ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತಮಿಳುನಾಡು ಮಣಿಸಿ 4ನೇ ಬಾರಿಗೆ ವಿಜಯ್ ಹಜಾರೆ ಕಪ್‌ ಗೆದ್ದ ಕರ್ನಾಟಕ!

Vijay Hazare trophy : Karnataka lifts the cup for the 4th time after beating Chennai
Vijay Hazare Trophy 2019, Final: Karnataka Win Fourth Title

ಬೆಂಗಳೂರು, ಅಕ್ಟೋಬರ್ 25: ವಿಜಯ್ ಹಜಾರೆ ಟ್ರೋಫಿ 2019ರಲ್ಲಿ ಕರ್ನಾಟಕ ತಂಡ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಅಭಿಮನ್ಯು ಮಿಥುನ್ ಅದ್ಭುತ ಬೌಲಿಂಗ್, ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಆಕರ್ಷಕ ಬ್ಯಾಟಿಂಗ್‌ನಿಂದ ರಾಜ್ಯ ತಂಡ 4ನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿ ಎತ್ತಿದೆ.

ಬಿಸಿಸಿಐ ಅಧ್ಯಕ್ಷರಾದ ಬೆನ್ನಲ್ಲೇ ಮಹತ್ವದ ಹೆಜ್ಜೆಯನ್ನಿಟ್ಟ ಸೌರವ್ ಗಂಗೂಲಿಬಿಸಿಸಿಐ ಅಧ್ಯಕ್ಷರಾದ ಬೆನ್ನಲ್ಲೇ ಮಹತ್ವದ ಹೆಜ್ಜೆಯನ್ನಿಟ್ಟ ಸೌರವ್ ಗಂಗೂಲಿ

ಅಕ್ಟೋಬರ್ 25ಕ್ಕೆ 30ನೇ ವರ್ಷದ ಹುಟ್ಟುಹಬ್ಬ ಆಚರಿಸುತ್ತಿರುವ ಅಭಿಮನ್ಯು ಮಿಥುನ್ ಈ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದರು. ಇನ್ನು ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಅಜೇಯ ಅರ್ಧ ಶತಕ ಬಾರಿಸಿ ತಂಡದ ಗೆಲುವನ್ನು ಬರೆದರು.

ಪಂದ್ಯದ ವೇಳೆ ವಾಟರ್‌ ಬಾಯ್‌ ಆಗಿ ಮೈದಾನಕ್ಕಿಳಿದ ಆಸ್ಟ್ರೇಲಿಯಾ ಪ್ರಧಾನಿ!ಪಂದ್ಯದ ವೇಳೆ ವಾಟರ್‌ ಬಾಯ್‌ ಆಗಿ ಮೈದಾನಕ್ಕಿಳಿದ ಆಸ್ಟ್ರೇಲಿಯಾ ಪ್ರಧಾನಿ!

ಹಿಂದಿನ ಬಾರಿ ಮುಂಬೈ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ಅಪರಾಜಿತ್ ಅರ್ಧಶತಕ

ಅಪರಾಜಿತ್ ಅರ್ಧಶತಕ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್ 25) ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ ಇಳಿಸಲ್ಪಟ್ಟಿದ್ದ ತಮಿಳುನಾಡು ತಂಡ, ಅಭಿನವ್ ಮುಕುಂದ್ 85, ಬಾಬಾ ಅಪರಾಜಿತ್ 66, ವಿಜಯ್ ಶಂಕರ್ 38, ಶಾರುಖ್ ಖಾನ್ 27 ರನ್‌ ನೆರವಿನೊಂದಿಗೆ 49.5 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದು 252 ರನ್ ಮಾಡಿತ್ತು.

ಮಿಥುನ್‌ಗೆ ಹ್ಯಾಟ್ರಿಕ್ ವಿಕೆಟ್

ಮಿಥುನ್‌ಗೆ ಹ್ಯಾಟ್ರಿಕ್ ವಿಕೆಟ್

ತಮಿಳುನಾಡು ಇನ್ನಿಂಗ್ಸ್‌ನಲ್ಲಿ ಮಿಥುನ್, ಕ್ರಮವಾಗಿ ಮುರುಳಿ ವಿಜಯ್, ವಿಜಯ್ ಶಂಕರ್, ಶಾರುಖ್ ಖಾನ್, ಎಂ ಮೊಹಮ್ಮದ್ ಮತ್ತು ಮುರುಗನ್ ಅಶ್ವಿನ್ ವಿಕೆಟ್‌ಗಳನ್ನು ಮುರಿದರು. ಕೊನೇ ಓವರ್‌ ಅಂದರೆ 49.3, 49.4, 49.5ನೇ ಓವರ್‌ನಲ್ಲಿ ಮಿಥುನ್‌ಗೆ ಹ್ಯಾಟ್ರಿಕ್ ವಿಕೆಟ್ ಲಭಿಸಿತು. ವಿಜಯ್ ಹಜಾರೆ ಫೈನಲ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮೆರೆದ ಮೊದಲ ಕರ್ನಾಟಕ ಆಟಗಾರ ಅಭಿಮನ್ಯು.

ರಾಹುಲ್-ಮಯಾಂಕ್ ಬ್ಯಾಟಿಂಗ್

ರಾಹುಲ್-ಮಯಾಂಕ್ ಬ್ಯಾಟಿಂಗ್

ಗುರಿ ಬೆಂಬತ್ತಿದ ಕರ್ನಾಟಕ, ಕೆಎಲ್ ರಾಹುಲ್ 52 (72 ಎಸೆತ), ಮಯಾಂಕ್ ಅಗರ್ವಾಲ್ 69 (55 ಎಸೆತ), ದೇವದತ್ ಪಡಿಕ್ಕಲ್ 11 ರನ್‌ನೊಂದಿಗೆ 23 ಓವರ್‌ಗೆ 1 ವಿಕೆಟ್ ನಷ್ಟದಲ್ಲಿ 146 ರನ್ ಮಾಡಿತು. ಅನಂತರ ಮಳೆ ಸುರಿದಿದ್ದರಿಂದ ವಿಜೆಡಿ (ವಿ ಜಯದೇವನ್) ನಿಯಮದ ಆಧಾರದಲ್ಲಿ ಕರ್ನಾಟಕ 60 ರನ್‌ ಗೆಲುವನ್ನಾಚರಿಸಿತು (ಈ ನಿಯಮದ ಪ್ರಕಾರ ಕರ್ನಾಟಕ 23 ಓವರ್‌ಗೆ 86 ರನ್ ಬಾರಿಸಬೇಕಿತ್ತು).

4ನೇ ಬಾರಿಗೆ ಚಾಂಪಿಯನ್

4ನೇ ಬಾರಿಗೆ ಚಾಂಪಿಯನ್

ತಮಿಳುನಾಡು ಇನ್ನಿಂಗ್ಸ್‌ನಲ್ಲಿ ಕರ್ನಾಟಕದ ಅಭಿಮನ್ಯು ಮಿಥುನ್ 5 (34 ರನ್), ವಿ ಕೌಶಿಕ್ 2, ಪ್ರತೀಕ್ ಜೈನ್ 1, ಕೃಷ್ಣಪ್ಪ ಗೌತಮ್ 1 ವಿಕೆಟ್ ಪಡೆದರು. ಕರ್ನಾಟಕ ತಂಡ 2013-14, 2014-15, 2017-18 ಮತ್ತು 2019-20 ಸೇರಿ ಒಟ್ಟಿಗೆ 4 ಬಾರಿ ಪ್ರಶಸ್ತಿ ಜಯಿಸಿದಂತಾಗಿದೆ.

Story first published: Friday, October 25, 2019, 19:55 [IST]
Other articles published on Oct 25, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X