Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಜಯ್ ಹಜಾರೆ ಟ್ರೋಫಿ: ಬಿಹಾರ ಆಟಗಾರನಿಗೆ ಕೊರೊನಾ ಸೋಂಕು

Vijay Hazare Trophy: Bihar player tests positive for coronavirus

ಬೆಂಗಳೂರು: ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಆಡಿದ್ದ ಒಬ್ಬ ಬಿಹಾರದ ಆಟಗಾರನಿಗೆ ಕೊರೊನಾವೈರಸ್ ಸೋಂಕು ಇರುವುದು ಪತ್ತೆಯಾಗಿದೆ. ಹೀಗಾಗಿ ಪಂದ್ಯದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಆಟಗಾರರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.

'ಒಬ್ಬ ಆಟಗಾರನಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಆತನನ್ನು ಇತರ ಆಟಗಾರರಿಂದ ಪ್ರತ್ಯೇಕ ಇರಿಸಲಾಗಿದೆ. ಸೋಂಕಿತ ಆಟಗಾರ ಸದ್ಯ ಬೆಂಗಳೂರಿನಲ್ಲಿದ್ದಾರೆ. ಅವರು ಅವರ ಊರಿಗೆ ಪ್ರಯಾಣಿಸುವುದು ಸಾಧ್ಯವಿಲ್ಲ,' ಎಂದು ಬಿಹಾರ ರಾಜ್ಯ ಕ್ರಿಕೆಟ್ ಅಸೋಸಿಯೇಶನ್‌ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಫೆಬ್ರವರಿ 22ರ ಸೋಮವಾರ ನಡೆದ ವಿಜಯ್ ಹಜಾರೆ ಟ್ರೋಫಿ ಎಲೈಟ್ ಗ್ರೂಪ್ ಸಿ, ರೌಂಡ್ 2 ಪಂದ್ಯದಲ್ಲಿ ಬಿಹಾರ ಮತ್ತು ಕರ್ನಾಟಕ ತಂಡಗಳು ಕಾದಾಡಿದ್ದವು. ಈ ಪಂದ್ಯದಲ್ಲಿ ಕರ್ನಾಟಕ ತಂಡ 267 ರನ್‌ಗಳ ಭರ್ಜರಿ ಗೆಲುವು ಕಂಡಿತ್ತು.

ಪಂದ್ಯದಲ್ಲಿ ಪಾಲ್ಗೊಂಡವರಲ್ಲಿ ಒಬ್ಬನಿಗೆ ಕೊರೊನಾ ದೃಢಪಟ್ಟಿರುವುದರಿಂದ ಫೆಬ್ರವರಿ 23ರ ಮಂಗಳವಾರ ಎರಡೂ ತಂಡಗಳ ಆಟಗಾರರು ಪರೀಕ್ಷೆಗೆ ಒಳಗಾಗಿದ್ದಾರೆ. ಸಂಜೆಯೊಳಗೆ ಫಲಿತಾಂಶ ಬರುವ ನಿರೀಕ್ಷೆಯಿದೆ ಎನ್ನಲಾಗಿದೆ. ಒಟ್ಟು 22 ಮಂದಿ ಆಟಗಾರರು ಪರೀಕ್ಷೆಗೆ ಒಳಪಟ್ಟಿದ್ದರು.

Story first published: Tuesday, February 23, 2021, 15:17 [IST]
Other articles published on Feb 23, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+