ಲಿಯೋನೆಲ್ ಮೆಸ್ಸಿಯನ್ನು ಹಿಂದಿಕ್ಕಿದ ವಿರಾಟ್ ಕೊಹ್ಲಿ

Posted By:

ನವದೆಹಲಿ, ಅಕ್ಟೋಬರ್ 26: : ಸಾಧನೆಗಳ ಮೇಲೆ ಸಾಧನೆಗಳನ್ನು ಮಾಡುತ್ತಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸಾಧನೆಗಳ ಪಟ್ಟಿಗೆ ಇನ್ನೊಂದು ಸೇರ್ಪಡೆಯಾಗಿದೆ.

ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ 'ವಿಶ್ವದ ಅತ್ಯಂತ ಮೌಲ್ಯಯುತ ಕ್ರೀಡಾಪಟುಗಳ' ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಅರ್ಜೆಂಟೀನಾದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರನ್ನು ಹಿಂದಿಕ್ಕಿದ್ದಾರೆ.

Virat Kohli Has Overtaken Lionel Messi In This Forbes List

ಆಟಗಾರರ ವೇತನ, ಬೋನಸ್ ಸೇರಿದಂತೆ ಎಲ್ಲ ಹೂಡಿಕೆಗಳಿಂದ ಬರುವ ಆದಾಯವನ್ನು ಲೆಕ್ಕಹಾಕಿ ಈ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದೆ.

ಅತ್ಯಮೂಲ್ಯ ಕ್ರೀಡಾಪಟುಗಳ ಪಟ್ಟಿಯಲ್ಲಿ ಸ್ವಿಜರ್ಲ್ಯಾಂಡಿನ ಸ್ಟಾರ್ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ 7ನೇ ಸ್ಥಾನ ಪಡೆದಿದ್ದು, ಮೆಸ್ಸಿ 9ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ.

ಟಾಪ್ 10 ಅತ್ಯಮೂಲ್ಯ ಕ್ರೀಡಾಪಟುಗಳ ಪಟ್ಟಿ ಇಂತಿದೆ
1. ರೋಜರ್ ಫೆಡರರ್ - 37.2 ಮಿಲಿಯನ್ ಡಾಲರ್
2. ಲೆಬ್ರೋನ್ ಜೇಮ್ಸ್ - 33.4 ಮಿಲಿಯನ್ ಡಾಲರ್
3. ಉಸೇನ್ ಬೋಲ್ಟ್ - 27 ಮಿಲಿಯನ್ ಡಾಲರ್
4. ಕ್ರಿಶ್ಚಿಯಾನೋ ರೊನಾಲ್ಡೊ - 21.5 ಮಿಲಿಯನ್ ಡಾಲರ್
5. ಫಿಲ್ ಮೈಕ್ಲೆಸನ್ - 19.6 ಮಿಲಿಯನ್ ಡಾಲರ್
6. ಟೈಗರ್ ವುಡ್ಸ್ - 16.6 ಮಿಲಿಯನ್ ಡಾಲರ್
7. ವಿರಾಟ್ ಕೊಹ್ಲಿ - 14.5 ಮಿಲಿಯನ್ ಡಾಲರ್
8. ರೋರಿ ಮೆಕ್ರಾಯ್ - 13.6 ಮಿಲಿಯನ್ ಡಾಲರ್
8. ಲಿಯೋನೆಲ್ ಮೆಸ್ಸಿ -13.5 ಮಿಲಿಯನ್ ಡಾಲರ್
10. ಸ್ಟೆಫ್ ಕರ್ರಿ - 13.4 ಮಿಲಿಯನ್ ಡಾಲರ್.

Story first published: Thursday, October 26, 2017, 16:05 [IST]
Other articles published on Oct 26, 2017
Please Wait while comments are loading...