ಪಾಕ್ ಪತ್ರಕರ್ತನ ಪ್ರತಿಕ್ರಿಯೆಗೆ ಕನ್ನಡಿಗ ವೆಂಕಟೇಶ್ ಪ್ರಸಾದ್ ಉದಾಹರಣೆ ಸಹಿತ ಉತ್ತರ ನೀಡಿದ್ದು ಕೆಣಕಿದ ಪಾಕ್ ಪತ್ರಕರ್ತ ಬಾಯ್ಮುಚ್ಚುವಂತೆ ಮಾಡಿದೆ.

 'ಇಂದಿರಾನಗರದ ಗೂಂಡ ನಾನು' ಎಂದು ಪಾಕಿಸ್ತಾನಕ್ಕೆ ಹಳೇ ಘಟನೆ ನೆನಪಿಸಿದ ಕನ್ನಡಿಗ ವೆಂಕಟೇಶ್ ಪ್ರಸಾದ್ 'ಇಂದಿರಾನಗರದ ಗೂಂಡ ನಾನು' ಎಂದು ಪಾಕಿಸ್ತಾನಕ್ಕೆ ಹಳೇ ಘಟನೆ ನೆನಪಿಸಿದ ಕನ್ನಡಿಗ ವೆಂಕಟೇಶ್ ಪ್ರಸಾದ್

ವಿಡಿಯೋ ಹಂಚಿಕೊಂಡ ವೆಂಕಿ

1996ರ ವಿಶ್ವಕಪ್‌ನಲ್ಲಿ ಪಾಕ್ ಬ್ಯಾಟ್ಸ್‌ಮನ್ ಸೋಹೈಲ್ ತನ್ವೀರ್ ಭಾರತೀಯ ವೇಗಿ ವೆಂಕಟೇಶ್ ಪ್ರಸಾದ್‌ ಅವರನ್ನು ಕೆಣಕಿ ಬಳಿಕ ಮುಂದಿನ ಎಸೆತದಲ್ಲಿ ವಿಕೆಟ್ ಕಳೆದುಕೊಂಡು ಪೆವಿಲಿಯನ್ ಸೇರುವಂತೆ ಮಾಡಿದ್ದು ಈಗ ಇತಿಹಾಸ. ಅಂದು ವೆಂಕಟೇಶ್ ಪ್ರಸಾದ್ ಸೋಹೈಲ್ ತನ್ವೀರ್‌ಗೆ ಪೆವಿಲಿಯನ್‌ಗೆ ದಾರಿ ತೋರಿಸಿದ್ದು ಅಭಿಮಾನಿಗಳು ಈಗಲೂ ಅಂತರ್ಜಾಲದಲ್ಲಿ ವೀಕ್ಷಿಸಿ ಸಂಭ್ರಮಿಸುತ್ತಾರೆ. ಈ ವಿಡಿಯೋವನ್ನು ವೆಂಕಟೇಶ್ ಪ್ರಸಾದ್ ಹಂಚಿಕೊಂಡು ದ್ರಾವಿಡ್ ಅವರ ಜಾಹೀರಾತಿನಲ್ಲಿ ಬರುವಂತೆಯೇ 'ಇಂದಿರಾ ನಗರ್‌ಕಾ ಗೂಂಡಾ ಹೂ ಮೇ" ಎಂಬ ಹ್ಯಾಶ್‌ಟ್ಯಾಗ್‌ ಜೊತೆಗೆ ಹಂಚಿಕೊಂಡಿದ್ದಾರೆ.

ನಿಮ್ಮ ಸಾಧನೆ ಇದೊಂದೆ!

ಈ ವಿಡಿಯೋಗೆ ಪಾಕಿಸ್ತಾನದ ಪತ್ರಕರ್ತ ನಜೀಬ್ ಉಲ್ ಹಸ್ನೈನ್ ಎಂಬಾತ "ವೃತ್ತಿ ಜೀವನದಲ್ಲಿ ಇದೊಂದೆ ಸಾಧನೆ" ಎಂದು ಕೆಣಕುವ ರೀತಿಯಲ್ಲಿ ರೀಟ್ವೀಟ್ ಮಾಡಿದ್ದರು. ಆದರೆ ವೆಂಕಟೇಶ್ ಪ್ರಸಾದ್ ಇದಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರವನ್ನು ನೀಡಿದ್ದಾರೆ.

ಪಾಕಿಸ್ತಾನದ ಸೋಲನ್ನು ನೆನಪಿಸಿದ ಕನ್ನಡಿಗ

"ಇಲ್ಲ ನಜೀಬ್ ಅವರೆ. ಇದಾದ ಬಳಿಕವೂ ಕೆಲ ಸಾಧನೆಯನ್ನು ಮಾಡಿದ್ದೇನೆ. ಇದಾದ ನಂತರ ಇಂಗ್ಲೆಂಡ್‌ನಲ್ಲಿ ನಡೆದ ಮುಂದಿನ 1999ರ ವಿಶ್ವಕಪ್‌ನಲ್ಲಿಯೇ ಪಾಕಿಸ್ತಾನದ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ 27 ರನ್‌ಗಳಿಗೆ 5 ವಿಕೆಟ್ ಪಡೆದಿದ್ದೇನೆ. ಇದರಿಂದಾಗಿ ಭಾರತ ನೀಡಿದ್ದ 228 ರನ್‌ಗಳ ಗುರಿಯನ್ನು ತಲುಪಲು ಪಾಕಿಸ್ತಾನಕ್ಕೆ ಸಾಧ್ಯವಾಗಿರಲಿಲ್ಲ. ಶುಭವಾಗಲಿ" ಎಂದು ಟ್ವೀಟ್‌ನಲ್ಲಿಯೇ ಪ್ರತಿಕ್ರಿಯಿಸಿದರು. ಈ ಪ್ರತಿಕ್ರಿಯೆ ಕೂಡ ಈಗ ಸಾಕಷ್ಟು ವೈರಲ್ ಆಗಿದೆ.

ವೆಂಕಟೇಶ್ ಪ್ರಸಾದ್ ಭಾರತ ತಂಡದ ಪರ ಸಾಧನೆ

ವೆಂಕಟೇಶ್ ಪ್ರಸಾದ್ ಭಾರತ ತಂಡದ ಪರ ಸಾಧನೆ

ವೆಂಕಟೇಶ್ ಪ್ರಸಾದ್ ಭಾರತದ ತಂಡದಲ್ಲಿ 1996ರಿಂದ 2001ರವರೆಗೆ ಆಡಿದ್ದಾರೆ. 33 ಟೆಸ್ಟ್ ಹಾಗೂ 161 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ವೆಂಕಿ 96 ಟೆಸ್ಟ್ ವಿಕೆಟ್ ಹಾಗೂ 196 ಏಕದಿನ ವಿಕೆಟ್ ಕಬಳಿಸಿದ್ದಾರೆ.

Story first published: Sunday, April 11, 2021, 18:35 [IST]
Other articles published on Apr 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X