ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಂದ್ಯದ ನಡುವೆ ಮೈದಾನದಲ್ಲೇ ಮಲಗಿದ ಧೋನಿ ವಿಡಿಯೋ ವೈರಲ್!

ಮೈದಾನದಲ್ಲೇ ಮಲಗಿದ ಮಹೇಂದ್ರ ಸಿಂಗ್ ಧೋನಿ. ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದ ವೇಳೆ ನಡೆದ ಪ್ರಸಂಗ. ಧೋನಿ ಮಲಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್.

ಪಲ್ಲೆಕೆಲೆ, ಆಗಸ್ಟ್ 28: ಭಾನುವಾರ ನಡೆದ ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಕ್ರಿಕೆಟ್ ಪಂದ್ಯದ ವೇಳೆ ಪ್ರೇಕ್ಷಕರು ಗದ್ದಲೆ ಎಬ್ಬಿಸಿದರಂತೆ ಕೆಲ ಕಾಲ ಆಟ ನಿಂತಾಗ, ಭಾರತ ತಂಡದ ವಿಕೆಟ್ ಕೀಪರ್ ಧೋನಿ, ಹಾಗೆ ಸುಮ್ಮನೇ ಮೈದಾನದಲ್ಲೇ ಮಲಗಿಬಿಟ್ಟಿದ್ದರು. ಆ ವಿಡಿಯೋ ಈಗ ಸಾಮಾಜಿಕ ಜಾಲತಾಲಣದಲ್ಲಿ ಕಿಚ್ಚು ಹಚ್ಚಿದೆ.

3ನೇ ಏಕದಿನ ಪಂದ್ಯ, ಶ್ರೀಲಂಕಾಗೆ ಆಘಾತ3ನೇ ಏಕದಿನ ಪಂದ್ಯ, ಶ್ರೀಲಂಕಾಗೆ ಆಘಾತ

ಟ್ವಿಟ್ಟರ್ ನಲ್ಲಂತೂ ಧೋನಿ ಅವರ ಈ 'ಕೂಲ್' ವ್ಯಕ್ತಿತ್ವವನ್ನು ಅನೇಕ ಟ್ವಿಟ್ಟಿಗರು ಮೆಚ್ಚಿಕೊಂಡಿದ್ದಾರೆ. ಇಂಥ ಸ್ಥಿತಪ್ರಜ್ಞತೆ ಇರುವುದರಿಂದಲೇ ಧೋನಿ ಅವರು 13 ವರ್ಷಗಳ ಕಾಲ ಭಾರತ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯವಾಗಿದ್ದು ಎಂದು ಕೊಂಡಾಡಿದ್ದಾರೆ.

ಅಂದಹಾಗೆ, ಧೋನಿ ಹಾಗೆ ಮಲಗಲು ಕಾರಣ. ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ನರೆದಿದ್ದ ಪ್ರೇಕ್ಷಕರ ದಾಂಧಲೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಶ್ರೀಲಂಕಾ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ, 45.1 ಓವರ್ ಗಳಲ್ಲಿ 218 ರನ್ ಗಳಿಸಿ ಜಯದ ಗುರಿ ಮುಟ್ಟಿತು.



ಧೋನಿ ಮಲಗಿದ್ದ ವೇಳೆ ಭಾರತ ಗೆಲುವಿನಂಚಿಗೆ ಬಂದು ಎಲ್ಲಿ ನಿಂತಿತ್ತು, ಜತೆಗೆ ಯಾರಿದ್ದರು, ಧೋನಿ ಹೀಗೆ ಮಲಗಿದ್ದು ಹೇಗೆ ಸಾಮಾಜಿಕ ಜಾಲತಾಣದಲ್ಲಿ ಬಣ್ಣನೆಗೊಳಗಾಗಿದೆ ಎಂಬುದರ ವಿವರ ಇಲ್ಲಿದೆ.
ಸರಣಿ ಜೀವಂತವಾಗಿಡಲು ಲಂಕಾಗಿತ್ತು ಅವಕಾಶ!

ಸರಣಿ ಜೀವಂತವಾಗಿಡಲು ಲಂಕಾಗಿತ್ತು ಅವಕಾಶ!

ಭಾರತಕ್ಕೆ ಪಂದ್ಯ ಗೆಲ್ಲಲು ಇನ್ನು 8 ರನ್ ಬಾಕಿಯಿದ್ದಾಗ ಕ್ರೀಡಾಂಗಣದಲ್ಲಿದ್ದ ಶ್ರೀಲಂಕಾ ತಂಡದ ಬೆಂಬಲಿಗರು ಹತಾಶೆಗೊಂಡರು. ಮೊದಲೆರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ಲಂಕಾಕ್ಕೆ ಸರಣಿಯನ್ನು ಜೀವಂತವಾಗಿಡಲು ಈ ಪಂದ್ಯದಲ್ಲಿ ಗೆಲ್ಲಲೇಬೇಕಿತ್ತು.

ಬಾಟಲಿ ಎಸೆದು ದಾಂಧಲೆ

ಬಾಟಲಿ ಎಸೆದು ದಾಂಧಲೆ

ಆದರೆ, ಅದು ಸೋಲುವುದು ಪಕ್ಕಾ ಆದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಪ್ರೇಕ್ಷಕರು ತಮ್ಮಲ್ಲಿದ್ದ ನೀರಿನ ಬಾಟಲ್ ಗಳನ್ನು ಮೈದಾನದೊಳಕ್ಕೆ ಎಸೆದು ದಾಂಧಲೆ ನಡೆಸಿದರು. ಆ ಹೊತ್ತಿಗೆ, ಭಾರತದ ಪರವಾಗಿ 122 ರನ್ ಗಳಿಸಿದ್ದ ರೋಹಿತ್ ಶರ್ಮಾ, 61 ರನ್ ಗಳಿಸಿದ್ದ ಧೋನಿ ಇದ್ದರು.

ಅಂಪೈರ್ ಗಳ ಬಳಿ ಚರ್ಚೆ

ಅಂಪೈರ್ ಗಳ ಬಳಿ ಚರ್ಚೆ

ಪ್ರೇಕ್ಷಕರ ಗಲಭೆಯಿಂದಾಗಿ, ಪಂದ್ಯವನ್ನು 35 ನಿಮಿಷಗಳ ಕಾಲ ನಿಲ್ಲಿಸಲಾಯಿತು. ಮೊದಲಿಗೆ ಗಲಾಟೆ ನಿಯಂತ್ರಿಸಲು ಕ್ರೀಡಾಂಗಣದ ಭದ್ರತಾ ಸಿಬ್ಬಂದಿ ನಿರತರಾಗಿದ್ದಾಗಲೇ ಪಂದ್ಯವನ್ನು ನಿಲ್ಲಿಸಲಾಗಿತ್ತು. ಫೀಲ್ಡಿಂಗ್ ಮಾಡುತ್ತಿದ್ದ ಲಂಕಾ ಆಟಗಾರರು , ಬ್ಯಾಟ್ಸ್ ಮನ್ ಗಳು ಕ್ರೀಸ್ ನತ್ತ ಬಂದು ಅಂಪೈರ್ ಗಳ ಬಳಿ ಚರ್ಚೆ ನಡೆಸುತ್ತಿದ್ದರು.

ಪುನಃ ಶುರುವಾದ ಆಟ, ಭಾರತದ ಗೆಲುವು

ಪುನಃ ಶುರುವಾದ ಆಟ, ಭಾರತದ ಗೆಲುವು

ಇತ್ತ ಧೋನಿ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ, ಮೈದಾನದಲ್ಲೇ ಬೋರಲಾಗಿ ಮಲಗಿ ಕೊಂಚ ವಿಶ್ರಾಂತಿ ಪಡೆದುಕೊಂಡರು. ಕೆಲ ನಿಮಿಷಗಳ ಬಿಡುವಿನ ನಂತರ, ಗಲಾಟೆ ತಣ್ಣಗಾದ ಮೇಲೆ ಪುನಃ ಆಟ ಶುರುವಾಗಿ ಭಾರತ ಗೆಲುವು ಸಾಧಿಸಿತು. (ಚಿತ್ರ: ಸಮೀರ್ ಅಲ್ಲಾನಾ ಟ್ವಿಟ್ಟರ್ ಖಾತೆ)

ಕೇಜ್ರಿವಾಲ್ ಫೋಟೋ ಹಾಕಿ ಕಿಂಡಲ್

ಅದೆಲ್ಲಾ ಒಂದೆಡೆ ಇರಲಿ. ಧೋನಿ ಮಲಗಿದ್ದನ್ನು ಕೆಲವು ಶ್ಲಾಘಿಸಿದ್ದರೆ, ಧೋನಿಯವರ ಈ ಫೋಟೋವನ್ನು ಯೋಗ ದಿನಾಚರಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಮಲಗಿದ್ದಕ್ಕೆ ಹೋಲಿಸಿದ್ದಾರೆ. ಇನ್ನೂ ಕೆಲವರು, ಧೋನಿ ಪಕ್ಕ ಪೂರ್ತಿ ಬ್ಲಾಂಕೆಟ್ ಹೊದ್ದುಕೊಂಡಿರುವ ಅರವಿಂದ್ ಕೇಜ್ರಿವಾಲ್ ಫೋಟೋ ಹಾಕಿ ಕಿಂಡಲ್ ಮಾಡಿದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X